/newsfirstlive-kannada/media/media_files/2025/12/10/dysp-kalpana-verma-cheating-case-2025-12-10-14-10-07.jpg)
ಡಿವೈಎಸ್ಪಿ ಕಲ್ಪನಾ ವರ್ಮಾರಿಂದ ದೀಪಕ್ ಟಂಡನ್‌ಗೆ ಲವ್ ಟ್ರ್ಯಾಪ್!
ಛತ್ತೀಸ್‌ಗಢದ ರಾಯ್‌ಪುರದಲ್ಲಿ, ಉದ್ಯಮಿಯೊಬ್ಬರು ಮಹಿಳಾ ಡಿಎಸ್‌ಪಿ ಕಲ್ಪನಾ ವರ್ಮಾ ಅವರ ಪ್ರೀತಿಯ ಜಾಲದಲ್ಲಿ ಸಿಲುಕಿದ್ದಾರೆ. ಆ ಮೂಲಕ ಡಿಎಸ್​ಪಿ ಕೋಟ್ಯಂತರ ರೂಪಾಯಿ, ವಜ್ರದ ಉಂಗುರ, ಇನ್ನೋವಾ ಕಾರು ಮತ್ತು ಹೋಟೆಲ್ ಅನ್ನು ಸಹ ಸುಲಿಗೆ ಮಾಡಿದ್ದಾರೆ ಅಂತ ಆರೋಪಿಸಲಾಗಿದೆ.
ರಾಯ್‌ಪುರದಲ್ಲಿ ಪೊಲೀಸ್ ಇಲಾಖೆಯ ವಿಶ್ವಾಸಾರ್ಹತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ನಗರದ ಉದ್ಯಮಿ ದೀಪಕ್ ಟಂಡನ್ ಅವರು ಮಹಿಳಾ ಡಿಎಸ್‌ಪಿ ಕಲ್ಪನಾ ವರ್ಮಾ ವಿರುದ್ಧ ಲಂಚ, ಬ್ಲ್ಯಾಕ್‌ಮೇಲಿಂಗ್ ಮತ್ತು ವಂಚನೆಯ ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ.
ದೀಪಕ್ ಹೇಳುವ ಪ್ರಕಾರ, 2021 ರಲ್ಲಿ ಭೇಟಿಯಾದ ನಂತರ, ಡಿವೈಎಸ್ಪಿ ಕಲ್ಪನಾ ವರ್ಮಾ ಪ್ರೀತಿಯ ಬಲೆ ಬೀಸಿದರು. ಮದುವೆಯ ಭರವಸೆ ನೀಡಿದರು ಮತ್ತು ನಿಧಾನವಾಗಿ ಕೋಟ್ಯಂತರ ರೂಪಾಯಿಗಳನ್ನು ಪಡೆದರು. ದುಬಾರಿ ಕಾರುಗಳು ಮತ್ತು ಬೆಲೆಬಾಳುವ ಆಭರಣಗಳನ್ನು ಪಡೆದಿದ್ದಾರೆ.
ಕಲ್ಪನಾ ವರ್ಮಾ ವಿರುದ್ಧ ಪ್ರೀತಿಯ ನಾಟಕವಾಡಿ ದುಬಾರಿ ಗಿಫ್ಟ್ ಹಾಗೂ ಹಣ ಪಡೆದು ವಂಚನೆ ನಡೆಸಿರುವ ಆರೋಪದಡಿ ದೂರು ನೀಡಲಾಗಿದೆ. ದೂರು ಹಿಂಪಡೆಯುವಂತೆ ಕಲ್ಪನಾ ವರ್ಮಾ, ದೀಪಕ್ ಟಂಡನ್ ಗೆ ಒತ್ತಾಯಿಸಿದ್ದಾರೆ. ದೂರು ಹಿಂಪಡೆಯಲು ನಿರಾಕರಿಸಿದಾಗ ಸುಳ್ಳು ಕೇಸ್ ನಲ್ಲಿ ಜೈಲಿಗೆ ಕಳಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೀಪಕ್ ಟಂಡನ್ ಹೇಳಿದ್ದಾರೆ.
/filters:format(webp)/newsfirstlive-kannada/media/media_files/2025/12/10/dysp-kalpana-verma-cheating-case03-2025-12-10-14-12-27.jpg)
ಇನ್ನೂ ಇಡೀ ಪ್ರಕರಣ ಆಧಾರ ರಹಿತ ಎಂದು ಹೇಳಿರುವ ಕಲ್ಪನಾ ವರ್ಮಾ, ಯಾವುದೇ ರೀತಿಯ ತನಿಖೆಗೂ ಸಿದ್ದ ಎಂದು ಹೇಳಿದ್ದಾರೆ.
ದೀಪಕ್ ಟಂಡನ್ ಹೇಳುವ ಪ್ರಕಾರ, ದೀಪಕ್, 2021 ರಲ್ಲಿ ಡಿವೈಎಸ್ಪಿ ಕಲ್ಪನಾ ವರ್ಮಾರನ್ನು ಭೇಟಿಯಾಗಿದ್ದಾರೆ. ಹಂತ ಹಂತವಾಗಿ ಇಬ್ಬರ ನಡುವಿನ ಸಂಬಂಧ ಬಲವಾಗಿ ಬೆಳೆದಿದೆ . ಈ ಸಂಬಂಧದ ವೇಳೆಯೇ ಡಿವೈಎಸ್ಪಿ ಕಲ್ಪನಾ ವರ್ಮಾ ಹಂತ ಹಂತವಾಗಿ ತಮ್ಮಿಂದ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಹಂತ ಹಂತವಾಗಿ 2 ಕೋಟಿ ರೂಪಾಯಿ ಹಣ ನೀಡಿದ್ದೇನೆ. 12 ಲಕ್ಷ ರೂಪಾಯಿ ಡೈಮೆಂಡ್ ರಿಂಗ್ , ಗೋಲ್ಡ್ ಚೈನ್, 5 ಲಕ್ಷ ರೂಪಾಯಿ ಬಟ್ಟೆ, 1 ಲಕ್ಷ ರೂಪಾಯಿ ಬ್ರೆಸ್ ಲೇಟ್ ಕೊಡಿಸಿದ್ದೇನೆ.
ಜೊತೆಗೆ ದೀಪಕ್ ಟಂಡನ್ ರಿಂದ ಇನ್ನೋವಾ ಕ್ರಿಸ್ಟಾ ಕಾರ್ ಅನ್ನು ಪಡೆದಿದ್ದಾರೆ. ಬಳಿಕ ಅಲ್ಲಿಗೆ ಡಿವೈಎಸ್ಪಿ ಬೇಡಿಕೆಗಳು ನಿಂತಿಲ್ಲ. ದೀಪಕ್ ಟಂಡನ್ ಹೆಸರಿನಲ್ಲಿದ್ದ ರಾಯಪುರದ ವಿಐಪಿ ರೋಡ್‌ನ ಹೋಟೇಲ್ ಅನ್ನು ತನ್ನ ಸೋದರನ ಹೆಸರಿಗೆ ಬರೆಸಿಕೊಂಡಿದ್ದಾರೆ. ಬಳಿಕ ಹೋಟೇಲ್ ಮೇಲೆ 30 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಬಳಿಕ ಹೋಟೇಲ್ ಅನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ.
/filters:format(webp)/newsfirstlive-kannada/media/media_files/2025/12/10/lady-dysp-love-trap-2025-12-10-15-38-26.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us