/newsfirstlive-kannada/media/media_files/2025/10/21/lokapal-wants-bmw-cars02-2025-10-21-14-27-43.jpg)
ಲೋಕಪಾಲ್ ಅಧ್ಯಕ್ಷ A.M. ಖಾನ್ವಿಲ್ಕರ್, ಸದಸ್ಯ ಜಸ್ಟೀಸ್ ಎಲ್.ನಾರಾಯಣಸ್ವಾಮಿ
ದೇಶದ ಭ್ರಷ್ಟಾಚಾರ ವಿರೋಧಿ ಸಂಸ್ಥೆ ಲೋಕಪಾಲ್ ಅಧ್ಯಕ್ಷರು ಮತ್ತು ಸದಸ್ಯರು ಈಗ ಐಷಾರಾಮಿ ಬಿಎಂಡಬ್ಲ್ಯು ಕಾರ್ ಗಳಲ್ಲಿ ಓಡಾಡಲು ಬಯಸಿದ್ದಾರೆ. ಒಂದೇ ಭಾರಿಗೆ ಏಳು ಬಿಎಂಡಬ್ಲ್ಯು ಕಾರ್ ಖರೀದಿಸಲು ಟೆಂಡರ್ ಕರೆದಿದ್ದಾರೆ. ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್ ಈಗ ಲೋಕಪಾಲ್ ಅಧ್ಯಕ್ಷರಾಗಿದ್ದಾರೆ. ಇನ್ನೂಳಿದಂತೆ 6 ಮಂದಿ ಸದಸ್ಯರಿದ್ದಾರೆ. ಅಧ್ಯಕ್ಷರು ಮತ್ತು ಸದಸ್ಯರು ಸೇರಿದಂತೆ ಎಲ್ಲ ಏಳು ಮಂದಿಗೂ ಬಿಎಂಡಬ್ಲ್ಯು ಕಾರ್ ಖರೀದಿ ಮಾಡಲಾಗುತ್ತಿದೆ. ಪ್ರತಿಯೊಂದು ಕಾರಿನ ಬೆಲೆ ಬರೋಬ್ಬರಿ 70 ಲಕ್ಷ ರೂಪಾಯಿ. 7 ಮಂದಿಗೆ ಕಾರ್ ಖರೀದಿಗೆ ಅಂದಾಜು 5 ಕೋಟಿ ರೂಪಾಯಿ ವೆಚ್ಚವಾಗಲಿದೆ.
ಬಿಎಂಡಬ್ಲ್ಯು ಕಂಪನಿಯೇ ಲೋಕಪಾಲ್ ಸಂಸ್ಥೆಯ ಚಾಲಕರಿಗೆ ಬಿಎಂಡಬ್ಲ್ಯು ಕಾರ್ ಚಾಲನೆ ಮಾಡುವ ತರಬೇತಿಯನ್ನು ನೀಡಬೇಕು ಎಂದು ಟೆಂಡರ್ ನಲ್ಲಿ ಹೇಳಿದೆ. ಕಾರ್ ಗಳ ಎಲೆಕ್ಟ್ರಾನಿಕ್ ವ್ಯವಸ್ಥೆ, ಅಪರೇಷನ್ ಬಗ್ಗೆ ಚಾಲಕರಿಗೆ ಸರಿಯಾಗಿ ತಿಳಿಸಿಕೊಡಬೇಕು.
ಅಕ್ಟೋಬರ್ 16 ರಂದು ಬಿಎಂಡಬ್ಲ್ಯು ಕಾರ್ ಪೂರೈಕೆಗೆ ಟೆಂಡರ್ ನೀಡಲಾಗಿದೆ. ಪ್ರತಿಷ್ಠಿತ ಏಜೆನ್ಸಿಗಳಿಂದ ಮುಕ್ತ ಟೆಂಡರ್ ಗಳನ್ನು ಆಹ್ವಾನಿಸುತ್ತಿದ್ದೇವೆ ಎಂದು ಹೇಳಲಾಗಿದೆ. 90 ದಿನಗೊಳಗಾಗಿ ಟೆಂಡರ್ ಸಲ್ಲಿಸಬೇಕು.
BMW ಕಾರ್
ಐಷಾರಾಮಿ ಬಿಎಂಡಬ್ಲ್ಯು ಕಾರ್ ಖರೀದಿಗೆ ಟೆಂಡರ್ ಕರೆದಿರುವುದು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಹುಟ್ಟು ಹಾಕಿದೆ. ಭ್ರಷ್ಟಾಚಾರ ವಿರೋಧಿ ಸಂಸ್ಥೆಯಾದ ಲೋಕಾಪಾಲ್ ವಿರುದ್ಧ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಪ್ರಶಾಂತ್ ಭೂಷಣ್ ಕಿಡಿಕಾರಿದ್ದಾರೆ.
