/newsfirstlive-kannada/media/media_files/2025/08/04/supreme-court-2025-08-04-13-18-14.jpg)
ಸುಪ್ರೀಂಕೋರ್ಟ್ ನಿನ್ನೆಯಷ್ಟೇ ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ವಲಯದ ನಗರಗಲ್ಲಿ ಎಲ್ಲ ಬೀದಿನಾಯಿಗಳನ್ನು ಮುಂದಿನ 8 ವಾರಗಳಲ್ಲಿ ಹಿಡಿದು ಡಾಗ್ ಶೆಲ್ಟರ್ ಗಳಿಗೆ ಹಾಕಬೇಕೆಂದು ಆದೇಶ ನೀಡಿತ್ತು.
ಈ ಆದೇಶದ ಪಾಲನೆಯೂ ಈಗ ಸುಪ್ರೀಂಕೋರ್ಟ್ ಅಂಗಳದಿಂದಲೇ ಆರಂಭವಾಗಿದೆ. ಸುಪ್ರೀಂಕೋರ್ಟ್ ಅಂಗಳದಲ್ಲೂ ಬೀದಿನಾಯಿಗಳ ಹಾವಳಿ ಜೋರಾಗಿದೆ. ಹೀಗಾಗಿ ಸುಪ್ರೀಂಕೋರ್ಟ್ ಅಂಗಳದಲ್ಲಿ ಊಟ ಮಾಡಿದ ನಂತರ ಅಳಿದುಳಿದ ಆಹಾರವನ್ನು ಓಪನ್ ಏರಿಯಾಗಳಲ್ಲಿ ಹಾಕುವಂತಿಲ್ಲ. ತೆರೆದ ಡಬ್ಬ, ತೆರೆದ ಕಂಟೇನರ್ ಗಳಲ್ಲಿ ಇಡುವಂತಿಲ್ಲ. ಊಟ ಮಾಡಿದ ನಂತರ ಉಳಿದ ಆಹಾರವನ್ನು ಕವರ್ ಹಾಕಿದ ಡಸ್ಟ್ ಬಿನ್ ಗಳಲ್ಲೇ ಹಾಕಬೇಕೆಂದು ಆದೇಶಿಸಲಾಗಿದೆ.
ಬೀದಿನಾಯಿಗಳು ಸುಪ್ರೀಂಕೋರ್ಟ್ ನ ಕಾರಿಡಾರ್ ಗಳಲ್ಲಿ ಓಡಾಡುತ್ತಿರುತ್ತಾವೆ. ಜೊತೆಗೆ ಕೋರ್ಟ್ ಕಾಂಪ್ಲೆಕ್ಸ್ ನ ಲಿಫ್ಟ್ ಬಳಿಯೂ ಬೀದಿನಾಯಿಗಳ ಕಾಟ ಇದೆ. ಹೀಗಾಗಿ ಆಹಾರವನ್ನು ಹಾಕುವುದರಿಂದ ಬೀದಿನಾಯಿಗಳ ಹಾವಳಿ, ದಾಳಿ, ಕಾಟ ಮತ್ತಷ್ಟು ಹೆಚ್ಚಾಗುತ್ತೆ. ಹೀಗಾಗಿ ಊಟ ಮಾಡಿದ ನಂತರ ಉಳಿದ ಆಹಾರವನ್ನು ನಾಯಿಗಳಿಗೆ ಹಾಕದಂತೆ ನಿರ್ಬಂಧ ವಿಧಿಸಿ ಆದೇಶಿಸಲಾಗಿದೆ. ಬೀದಿನಾಯಿ ಸಮಸ್ಯೆಗೆ ಪರಿಹಾರವಾಗಿ ಈ ಆದೇಶ ಹೊರಡಿಸಲಾಗಿದೆ.
ಕವರ್ ನಿಂದ ಸುತ್ತಿದ ಡಸ್ಟ್ ಬಿನ್ ಗಳಲ್ಲೇ ಆಹಾರವನ್ನು ಹಾಕಬೇಕು ಎಂದು ಆದೇಶಿಸಲಾಗಿದೆ.
ಈ ಮೂಲಕ ಬೀದಿನಾಯಿಗಳು ಆಹಾರ ಹುಡುಕಿಕೊಂಡು ಸುಪ್ರೀಂಕೋರ್ಟ್ ಅಂಗಳಕ್ಕೆ ಬರದಂತೆ ತಡೆಯುವ ಪ್ರಯತ್ನ ಇದು. ಈ ಮೂಲಕ ಸುಪ್ರೀಂಕೋರ್ಟ್ ಅಂಗಳದಲ್ಲಿ ಬೀದಿನಾಯಿ ದಾಳಿಯ ರಿಸ್ಕ್ ಕಡಿಮೆ ಮಾಡುವ ಪ್ರಯತ್ನ ಇದು. ಸುಪ್ರೀಂಕೋರ್ಟ್ ಕಾಂಪ್ಲೆಕ್ಸ್ ನಲ್ಲಿ ಉತ್ತಮ ಸ್ವಚ್ಛತೆ ಕಾಪಾಡಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ.
ನಿನ್ನೆಯಷ್ಟೇ ದೆಹಲಿ ಹಾಗೂ ಎನ್‌ಸಿಆರ್ ನಗರಗಳ ಬೀದಿನಾಯಿಗಳನ್ನು ಹಿಡಿದು ಮುಂದಿನ 8 ವಾರಗಳಲ್ಲಿ ಡಾಗ್ ಶೆಲ್ಟರ್ ಗಳಿಗೆ ಬಿಡಬೇಕೆಂದು ಸುಪ್ರೀಂಕೋರ್ಟ್ ನ ಜಸ್ಟೀಸ್ ಜೆ.ಬಿ.ಪರ್ದಿವಾಲಾ ಮತ್ತು ಜಸ್ಟೀಸ್ ಆರ್.ಮಹದೇವನ್ ಅವರ ಪೀಠ ಆದೇಶಿಸಿದೆ. ಒಮ್ಮೆ ಡಾಗ್ ಶೆಲ್ಟರ್ ಗಳಿಗೆ ಬೀದಿನಾಯಿಗಳನ್ನು ಬಿಟ್ಟ ಬಳಿಕ ಮತ್ತೆ ಸಾರ್ವಜನಿಕ ಸ್ಥಳಗಳಿಗೆ ಬಿಡಬಾರದು. ಸ್ವಯಂ ಸೇವಾ ಸಂಸ್ಥೆಗಳು ಸೇರಿದಂತೆ ಯಾರೂ ಕೂಡ ಸುಪ್ರೀಂಕೋರ್ಟ್ ಆದೇಶದ ಜಾರಿಗೆ ಅಡ್ಡಿಪಡಿಸಬಾರದು ಎಂದು ಸುಪ್ರೀಂಕೋರ್ಟ್ ಕಟ್ಟುನಿಟ್ಟಿನ ಆದೇಶ ನೀಡಿದೆ.
ಈಗ ಸುಪ್ರೀಂಕೋರ್ಟ್ ಅಂಗಳದಲ್ಲೂ ಬೀದಿನಾಯಿಗಳ ಹಾವಳಿ ನಿಯಂತ್ರಣಕ್ಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸುಪ್ರೀಂಕೋರ್ಟ್ ವಕೀಲರಿಗೆ ಬೀದಿನಾಯಿಗಳು ಭಯ ಹುಟ್ಟಿಸಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.