ರಾಯ್ ಕೇಸ್​ ಕುರಿತು ನಿರ್ಮಲಾ ಸೀತಾರಾಮ್​​ಗೆ ಪತ್ರ.. ಕೇರಳ ಸಿಎಂ ಕಾಡ್ತಿರುವ ಅನುಮಾನಗಳು ಏನೇನು?

ಕೆಲ ದಿನಗಳ ಹಿಂದೆ ಉದ್ಯಮಿ ಸಿ.ಜೆ. ರಾಯ್ ಅವರ ನಿವಾಸ ಮತ್ತು ಕಚೇರಿಗಳ ಮೇಲೆ ಐಟಿ ದಾಳಿ ನಡೆದಿತ್ತು. ಈ ವೇಳೆ ರಾಯ್ ಅವರು ತಮ್ಮ ಲೈಸೆನ್ಸ್ಡ್ ಪಿಸ್ತೂಲ್‌ನಿಂದ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾರೆ. ಈ ಪ್ರಕರಣ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

author-image
Ganesh Kerekuli
pinarayi vijayan (1)
Advertisment
  • ಕೇಂದ್ರ ಹಣಕಾಸು ಸಚಿವೆಗೆ ಪತ್ರ ಬರೆದ ಕೇರಳ ಮುಖ್ಯಮಂತ್ರಿ
  • ನಿರ್ಮಲಾ ಸೀತಾರಾಮನ್​ಗೆ ಪಿಣರಾಯಿ ವಿಜಯನ್​ರಿಂದ ಪತ್ರ
  • ನ್ಯಾಯಾಂಗ ತನಿಖೆಗೆ ಆದೇಶಿಸಲು ಒತ್ತಾಯಿಸಿ ಬರೆದಿರುವ ಪತ್ರ

ಖ್ಯಾತ ಉದ್ಯಮಿ ಸಿ.ಜೆ. ರಾಯ್ (C.J.Roy) ಅವರು ತಮ್ಮನ್ನೇ ಶೂಟ್ ಮಾಡಿಕೊಂಡು ಪ್ರಕರಣ ಈಗ ರಾಜಕೀಯ ತಿರುವು ಪಡೆದುಕೊಂಡಿದೆ. ಈ ಘಟನೆಗೆ ಸಂಬಂಧಿಸಿದಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದು, ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

ದೇಶದ ತೆರಿಗೆ ಆಡಳಿತದ ಮೇಲೆ ಕಳಂಕ

ಪಿಣರಾಯಿ ವಿಜಯನ್ ಅವರು ಬರೆದ ಪತ್ರದಲ್ಲಿ ಹಲವು ಮಹತ್ವದ ಅಂಶಗಳನ್ನು ಪ್ರಸ್ತಾಪಿಸಿದ್ದಾರೆ. ‘ಒಬ್ಬ ಉದ್ಯಮಿ ಐಟಿ ದಾಳಿಯ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ದೇಶದ ತೆರಿಗೆ ಆಡಳಿತ ವ್ಯವಸ್ಥೆಯ ಮೇಲೆ ಕಳಂಕ ತಂದಿದೆ. ಈ ಘಟನೆಯಿಂದಾಗಿ ವ್ಯಾಪಾರಿ ಸಮುದಾಯ ಮತ್ತು ನಾಗರಿಕ ಸಮಾಜದಲ್ಲಿ ಆತಂಕ ಮನೆಮಾಡಿದೆ’ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಪ್ರೋಟೋಕಾಲ್ ಉಲ್ಲಂಘನೆ?

ಆದಾಯ ತೆರಿಗೆ ಇಲಾಖೆಯ (IT) ಅಧಿಕಾರಿಗಳು ಶೋಧ ಕಾರ್ಯ ನಡೆಸುವಾಗ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎಂಬ ಅನುಮಾನವನ್ನು ಪಿಣರಾಯಿ ವಿಜಯನ್ ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ: ಬಿಗ್​ ಬಾಸ್​​​ ಗ್ರ್ಯಾಂಡ್ ಫಿನಾಲೆ ಮತ್ತೊಂದು ಮೈಲಿಗಲ್ಲು.. ರೆಕಾರ್ಡ್​ ಬ್ರೇಕ್ ಅಂದ್ರೆ ಇದು..!

cj roy (3)