ಭ್ರಷ್ಟಾಚಾರದಿಂದ ತೊಂದರೆಗೊಳಗಾಗದ ಮತ್ತು ತಮ್ಮ ಐಷಾರಾಮಿಗಳಿಂದ ಸಂತೋಷವಾಗಿರುವ ಸೇವಕ ಸದಸ್ಯರನ್ನು ನೇಮಿಸುವ ಮೂಲಕ ಸರ್ಕಾರವು ಲೋಕಪಾಲವನ್ನು "ಮಣ್ಣಿನಿಂದ ಪುಡಿಪುಡಿ" ಮಾಡಿದೆ ಎಂದು ಪ್ರಶಾಂತ್ ಭೂಷಣ್ ಆರೋಪಿಸಿದರು. ಅವರು ಈಗ ತಮಗಾಗಿ 70L BMW ಕಾರುಗಳನ್ನು ಖರೀದಿಸುತ್ತಿದ್ದಾರೆ! ಎಂದು ಸುಪ್ರೀಂಕೋರ್ಟ್ ವಕೀಲ ಹಾಗೂ ಲೋಕಪಾಲ್ ಸ್ಥಾಪನೆಗಾಗಿ ಅಣ್ಣಾ ಹಜಾರೆ ಜೊತೆ ಹೋರಾಡಿದ್ದ ಪ್ರಶಾಂತ್ ಭೂಷಣ್ ಟೀಕಿಸಿದ್ದಾರೆ.
ಲೋಕಪಾಲ್ ಅಧ್ಯಕ್ಷರು, ಸದಸ್ಯರು ಐಷಾರಾಮಿ ಜೀವನ ನಡೆಸಲು ಬಯಸುತ್ತಿದ್ದಾರೆ. ಇವರು ಭ್ರಷ್ಟಾಚಾರದಿಂದ ತೊಂದರೆಗೊಳಗಾಗಿಲ್ಲ. ಲೋಕಪಾಲ್ ಅನ್ನು ಕೇಂದ್ರ ಸರ್ಕಾರವು ಮಣ್ಣಿನಿಂದ ಪುಡಿ ಪುಡಿ ಮಾಡಿದೆ ಎಂದು ಪ್ರಶಾಂತ್ ಭೂಷಣ್ ಟೀಕಿಸಿದ್ದಾರೆ.
The institution of Lokpal has been ground to dust by the Modi govt, by keeping it vacant for many years & then appointing servile members who are not bothered by graft & are happy with their luxuries. They are now buying 70L BMW cars for themselves! pic.twitter.com/AEEE2gPMtp
— Prashant Bhushan (@pbhushan1) October 21, 2025
ಇನ್ನೂ ಲೋಕಪಾಲ್ ನಲ್ಲಿ ಸುಪ್ರೀಂಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ಅಧ್ಯಕ್ಷರಾಗಿದ್ದಾರೆ. ಕರ್ನಾಟಕ ಹೈಕೋರ್ಟ್ ನ ಹಂಗಾಮಿ ಸಿಜೆ ಆಗಿದ್ದ ಎಲ್.ನಾರಾಯಣಸ್ವಾಮಿ ಸದಸ್ಯರಾಗಿದ್ದಾರೆ. ಜಸ್ಟೀಸ್ ಸಂಜಯ ಯಾದವ್ , ಜಸ್ಟೀಸ್ ರಿಜು ರಾಜ್ ಅವಸ್ಥಿ ಸದಸ್ಯರಾಗಿದ್ದಾರೆ. ಸಿಬಿಡಿಟಿ ಮಾಜಿ ಅಧ್ಯಕ್ಷ ಸುಶೀಲ್ ಚಂದ್ರ ಸದಸ್ಯರಾಗಿದ್ದಾರೆ. ಜೊತೆಗೆ ಗುಜರಾತ್‌ನ ಕೇಡರ್‌ನ ನಿವೃತ್ತ ಐಎಎಸ್ ಅಧಿಕಾರಿ ಪಂಕಜ್ ಕುಮಾರ್ ಸದಸ್ಯರಾಗಿದ್ದಾರೆ. ಮಧ್ಯಪ್ರದೇಶ ಕೇಡರ್‌ನ ನಿವೃತ್ತ ಐಎಎಸ್ ಅಧಿಕಾರಿ ಅಜಯ ಟಿರ್ಕೆ ಲೋಕಪಾಲ್ ಸದಸ್ಯರಾಗಿದ್ದಾರೆ. ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ 6 ಮಂದಿ ಸದಸ್ಯರಾಗಿ ನೇಮಕವಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