/newsfirstlive-kannada/media/media_files/2025/08/22/irctc-tour-packages-2025-08-22-16-16-40.jpg)
ಐಆರ್‌ಸಿಟಿಸಿ ಯಿಂದ ಚಾರ್ ಧಾಮ್ ಟೂರ್ ಪ್ಯಾಕೇಜ್
ಐಆರ್‌ಸಿಟಿಸಿ ವಿಶೇಷ ಚಾರ್ ಧಾಮ್ ಟೂರ್ ಪ್ಯಾಕೇಜ್ ಅನ್ನು ಹಮ್ಮಿಕೊಂಡಿದೆ. ಚಾರ್ ಧಾಮ್ ಪವಿತ್ರ ಸ್ಥಳಗಳಿಗೆ ಭೇಟಿ ನೀಡುವ ಭಕ್ತಾದಿಗಳಿಗಾಗಿ ಚಾರ್ ಧಾಮ್ ಟೂರ್ ಆಯೋಜಿಸಿದೆ. ಇಂಡಿಯನ್ ರೈಲ್ವೇ ಕೇಟರಿಂಗ್ ಅಂಡ್ ಟೂರಿಸಂ ಕಾರ್ಪೋರೇಷನ್(IRCTC) ಭಕ್ತಾದಿಗಳು ಮತ್ತು ಪ್ರವಾಸಿಗರು, ಯಾತ್ರಾರ್ಥಿಗಳಿಗಾಗಿ ವಿಶೇಷ ಚಾರ್ ಧಾಮ್ ಟೂರ್ ಆಯೋಜಿಸಿದೆ. ಚಾರ್ ಧಾಮ್ ಅಂದರೇ, ಉತ್ತರಾಖಂಡ್ ಗಂಗೋತ್ರಿ, ಯಮುನೋತ್ರಿ, ಕೇದಾರನಾಥ್ ಮತ್ತು ಬದರಿನಾಥ್ ಮಾತ್ರವಲ್ಲ. ದೇಶದ ನಾಲ್ಕು ದಿಕ್ಕಿನಲ್ಲಿ ಪುಣ್ಯಕ್ಷೇತ್ರಗಳ ಚಾರ್ ಧಾಮ್ ಕೂಡ ಆಗಿದೆ.
ಸೆಪ್ಟೆಂಬರ್ 5 ರಂದು ಆರಂಭವಾಗುವ ಚಾರ್ ಧಾಮ್ ಯಾತ್ರೆಯು 17 ದಿನಗಳ ಕಾಲ ನಡೆಯಲಿದೆ. ಉತ್ತರದಲ್ಲಿ ಬದರಿನಾಥ್, ಪೂರ್ವದಲ್ಲಿ ಪುರಿ ಜಗನ್ನಾಥ್ ಮತ್ತು ದಕ್ಷಿಣದಲ್ಲಿ ರಾಮೇಶ್ವರ ಹಾಗೂ ಪಶ್ಚಿಮದಲ್ಲಿ ದ್ವಾರಕಗೆ ಭಕ್ತಾದಿಗಳನ್ನು ಕರೆದುಕೊಂಡು ಹೋಗಲಾಗುತ್ತೆ.
ಈ ಟೂರ್ ಅನ್ನು ಭಾರತ್ ಗೌರವ್ ಡೀಲಕ್ಸ್ ಎಸಿ ಟೂರಿಸ್ಟ್ ಟ್ರೇನ್ ನಲ್ಲಿ ಆಯೋಜಿಸಲಾಗುತ್ತಿದ್ದು, ಭಕ್ತಾದಿಗಳಿಗೆ ಕಂಫರ್ಟಬಲ್ ಮತ್ತು ಸುಖಸೀನ ಅನುಭವ ಸಿಗಲಿದೆ.
