/newsfirstlive-kannada/media/media_files/2025/10/29/delhi-police-spl-cell-2025-10-29-12-55-35.jpg)
ದೆಹಲಿ ಪೊಲೀಸರು ಮೊಹಮ್ಮದ್ ಆದಿಲ್ ಹುಸೇನಿ ಎಂಬಾತನನನ್ನು ಬಂಧಿಸಿದ್ದಾರೆ. ಈ ಮೊಹಮ್ಮದ್ ಆದಿಲ್ ಹುಸೇನಿ ತಾನು ಬಾಬಾ ಅಟಾಮಿಕ್ ರಿಸರ್ಚ್ ಸೆಂಟರ್‌ನ ವಿಜ್ಞಾನಿ ಎಂದು ಪೋಸ್ ನೀಡಿ ವಿದೇಶಗಳಿಗೆಲ್ಲಾ ಪ್ರಯಾಣ ಮಾಡಿದ್ದ. ಬೇರೆ ಬೇರೆ ನಕಲಿ ಐಡೆಂಟಿಟಿ ಬಳಸಿ ವಿದೇಶಗಳಿಗೆ ಪ್ರಯಾಣ ಮಾಡಿದ್ದ. 59 ವರ್ಷದ ಮೊಹಮ್ಮದ್ ಅದಿಲ್ ಹುಸೇನಿ, ಈ ಹಿಂದೆಯೇ ಸಾವನ್ನಪ್ಪಿದ್ದಾನೆ ಎಂದು ಆತನ ಸೋದರ ಘೋಷಿಸಿದ್ದ. ಮೊಹಮ್ಮದ್ ಅದಿಲ್ ಹುಸೇನಿಗೆ ಜಾರ್ಖಂಡ್ ರಾಜ್ಯದ ಜಮಶೇಡ್ ಪುರದ ನಕಲಿ ಪಾಸ್ ಪೋರ್ಟ್ ಜಾಲದ ಜೊತೆಯೂ ಲಿಂಕ್ ಇದೆ.
ಈ ಮೊದಲು ಪೊಲೀಸರ ತನಿಖೆಯ ದಾರಿ ತಪ್ಪಿಸಲು ಮೊಹಮ್ಮದ್ ಅದಿಲ್ ಹುಸೇನಿ ಸೋದರ ಅಖ್ತರ್ ಹುಸೇನಿ ಕುತುಬುದ್ದೀನ್ ಅಹಮದ್, ತನ್ನ ಸೋದರ ಅದಿಲ್ ಹುಸೇನಿ ಸಾವನ್ನಪ್ಪಿದ್ದಾನೆ ಎಂದು ಘೋಷಿಸಿದ್ದ.
ಈ ಮೊಹಮ್ಮದ್ ಅದಿಲ್ ಹುಸೇನಿ ಬೇರೆ ಬೇರೆ ಹೆಸರುಗಳನ್ನು ಬಳಸಿ, ಪೊಲೀಸರನ್ನು ಯಾಮಾರಿಸಿದ್ದಾನೆ. ಸೈಯ್ಯದ್ ಅದಿಲ್ ಹುಸೇನ್, ನಾಸೀಮುದ್ದೀನ್, ಸೈಯ್ಯದ್ ಅದಿಲ್ ಹುಸೇನಿ ಎಂಬ ಅಲಿಯಾಸ್ ಹೆಸರುಗಳನ್ನು ಬಳಸುತ್ತಿದ್ದ. ಈ ಮೊಹಮ್ಮದ್ ಆದಿಲ್ ಹುಸೇನಿಯನ್ನು ದೆಹಲಿಯ ಸೀಮಾಪುರಿ ಏರಿಯಾದಿಂದ 2 ದಿನದ ಹಿಂದೆ ಪೊಲೀಸರು ಬಂಧಿಸಿದ್ದಾರೆ.
ಮೊಹಮ್ಮದ್ ಆದಿಲ್ ಹುಸೇನಿ ವಿದೇಶಗಳ ನ್ಯೂಕ್ಲಿಯರ್ ವಿಜ್ಞಾನಿಗಳ ಜೊತೆಯೂ ಸಂಪರ್ಕದಲ್ಲಿದ್ದ. ಪಾಕಿಸ್ತಾನ ಸೇರಿದಂತೆ ಕೆಲ ವಿದೇಶಗಳಿಗೂ ಪ್ರಯಾಣ ಮಾಡಿದ್ದ.
ಮೊಹಮ್ಮದ್ ಅದಿಲ್ ಹುಸೇನಿ ಮೂಲತಃ ಜಮಶೆಡ್ ಪುರದ ಟಾಟಾ ನಗರದವನು.
ಆದಿಲ್ ಹಾಗೂ ಈತನ ಸೋದರ ಅಖ್ತರ್ ಹುಸೇನಿ ದೇಶದ ಭದ್ರತೆಯ ಸೂಕ್ಷ್ಮ ಮಾಹಿತಿಗಳನ್ನು ವಿದೇಶಕ್ಕೆ ರವಾನೆ ಮಾಡಿರುವ ಶಂಕೆ ಇದೆ. ನಕಲಿ ದಾಖಲೆ ಸಲ್ಲಿಸಿ ಅನೇಕ ಇಂಡಿಯನ್ ಪಾಸ್ ಪೋರ್ಟ್ ಗಳನ್ನು ಮೊಹಮ್ಮದ್ ಆದಿಲ್ ಹುಸೇನಿ ಪಡೆದಿದ್ದ ಎಂದು ದೆಹಲಿಯ ಎಸಿಪಿ ಪ್ರಮೋದ್ ಸಿಂಗ್ ಖುಷ್ವಾಹಾ ಹೇಳಿದ್ದಾರೆ.
/filters:format(webp)/newsfirstlive-kannada/media/media_files/2025/10/09/delhi-police-hq-2025-10-09-18-23-41.jpg)
ಮೊಹಮ್ಮದ್ ಆದಿಲ್ ಹುಸೇನಿ ಮನೆ ಮೇಲೆ ದಾಳಿ ಮಾಡಿದಾಗ, 2 ನಕಲಿ ಪಾಸ್ ಪೋರ್ಟ್ ಕೂಡ ಸಿಕ್ಕಿವೆ. ಈತನ ನೆಟ್ ವರ್ಕ್ ಎಷ್ಟು ಜನರಿಗೆ ಈ ರೀತಿ ನಕಲಿ ಪಾಸ್ ಪೋರ್ಟ್ ನೀಡಿದೆ ಎಂಬ ಪರಿಶೀಲನೆಯನ್ನು ಪೊಲೀಸರು ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us