ಗನ್ ವಶಕ್ಕೆ ಪಡೆಯಲಿಲ್ಲವೇಕೆ?: ಐಟಿ ದಾಳಿ ನಡೆದಾಗ ಮನೆಯಲ್ಲಿರುವ ಶಸ್ತ್ರಾಸ್ತ್ರಗಳನ್ನು ಅಧಿಕಾರಿಗಳು ಮೊದಲು ವಶಕ್ಕೆ ಪಡೆಯಬೇಕಿತ್ತು. ರಾಯ್ ಅವರ ಬಳಿ ಇದ್ದ ಗನ್ ಅನ್ನು ಅಧಿಕಾರಿಗಳು ಯಾಕೆ ವಶಕ್ಕೆ ಪಡೆಯಲಿಲ್ಲ ಎಂದು ಪತ್ರದಲ್ಲಿ ಪ್ರಶ್ನಿಸಲಾಗಿದೆ.
ಮೇಲ್ವಿಚಾರಣೆಯ ಕೊರತೆ: ನಿಯಮದ ಪ್ರಕಾರ, ದಾಳಿಗೊಳಗಾದ ವ್ಯಕ್ತಿ ಯಾವಾಗಲೂ ಅಧಿಕಾರಿಗಳ ನಿಗಾದಲ್ಲೇ ಇರಬೇಕು. ರಾಯ್ ಅವರು ಅಧಿಕಾರಿಗಳ ಕಣ್ಣುತಪ್ಪಿಸಿ ಬೇರೆ ರೂಮ್‌ಗೆ ಹೋಗಿ ಶೂಟ್ ಮಾಡಿಕೊಳ್ಳಲು ಹೇಗೆ ಸಾಧ್ಯವಾಯಿತು? ಇದು ಅಧಿಕಾರಿಗಳ ಬೇಜವಾಬ್ದಾರಿಯನ್ನು ತೋರಿಸುತ್ತದೆ ಎಂದು ವಿಜಯನ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಸಹೋದರನ ಗಂಭೀರ ಆರೋಪ

ಸಿ.ಜೆ. ರಾಯ್ ಅವರ ಸೋದರ ನೀಡಿದ ಹೇಳಿಕೆಯನ್ನು ಪತ್ರದಲ್ಲಿ ಉಲ್ಲೇಖಿಸಿರುವ ಸಿಎಂ, "ರಾಯ್ ಅವರು ಐಟಿ ತನಿಖೆಗೆ ಸಂಪೂರ್ಣ ಸಹಕಾರ ನೀಡಿದ್ದರು. ಆದರೂ ಅಧಿಕಾರಿಗಳು ಪದೇ ಪದೇ ಶೋಧ ನಡೆಸಿ ಅವರ ಮೇಲೆ ವಿಪರೀತ ಒತ್ತಡ ಹೇರಿದ್ದರು. ಅಧಿಕಾರಿಗಳ ಮಾನಸಿಕ ಕಿರುಕುಳವೇ ಆತ್ಮಹತ್ಯೆಗೆ ಪ್ರೇರಣೆಯಾಗಿರಬಹುದು" ಎಂಬ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.

ನ್ಯಾಯಾಂಗ ತನಿಖೆಗೆ ಆಗ್ರಹ

ಭವಿಷ್ಯದಲ್ಲಿ ಇಂತಹ ದುರಂತಗಳು ಮರುಕಳಿಸದಂತೆ ತಡೆಯಲು ಮತ್ತು ಐಟಿ ಅಧಿಕಾರಿಗಳ ಕಾರ್ಯವೈಖರಿಯಲ್ಲಿ ಪಾರದರ್ಶಕತೆ ತರಲು ಈ ಪ್ರಕರಣವನ್ನು ನಿಷ್ಪಕ್ಷಪಾತ ನ್ಯಾಯಾಂಗ ತನಿಖೆಗೆ ಒಪ್ಪಿಸುವುದು ಸೂಕ್ತ ಎಂದು ಪಿಣರಾಯಿ ವಿಜಯನ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಉಚಿತ ಮೊಮೋ ತಿನ್ನಲು ಮನೆಯ 85 ಲಕ್ಷ ಚಿನ್ನಾಭರಣವನ್ನು ಮೊಮೋ ಅಂಗಡಿ ಮಾಲೀಕನಿಗೆ ಕೊಟ್ಟ ಬಾಲಕ : ಯುಪಿಯಲ್ಲಿ ವಿಚಿತ್ರ ಕೇಸ್‌

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Pinarayi Vijayan Confident group CJ Roy
Advertisment