ಕೇಂದ್ರ ಸರ್ಕಾರದ ದೇಖೋ ಅಪ್ನಾ ದೇಶ ಮತ್ತು ಏಕ ಭಾರತ್ , ಶ್ರೇಷ್ಠ ಭಾರತ್ ಅಭಿಯಾನಕ್ಕೆ ಪೂರಕವಾಗಿ ದೇಶೀಯ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಈ ಟೂರ್ ಆಯೋಜಿಸಲಾಗುತ್ತಿದೆ.
ಟೂರ್ ಗೆ ಒಬ್ಬರಿಗೆ ಎಷ್ಟು ವೆಚ್ಚವಾಗುತ್ತೆ?
ವಿವಿಧ ಕ್ಲಾಸ್ ಟೂರ್ ಗಳಲ್ಲಿ ಭಕ್ತಾದಿಗಳು ಆಯ್ಕೆ ಮಾಡಿಕೊಳ್ಳಬಹುದು.
3ಎಸಿ- 1,26,980 ರೂಪಾಯಿ.
2ಎಸಿ- 1,48,885 ರೂಪಾಯಿ.
1ಎಸಿ ಕ್ಯಾಬಿನ್- 1,77,640 ರೂಪಾಯಿ
1ಎಸಿ ಕೂಪ್- 1,92,025 ರೂಪಾಯಿ.
ಇನ್ನೂ ಈ ಟೂರ್ ಪ್ಯಾಕೇಜ್ ನಲ್ಲಿ ರೈಲು ಟ್ರಾವೆಲ್, ಎಸಿ ಹೋಟೇಲ್ ನಲ್ಲಿ ವಸತಿ ವ್ಯವಸ್ಥೆ, ವೆಜಿಟೇರಿಯನ್ ಊಟ, ತಿಂಡಿ ವ್ಯವಸ್ಥೆ, ಎಸಿ ವಾಹನಗಳಲ್ಲಿ ಸ್ಥಳ ವೀಕ್ಷಣೆ, ಟ್ರಾವೆಲ್ ಇನ್ಸೂರೆನ್ಸ್ ಮತ್ತು ಟೂರ್ ಮ್ಯಾನೇಜರ್ ಸೇವೆ ಕೂಡ ಸೇರಿರುತ್ತೆ.
ಹೇಗೆ ಬುಕ್ ಮಾಡುವುದು?
ಐಆರ್‌ಸಿಟಿಸಿ ವೆಬ್ ಸೈಟ್ ನಲ್ಲಿ ಸೀಟು ಬುಕ್ ಮಾಡಬಹುದು. ಮೊದಲು ಬಂದವರಿಗೆ ಮೊದಲ ಆದ್ಯತೆ ಅನುಸಾರ ಮೊದಲು ಬುಕ್ ಮಾಡಿದವರಿಗೆ ಸೀಟು ಸಿಗಲಿದೆ. ಪ್ರಯಾಣಿಕರು, ದೆಹಲಿಯ ಸಪ್ಧರ್ ಜಂಗ್, ಗಾಜಿಯಾಬಾದ್, ಮೀರತ್ ನಗರ ಹಾಗೂ ಮುಜಾಫರ್ ನಗರದಲ್ಲಿ ರೈಲು ಹತ್ತಿ ಟೂರ್ ಗೆ ಹೋಗಬಹುದು. ಸೆಪ್ಟೆಂಬರ್ 5 ರಿಂದ ಯಾತ್ರಾರ್ಥಿಗಳ ಪ್ರಯಾಣ ಆರಂಭವಾಗುತ್ತೆ.
Char Dham Yatra by Bharat Gaurav Deluxe AC Tourist Train.
— IRCTC Bharat Gaurav Tourist Train (@IR_BharatGaurav) August 14, 2025
Departure: Ex-Delhi Safdarjung
Duration: 16 Nights / 17 Days
Departure Date: 05.09.2025
Price: ₹1,26,980/-
Book Now: https://t.co/JOlyxrLHeS
(package Code=CDBG29)@RailMinIndia@GujaratTourismpic.twitter.com/MHKuroZT5b
ಈ ಲಿಂಕ್ ನಲ್ಲಿರುವ ನೀಡಿರುವ ವೆಬ್ ಸೈಟ್ ಭೇಟಿ ನೀಡಿ ಸೀಟುಗಳನ್ನು ಯಾತ್ರಾರ್ಥಿಗಳು ಬುಕ್ ಮಾಡಬಹುದು.
