Advertisment

ಕೇರಳ ಸಂಪೂರ್ಣ ಬಡತನ ಮುಕ್ತ ರಾಜ್ಯ ಎಂದು ಘೋಷಣೆ : ನವಂಬರ್ 1 ರಂದು ಘೋಷಣೆಗೆ ಕಾರ್ಯಕ್ರಮ

ಕೇರಳ ರಾಜ್ಯ ಅನೇಕ ಸಾಧನೆಗಳನ್ನು ಮಾಡಿದೆ. ಈಗ ಸಂಪೂರ್ಣ ಬಡತನ ಮುಕ್ತ ರಾಜ್ಯ ಎಂದು ಘೋಷಿಸಲು ಸಜ್ಜಾಗಿದೆ. ನವಂಬರ್ 1 ರಂದು ಕೇರಳ ರಾಜ್ಯವನ್ನು ಕಡುಬಡತನ ಮುಕ್ತ ರಾಜ್ಯ ಎಂದು ಘೋಷಿಸಲಾಗುತ್ತಿದೆ. ಕೇರಳ, ಭಾರತದಲ್ಲೇ ಬಡತನ ಮುಕ್ತ ಮೊದಲನೇ ರಾಜ್ಯವಾಗಲಿದೆ.

author-image
Chandramohan
POVERTY FREE KERALA STATE

ಕಡು ಬಡತನ ಮುಕ್ತ ರಾಜ್ಯ ಎಂದು ಘೋಷಿಸಲು ಕೇರಳ ನಿರ್ಧಾರ

Advertisment
  • ಕಡು ಬಡತನ ಮುಕ್ತ ರಾಜ್ಯ ಎಂದು ಘೋಷಿಸಲು ಕೇರಳ ನಿರ್ಧಾರ
  • ನವಂಬರ್ 1 ರಂದು ಕೇರಳ ರಾಜ್ಯ ಕಡ ಬಡತನ ಮುಕ್ತ ರಾಜ್ಯ ಎಂದು ಘೋಷಣೆ
  • ಪಿನರಾಯಿ ವಿಜಯನ್ ಸರ್ಕಾರದಿಂದ ಈ ಘೋಷಣೆ


ಭಾರತದಲ್ಲಿ ಕಳೆದ 50 ವರ್ಷಗಳಿಂದ ಬಡತನ ನಿರ್ಮೂಲನೆಯ ಘೋಷಣೆಗಳನ್ನು ಮಾತ್ರ ಜನರು ಕೇಳುತ್ತಿದ್ದಾರೆ. ಆದರೇ, ವಾಸ್ತವವಾಗಿ ಬಡತನ ನಿರ್ಮೂಲನೆಯೇ ಆಗಿಲ್ಲ. ಇಂದಿಗೂ ಬಡವರು ಬಡವರಾಗಿಯೇ ಇದ್ದಾರೆ. ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ. ಇದರ ಮಧ್ಯೆಯೇ ಸಾಕ್ಷರತೆಯಲ್ಲಿ ಬೇರೆ ರಾಜ್ಯಗಳಿಗಿಂತ ಮುಂದಿರುವ ಕೇರಳವು ಬಡತನ ನಿರ್ಮೂಲನೆಯಲ್ಲೂ ಒಂದು ಹೆಜ್ಜೆ ಮುಂದಿಟ್ಟಿದೆ. ಇದೇ ನವಂಬರ್ 1 ರಂದು ಕೇರಳ ರಾಜ್ಯವನ್ನು ಬಡತನ ಮುಕ್ತ ರಾಜ್ಯ ಎಂದು ಘೋಷಿಸಲಾಗುತ್ತಿದೆ. ರಾಜ್ಯ ಹುಟ್ಟಿದ ದಿನವಾದ ನವಂಬರ್ 1 ರಂದೇ ಕೇರಳನ್ನು ಬಡತನ ಮುಕ್ತ ರಾಜ್ಯ ಎಂದು ಘೋಷಿಸುತ್ತಿರುವುದು ವಿಶೇಷ. 
ತಿರುವನಂತಪುರದ ಸೆಂಟ್ರಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಜನಪ್ರಿಯ ಸಿನಿಮಾ ಸ್ಟಾರ್ ಗಳಾದ ಕಮಲ್ ಹಾಸನ್, ಮುಮ್ಮಟ್ಟಿ, ಮೋಹನ್ ಲಾಲ್ ಸೇರಿದಂತೆ ಅನೇಕ ಗಣ್ಯರು  ಭಾಗಿಯಾಗುತ್ತಿದ್ದಾರೆ. ಕೇರಳ ಸಿಎಂ ಪಿನರಾಯಿ ವಿಜಯನ್ ಹಾಗೂ ಅವರ ಕ್ಯಾಬಿನೆಟ್‌ನ ಎಲ್ಲ ಸಚಿವರೂ ಭಾಗಿಯಾಗುತ್ತಿದ್ದಾರೆ. 
ಕೇರಳ ಮತ್ತೊಮ್ಮೆ ಇತಿಹಾಸ ಸೃಷ್ಟಿಸಿದ್ದು, ಕಡುಬಡತನವನ್ನು ನಿರ್ಮೂಲನೆ ಮಾಡಿದೆ. ದೇಶದಲ್ಲಿ ಈ ಸಾಧನೆ ಮಾಡಿದ ಮೊದಲ ರಾಜ್ಯವಾಗುವುದರ ಜೊತೆಗೆ, ಜಗತ್ತಿನಲ್ಲಿ ಈ ಗುರಿ ತಲುಪಿದ ಎರಡನೇ ವಲಯವಾಗಿದೆ ಎಂದು ಕೇರಳದ ಸ್ಥಳೀಯ ಸಂಸ್ಥೆಗಳ ಸಚಿವ ಎಂ.ಬಿ.ರಾಜೇಶ್ ಹಾಗೂ ಶಿಕ್ಷಣ ಖಾತೆ ಸಚಿವ ವಿ.ಶಿವನಕುಟ್ಟಿ ಹೇಳಿದ್ದಾರೆ. 

