Advertisment

ಇರಾನ್‌- ಇಸ್ರೇಲ್, ಅಮೆರಿಕಾ ಯುದ್ಧ: ಭಾರತದಲ್ಲಿ ಮೋದಿ ಅಧ್ಯಕ್ಷತೆಯಲ್ಲಿ ಭದ್ರತಾ ಸಭೆ, ಏನು ತೀರ್ಮಾನ?

ಇರಾನ್ ಮೇಲೆ ಇಸ್ರೇಲ್, ಅಮೆರಿಕಾ ದೇಶಗಳು ಮುಗಿಬಿದ್ದಿವೆ. ಇರಾನ್‌ಗೆ ಉಸಿರಾಡಲು ಕೂಡ ಅವಕಾಶ ನೀಡುತ್ತಿಲ್ಲ. ಆದರೇ, ಯುದ್ಧದಿಂದ ಇರಾನ್, ಇಸ್ರೇಲ್ ಹಾಗೂ ಮಧ್ಯಪ್ರಾಚ್ಯದಲ್ಲಿರುವ ಭಾರತೀಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ಕಳೆದ ರಾತ್ರಿ ಮೋದಿ ಅಧ್ಯಕ್ಷತೆಯ ಸಭೆಯಲ್ಲಿ ಚರ್ಚೆಯಾಗಿದೆ.

author-image
Chandramohan
PM MODI SECURITY MEETING (1)
Advertisment

ಕಳೆದ ರಾತ್ರಿ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಕ್ಯಾಬಿನೆಟ್ ಭದ್ರತಾ ಸಮಿತಿಯ ಸಭೆ ನಡೆದಿದೆ. 
ಸಭೆಯಲ್ಲಿ ಮಧ್ಯಪ್ರಾಚ್ಯ ಸ್ಥಿತಿಗತಿಯ ಬಗ್ಗೆ ಗಂಭೀರ ಚರ್ಚೆಯಾಗಿದೆ.  ಹೋರ್ಮುಜ್ ಜಲಸಂಧಿ ಬಂದ್ ಮಾಡಿರುವುದರಿಂದ ಭಾರತ ದೇಶದ ಕಚ್ಚಾತೈಲ ಸ್ಟಾಕ್ ಬಗ್ಗೆ ಚರ್ಚೆಯಾಗಿದೆ. 
ಇಸ್ರೇಲ್ ನಲ್ಲಿ 40 ಸಾವಿರ ಭಾರತೀಯರಿದ್ದಾರೆ.  ಇನ್ನೂ ಇರಾನ್ ನಲ್ಲಿ 3 ಸಾವಿರ ವಿದ್ಯಾರ್ಥಿಗಳು ಸೇರಿದಂತೆ 10 ಸಾವಿರ ಭಾರತೀಯ ನಾಗರಿಕರಿದ್ದಾರೆ.  ಗಲ್ಪ್ ರಾಷ್ಟ್ರ ಮತ್ತು ಪಶ್ಚಿಮ ಏಷ್ಯಾದಲ್ಲಿ 90 ಲಕ್ಷ ಭಾರತೀಯರಿದ್ದಾರೆ. 
ಹೀಗಾಗಿ ಈಗ ಇಸ್ರೇಲ್, ಅಮೆರಿಕಾ ಹಾಗೂ ಇರಾನ್ ಯುದ್ಧದಿಂದ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರಿಗೆ ನೆರವು ನೀಡುವ ಬಗ್ಗೆ ಚರ್ಚೆಯಾಗಿದೆ.  ಈಗಾಗಲೇ ವಿದೇಶಾಂಗ ಇಲಾಖೆಯು ತನ್ನ ರಾಯಭಾರ ಕಚೇರಿ ಮೂಲಕ ಭಾರತದ ನಾಗರಿಕರ ಜೊತೆ ಸಂಪರ್ಕದಲ್ಲಿದೆ. 
ಮಧ್ಯಪ್ರಾಚ್ಯದ ಭಾರತೀಯರ ಸುರಕ್ಷತೆ ಬಗ್ಗೆ ಪ್ರಧಾನಿ ಮೋದಿ ಅಧ್ಯಕ್ಷತೆಯ ಸಭೆಯಲ್ಲಿ ಚರ್ಚೆಯಾಗಿದೆ.  ಬದಲಾಗುತ್ತಿರುವ ಪರಿಸ್ಥಿತಿಯ ಹಿನ್ನಲೆಯಲ್ಲಿ ಭಾರತ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಚರ್ಚೆಯಾಗಿದೆ.  ಭಾರತೀಯರನ್ನು ಈಗಿನ ಸ್ಥಿತಿಯಲ್ಲಿ ಏರ್ ಲಿಫ್ಟ್ ಮಾಡಬೇಕಾ ಇಲ್ಲವೇ ಸ್ಪಲ್ಪ ದಿನ ಕಾಯಬೇಕಾ ಎಂಬ ಬಗ್ಗೆ ಚರ್ಚೆಯಾಗಿದೆ.  ಪ್ರಧಾನಿ ಮೋದಿ, ರಾಜನಾಥ್ ಸಿಂಗ್, ಜೈಶಂಕರ್, ಅಜಿತ್ ದೋವಲ್ ಸೇರಿದಂತೆ ಪ್ರಮುಖರು ಸಭೆಯಲ್ಲಿ ಭಾಗಿಯಾಗಿದ್ದರು. 

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

MODI CHAIRED HIGH LEVEL SECURITY MEETING
Advertisment
Advertisment
Advertisment