ಯಾವ್ಯಾವ ಸ್ಥಳಗಳಿಗೆ ಭೇಟಿ
ಉತ್ತರ ಭಾರತ- ಬದರಿನಾಥ್, ಜೋಷಿಮಠ, ಬದರಿನಾಥ್ ದೇವಾಲಯ, ಮಾನಾ ಗ್ರಾಮ, ರಾಮಜುಲಾ, ತ್ರಿವೇಣಿ ಘಾಟ್
ಪೂರ್ವ ಭಾರತ- ವಾರಣಾಸಿ, ಕಾಶಿ ವಿಶ್ವನಾಥ್ ದೇವಾಲಯ, ಕಾಶೀ ಕಾರಿಡಾರ್.
ಪೂರ್ವ ಮತ್ತು ಕರಾವಳಿ-- ಪುರಿ, ಜಗನ್ನಾಥ ದೇವಾಲಯ, ಪುರಿ ಬೀಚ್, ಕೋನಾರ್ಕ್ ಸೂರ್ಯ ದೇವಾಲಯ, ಚಂದ್ರಬಾಗ್ ಬೀಚ್.
ದಕ್ಷಿಣ ಮತ್ತು ಪಶ್ಚಿಮ ಭಾರತ--ರಾಮೇಶ್ವರಂ ರಾಮನಾಥ ಸ್ವಾಮಿ ದೇವಾಲಯ, ಧನುಷ್ಕೋಟಿ, ಪುಣೆಯ ಭೀಮಾಶಂಕರ್ ದೇವಾಲಯ, ತ್ರಯಂಬಕೇಶ್ವರ ಜ್ಯೋತಿರ್ಲೀಂಗ, ದ್ವಾರಕದ ದ್ವಾರಕಾಧೀಶ ದೇವಾಲಯ, ನಾಗೇಶ್ವರ ಜ್ಯೋತಿರ್ಲಿಂಗ, ಬೇಟ್ ದ್ವಾರಕ.
ಈ ಎಲ್ಲ ಸ್ಥಳಗಳಿಗೆ ಭೇಟಿ ನೀಡಿ ರೈಲು ದೆಹಲಿಗೆ 17ನೇ ದಿನ ವಾಪಸ್ ಆಗಲಿದೆ.
ಟ್ರೇನ್ ನಲ್ಲಿ ಅತ್ಯಾಧುನಿಕ ಸೌಲಭ್ಯಗಳು ಇರಲಿವೆ. ಡೈನಿಂಗ್ ರೆಸ್ಟೋರೆಂಟ್, ಷೋವರ್ ಕ್ಯೂಬಿಕಲ್ಸ್, ಸೆನ್ಸಾರ್ ಆಧರಿತ ವಾಷ್ ರೂಮು, ಕಾಲಿನ ಮಸಾಜ್ ಸೌಲಭ್ಯವೂ ಇದೆ. ಸುರಕ್ಷತೆಗಾಗಿ ರೈಲಿನಲ್ಲಿ ಸಿಸಿಟಿವಿ ಕ್ಯಾಮರಾ, ಪ್ರತಿ ರೈಲು ಕೋಚ್ ಗೂ ಭದ್ರತಾ ಸಿಬ್ಬಂದಿ ಇರಲಿದ್ದಾರೆ. ಪ್ರಯಾಣಿಕರು ತಮ್ಮ ಆರ್ಥಿಕ ಸ್ಥಿತಿಗತಿ, ತಮ್ಮ ಅನುಕೂಲಕ್ಕೆ ತಕ್ಕಂತೆ, ತಮಗೆ ಬೇಕಾದ ರೈಲ್ವೇ ಬೋಗಿಯ ಕ್ಲಾಸ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.