Advertisment

POVERTY FREE KERALA STATE02



ಇನ್ನೂ ಮೈಲಿಗಲ್ಲು ಸಂಭ್ರಮಾಚರಣೆಯನ್ನು ರಾಜ್ಯದಾದ್ಯಂತ ಮಾಡುತ್ತಿದ್ದು, ಸ್ಥಳೀಯ ಸಂಸ್ಥೆಗಳಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. 
ಕಡುಬಡತನ ಅಂದರೇ, ಕುಟುಂಬಗಳು ಕನಿಷ್ಠ ಅಗತ್ಯತೆಗಳಾದ ಆಹಾರ, ವಸತಿ, ಬಟ್ಟೆ, ಆರೋಗ್ಯ, ಶಿಕ್ಷಣವನ್ನು ಪಡೆಯಲಾಗದ ಸ್ಥಿತಿ. ಈ ಸ್ಥಿತಿಯಿಂದ ಕೇರಳದ ಎಲ್ಲ ಕುಟುಂಬಗಳು ಸಂಪೂರ್ಣ ಹೊರಬಂದಿವೆ. 
ವಿಶ್ವಬ್ಯಾಂಕ್ ನ ವ್ಯಾಖ್ಯಾನದ ಪ್ರಕಾರ, ದಿನವೊಂದಕ್ಕೆ ಒಬ್ಬ ವ್ಯಕ್ತಿ  ಕನಿಷ್ಠ 180 ರೂಪಾಯಿಗಿಂತ ಕಡಿಮೆ ಖರ್ಚು ಮಾಡುವ ಕುಟುಂಬಗಳನ್ನು ಕಡುಬಡತನದಲ್ಲಿರುವ ಕುಟುಂಬಗಳು ಎಂದು ಪರಿಗಣಿಸಲಾಗುತ್ತೆ. 
ಇನ್ನೂ ಭಾರತದಲ್ಲಿ ನೀತಿ ಆಯೋಗವು ಮಲ್ಟಿ ಡೈಮೆನ್ಷನಾಲ್ ಇಂಡೆಕ್ಸ್ ಅನ್ನು ಬಳಸಿ ಬಡತನವನ್ನು ವ್ಯಾಖ್ಯಾನ ಮಾಡಿದೆ. ನೀತಿ ಆಯೋಗವು ಪೌಷ್ಠಿಕಾಂಶದ ಆಹಾರ, ವಸತಿ, ಸ್ಯಾನಿಟೇಷನ್, ಶಿಕ್ಷಣ, ಮತ್ತು ಕನಿಷ್ಠ ಸೇವೆಗಳನ್ನು ಪಡೆಯುವುದನ್ನು  ಮಾನದಂಡಗಳಾಗಿ ಪರಿಗಣಿಸಿದೆ. 


ಭಾರತದ ನೀತಿ ಆಯೋಗದ ಮಲ್ಟಿ ಡೆಮೆನ್ಷನಲ್ ಇಂಡೆಕ್ಸ್ ಪ್ರಕಾರ, ಕೇರಳದ ಬಡತನದ ಪ್ರಮಾಣ ಶೇ.0.7 ರಷ್ಟು ಇದೆ . 2021 ರಲ್ಲಿ ಕೇರಳ ರಾಜ್ಯ ಸರ್ಕಾರವು ಕಡು ಬಡತನ ನಿರ್ಮೂಲನೆ ಕಾರ್ಯಕ್ರಮ ಹಮ್ಮಿಕೊಂಡು ಈ ಗುರಿ ಸಾಧನೆ ಮಾಡಿದೆ.  ಕೇರಳದಲ್ಲಿ 64 ಸಾವಿರ ಕುಟುಂಬಗಳು ಕಡು ಬಡತನದಲ್ಲಿದ್ದವು. ಆ ಕುಟುಂಬಗಳ ಪೈಕಿ ಶೇ.93 ರಷ್ಟು ಕುಟುಂಬಗಳು   ಈಗ ಕಡು ಬಡತನದಿಂದ ಹೊರಬಂದಿವೆ . ಹೀಗಾಗಿ ಕೇರಳ ರಾಜ್ಯವನ್ನು ಕೂಡ ಕಡು ಬಡತನ ಮುಕ್ತ ರಾಜ್ಯ ಎಂದು ಘೋಷಿಸಲಾಗುತ್ತಿದೆ. ಕೇರಳದ ಈ ಸಾಧನೆ ಭಾರತದ ಉಳಿದ ರಾಜ್ಯಗಳಿಗೂ ಮಾದರಿ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Kerala first poverty free state in country
Advertisment
Advertisment
Advertisment