ತಲಾದಾಯದಲ್ಲಿ ದೇಶದಲ್ಲೇ ಕರ್ನಾಟಕಕ್ಕೆ ನಂಬರ್ ಒನ್ ಸ್ಥಾನ : ಆರ್‌ಬಿಐ ನ ರಾಜ್ಯಗಳ ಅಂಕಿಅಂಶಗಳ ಹ್ಯಾಂಡ್ ಬುಕ್ ನ ಮಾಹಿತಿ

ಜನರ ತಲಾದಾಯದಲ್ಲಿ ಕರ್ನಾಟಕ ರಾಜ್ಯವು ದೇಶದಲ್ಲೇ ನಂಬರ್ ಒನ್ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ 2024-25 ರಲ್ಲಿ ಜನರ ತಲಾದಾಯವು 3,80,906 ರೂಪಾಯಿ ಇತ್ತು. ಜಿಎಸ್‌ಡಿಪಿ ಯಲ್ಲಿ ದೇಶದಲ್ಲಿ ಕರ್ನಾಟಕಕ್ಕೆ ನಾಲ್ಕನೇ ಸ್ಥಾನ ಸಿಕ್ಕಿದೆ.

author-image
Chandramohan
RBI state statistics hand book

ತಲಾದಾಯದಲ್ಲಿ ದೇಶದಲ್ಲಿ ಕರ್ನಾಟಕಕ್ಕೆ ನಂಬರ್ ಒನ್ ಸ್ಥಾನ!

Advertisment
  • ತಲಾದಾಯದಲ್ಲಿ ದೇಶದಲ್ಲಿ ಕರ್ನಾಟಕಕ್ಕೆ ನಂಬರ್ ಒನ್ ಸ್ಥಾನ!
  • ಆರ್‌ಬಿಐ ನ ರಾಜ್ಯಗಳ ಅಂಕಿಅಂಶಗಳ ಹ್ಯಾಂಡ್ ಬುಕ್ ನಲ್ಲಿರುವ ಮಾಹಿತಿ

GSDP ಯಲ್ಲಿ ದೇಶದಲ್ಲಿ ಕರ್ನಾಟಕಕ್ಕೆ ನಾಲ್ಕನೇ ಸ್ಥಾನ ಸಿಕ್ಕಿದೆ.  ಆರ್‌ಬಿಐನ ಭಾರತದ ರಾಜ್ಯಗಳ ಅಂಕಿಅಂಶಗಳ ಹ್ಯಾಂಡ್ ಬುಕ್ ನಲ್ಲಿರುವ ಮಾಹಿತಿ ಬಿಡುಗಡೆ  ಆಗಿದೆ. 
2024-25 ರಲ್ಲಿ ಕರ್ನಾಟಕದ ಜಿಎಸ್‌ಡಿಪಿ ಬರೋಬ್ಬರಿ 28.83 ಲಕ್ಷ ಕೋಟಿ ರೂಪಾಯಿ ಆಗಿದೆ. ಮಹಾರಾಷ್ಟ್ರ, ತಮಿಳುನಾಡು, ಉತ್ತರ ಪ್ರದೇಶ, ಕರ್ನಾಟಕ, ಗುಜರಾತ್ ಗೆ ಟಾಪ್ ಐದು ಸ್ಥಾನ ಸಿಕ್ಕಿದೆ. 2024- 25 ರಲ್ಲಿ  ಮಹಾರಾಷ್ಟ್ರ ರಾಜ್ಯ 45.31 ಲಕ್ಷ ಕೋಟಿ ರೂಪಾಯಿ ಜಿಎಸ್‌ಡಿಪಿ ಹೊಂದಿದೆ. 
ತಮಿಳುನಾಡು - 31.18 ಲಕ್ಷ ಕೋಟಿ ರೂಪಾಯಿ ಜಿಎಸ್‌ಡಿಪಿ ಆಗಿದೆ.  ಉತ್ತರ ಪ್ರದೇಶ ರಾಜ್ಯ- 2024-25 ರಲ್ಲಿ 29.78 ಲಕ್ಷ ಕೋಟಿ ರೂಪಾಯಿ ಜಿಎಸ್‌ಡಿಪಿಯನ್ನು ಹೊಂದಿದೆ. 

 ಇನ್ನೂ ತಲಾದಾಯದಲ್ಲಿ ದೇಶದಲ್ಲಿ ಕರ್ನಾಟಕಕ್ಕೆ ನಂಬರ್ ಒನ್ ಸ್ಥಾನ ಸಿಕ್ಕಿದೆ. 
2024-25 ರಲ್ಲಿ ಕರ್ನಾಟಕದ ಜನರ ತಲಾದಾಯ 3,80,906 ರೂಪಾಯಿ ಆಗಿದೆ. ನಂತರದ  ಸ್ಥಾನದಲ್ಲಿ ತಮಿಳುನಾಡು ಜನರ ತಲಾದಾಯ 3,61,619 ರೂಪಾಯಿ ಇದೆ. 
ಇನ್ನೂ ಜಿಎಸ್‌ಡಿಪಿ ಬೆಳವಣಿಗೆ ದರದಲ್ಲಿ ಕರ್ನಾಟಕಕ್ಕೆ ದೇಶದಲ್ಲಿ ನಾಲ್ಕನೇ ಸ್ಥಾನ ಸಿಕ್ಕಿದೆ.
2024-25 ರಲ್ಲಿ ಕರ್ನಾಟಕದ ಜಿಎಸ್‌ಡಿಪಿ ಬೆಳವಣಿಗೆ ದರ ಶೇ.12.8 ರಷ್ಟು ಇತ್ತು.  ತಮಿಳುನಾಡು ಜಿಎಸ್‌ಡಿಪಿ ಬೆಳವಣಿಗೆ ದರ ಶೇ.16 ರಷ್ಟು ಇದೆ.  ಉತ್ತರ ಪ್ರದೇಶದ ಜಿಎಸ್‌ಡಿಪಿ ಬೆಳವಣಿಗೆ ದರ ಶೇ.12.7 ರಷ್ಟು ಇದೆ. 

RBI MUMBAI OFFICE







ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Karnataka number one in per capita income in the Country
Advertisment