/newsfirstlive-kannada/media/media_files/2026/01/09/boss-shwetha-married-to-jagadish-verma-2026-01-09-15-53-49.jpg)
ಗುಜರಾತ್ ರಾಜ್ಯದಲ್ಲೊಂದು ವಿಚಿತ್ರ ಪ್ರೇಮ ಪ್ರಕರಣ ವರದಿಯಾಗಿದೆ. ಕಂಪನಿಯ ಮಾಲಕಿಯನ್ನು ಉದ್ಯೋಗಿ ಪ್ರೇಮಿಸಿದ ಪ್ರಕರಣ ಇದು. ಗುಜರಾತ್ ನ ಖಾಸಗಿ ಕಂಪನಿಯಲ್ಲಿ ಜಗದೀಶ್ ವರ್ಮಾ ಉದ್ಯೋಗಿಯಾಗಿದ್ದಾರೆ. ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗಲೇ ಜಗದೀಶ್ ವರ್ಮಾ ಅವರ ಪತ್ನಿ ನಿಧನರಾದರು. ಇದರಿಂದ ಜಗದೀಶ್ ವರ್ಮಾ ಮಾನಸಿಕವಾಗಿ ಜರ್ಜರಿತವಾಗಿದ್ದರು. ಜೀವನ ನಡೆಯಲೇಬೇಕು, ಜೀವನದ ಚಕ್ರದ ಬಂಡಿ ಉರುಳಲೇಬೇಕು. ಹೀಗಾಗಿ ಪತ್ನಿ ನಿಧನದ ಬಳಿಕ ಸ್ಪಲ್ಪ ದಿನ ನೋವಿನಲ್ಲೇ ಇದ್ದ ಜಗದೀಶ್ ವರ್ಮಾ ಬಳಿಕ ಕಂಪನಿಯ ಕೆಲಸಕ್ಕೆ ಕಚೇರಿಗೆ ಹೋಗಿದ್ದಾರೆ.
ಕಂಪನಿಯಲ್ಲಿ ತನ್ನ ಬಾಸ್ ಶ್ವೇತಾ ಅಗರವಾಲ್ ಜೊತೆಗೆ ಕೆಲಸದ ವಿಷಯಗಳ ಬಗ್ಗೆ ಚರ್ಚೆಗೆ ಆಗ್ಗಾಗ್ಗೆ ಹೋಗಿ ಭೇಟಿಯಾಗುತ್ತಿದ್ದರು. ಬಾಸ್ ಶ್ವೇತಾ ಅಗರವಾಲ್ ಜೊತೆ ಆಗ್ಗಾಗ್ಗೆ ಮಾತನಾಡಿದ್ದಾರೆ. ಶ್ವೇತಾ ಅಗರವಾಲ್ ಗೆ ಜಗದೀಶ್ ವರ್ಮಾ ಮಾನಸಿಕವಾಗಿ ಕುಸಿದಿರುವುದು ಗೊತ್ತಾಗಿ ಧೈರ್ಯ ಹೇಳಿದ್ದಾರೆ. ಸಾಂತ್ವನ ಹೇಳಿದ್ದಾರೆ.
ಬಳಿಕ ಕಚೇರಿ ಕೆಲಸದ ವೇಳೆಯೇ ಬಾಸ್ ಶ್ವೇತಾ ಅಗರವಾಲ್ ಹಾಗೂ ಉದ್ಯೋಗಿ ಜಗದೀಶ್ ವರ್ಮಾ ನಡುವೆ ಆತ್ಮೀಯತೆ ಬೆಳೆದಿದೆ. ಇದು ಕಂಪನಿಯಲ್ಲಿದ್ದ ಎಲ್ಲರಿಗೂ ಶಾಕ್ ಆಗಿದೆ. ಇಬ್ಬರ ನಡುವೆ ಫ್ರೆಂಡ್ ಶಿಪ್ ಬೆಳೆದಿದೆ. ಬಳಿಕ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದಾರೆ. ಇದೊಂದು ವಿಚಿತ್ರ ಸಂಬಂಧ. ಇದರ ಬಗ್ಗೆ ಕಂಪನಿಯಲ್ಲಿ ಹಾಗೂ ಸುತ್ತಮುತ್ತ ಚರ್ಚೆಯಾಗುತ್ತಿದೆ. ಪತ್ನಿ ಕಳೆದುಕೊಂಡು ನೋವಿನಲ್ಲಿದ್ದ ಜಗದೀಶ್ ವರ್ಮಾಗೆ ಸಾಂತ್ವನ ಹೇಳಿ ಈಗ ಆತನ ಜೀವನಕ್ಕೆ ಬಾಸ್ ಶ್ವೇತಾ ಅಗರವಾಲ್ ಪ್ರವೇಶಿಸುತ್ತಿದ್ದಾರೆ. ಜನರಿಗೆ ಯಾರು ಅನ್ನು ಬೇಕಾದರೂ ಮದುವೆಯಾಗುವ ಸ್ವಾತಂತ್ರ್ಯ ಇದೆ. ಇಬ್ಬರ ನಡುವಿನ ಸಂಬಂಧದಲ್ಲಿ ಯಾವುದೇ ತಪ್ಪು ಇಲ್ಲ. ಅನೈತಿಕವೂ ಅಲ್ಲ. ಎಲ್ಲವೂ ನೈತಿಕ. ಇಬ್ಬರೂ ಜೊತೆಯಾಗಿ ಬಾಳಲು ನಿರ್ಧರಿಸಿದ್ದಾರೆ. ನೆಗೆಟಿವ್ ಆಗಿ ಮಾತನಾಡುವವರ ಬಾಯಿ ಮುಚ್ಚಿಸಲು ಆಗಲ್ಲ. ಯಾರಿಗೆ ಆಗಲಿ, ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಮುಖ್ಯ . ಶ್ವೇತಾ ಅಗರವಾಲ್ ಹಾಗೂ ಜಗದೀಶ್ ವರ್ಮಾ ನಡುವೆ ಸುಖ, ಶಾಂತಿ, ನೆಮ್ಮದಿಯ ಜೀವನ ನಡೆಸುವ ಭರವಸೆ ಮೂಡಿದೆ. ಹೀಗಾಗಿ ಇಬ್ಬರೂ ಒಂದಾಗಿ ಸತಿ-ಪತಿಗಳಾಗಿ ಜೀವನ ನಡೆಸಲು ನಿರ್ಧರಿಸಿದ್ದಾರೆ. ಬೇರೆಯವರ ಕೊಂಕು ಮಾತಿಗೆ ಏಕೆ ತಲೆ ಕೆಡಿಸಿಕೊಳ್ಳಬೇಕು ಅಲ್ಲವೇ?
ಇನ್ನೂ ಜಗದೀಶ್ ವರ್ಮಾ ಹಾಗೂ ಶ್ವೇತಾ ಅಗರವಾಲ್ ಭಾಂಧವ್ಯವನ್ನು ಕೆಲವರು ಅಚ್ಚರಿಯ ಕಣ್ಣಿನಿಂದ ನೋಡುತ್ತಿದ್ದಾರೆ. ಕೆಲವರು ಮಾನವೀಯತೆ ಹಾಗೂ ಸಹಬಾಳ್ವೆಯ ದೃಷ್ಟಿಯಿಂದಲೂ ನೋಡುತ್ತಿದ್ದಾರೆ. ಇಬ್ಬರು ವ್ಯಕ್ತಿಗಳು ಪರಸ್ಪರ ಭಾವನೆಗಳನ್ನು ಅರ್ಥ ಮಾಡಿಕೊಂಡರೇ, ಜೊತೆಯಾಗಿ ಹೊಸ ಜೀವನ ಆರಂಭಿಸಲು ನಿರ್ಧರಿಸಿದರೇ, ತಪ್ಪೇನು? ಇಲ್ಲಿ ಯುವತಿ, ಕಂಪನಿಯ ಬಾಸ್ ಅನ್ನೋದಷ್ಟೇ ವಿಶೇಷ.
ಬದಲಾದ ಕಾಲ ಘಟ್ಟದಲ್ಲಿ ಸಂಬಂಧಗಳನ್ನು ಪರಸ್ಪರ ಗೌರವ, ಪರಸ್ಪರ ಅರ್ಥ ಮಾಡಿಕೊಳ್ಳುವಿಕೆ ಹಾಗೂ ಭಾವನೆಗಳನ್ನು ಗೌರವಿಸುವ ದೃಷ್ಟಿಯಲ್ಲಿ ನೋಡಬೇಕಾಗಿದೆ. ಸಂಬಂಧಗಳನ್ನು ಸಮಾಜವು ಸಂಪ್ರದಾಯಿಕ ದೃಷ್ಟಿಕೋನದಲ್ಲೇ ನೋಡುವುದನ್ನು ಬಿಡಬೇಕಾಗಿದೆ. ಜೊತೆಗೆ ವ್ಯಕ್ತಿಗಳ ಸಂದರ್ಭ, ಸನ್ನಿವೇಶ, ಭಾವನೆಗಳ ಕಡೆಯೂ ಜನರು ಗಮನ ಕೊಡಬೇಕು.
ಶ್ವೇತಾ ಅಗರವಾಲ್ ಹಾಗೂ ಜಗದೀಶ್ ವರ್ಮಾ ಸಂಬಂಧ, ಭಾಂಧವ್ಯ, ಮದುವೆ ಸುದ್ದಿ ಈಗ ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಆಗುತ್ತಿದೆ.
/filters:format(webp)/newsfirstlive-kannada/media/media_files/2026/01/09/gujarat-love-story-lady-boss-love-2026-01-09-16-18-17.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us