/newsfirstlive-kannada/media/media_files/2025/10/21/lokapal-wants-bmw-cars03-2025-10-21-14-33-37.jpg)
ಲೋಕಪಾಲ್ ನಿಂದ ಬಿಎಂಡಬ್ಲ್ಯು ಕಾರ್ ಖರೀದಿ ನಿರ್ಧಾರ ರದ್ದು
ದೇಶದಲ್ಲಿ ಉನ್ನತ ರಾಜಕಾರಣಿಗಳು, ಅಧಿಕಾರಿಗಳು ಭ್ರಷ್ಟಾಚಾರ ಎಸಗಿದಾಗ ಶಿಕ್ಷಿಸಲು ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಬಲ ತುಂಬಲು ಲೋಕಪಾಲ್ ಸಂಸ್ಥೆ ಸ್ಥಾಪಿಸಲಾಗಿದೆ. ಆದರೇ, ಲೋಕಪಾಲ್ ಸಂಸ್ಥೆಯ ಅಧ್ಯಕ್ಷರು ಹಾಗೂ 6 ಮಂದಿ ಸದಸ್ಯರು ಐಷಾರಾಮಿ, ದುಬಾರಿ ಬಿಎಂಡಬ್ಲ್ಯು ಕಾರ್ ಖರೀದಿಗೆ ಮುಂದಾಗಿದ್ದರು. ಇದರ ವಿರುದ್ಧ ದೇಶದಲ್ಲಿ ತೀವ್ರ ಟೀಕೆ ಎದುರಾಗಿತ್ತು. ಲೋಕಪಾಲ್ ಅನ್ನು ದುಬಾರಿ ಖರ್ಚು ಮಾಡಲು ಸ್ಥಾಪಿಸಿಲ್ಲ ಎಂದು ಅನೇಕರು ಟೀಕಿಸಿದ್ದರು. ಈಗ ಲೋಕಪಾಲ್ ಸಂಸ್ಥೆ ತನ್ನ ನಿರ್ಧಾರದಿಂದ ಯೂ ಟರ್ನ್ ಹೊಡೆದಿದೆ. ದೇಶದ ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡಿದೆ.
ಲೋಕಪಾಲ್ ಏಳು ದುಬಾರಿ BMW ಕಾರುಗಳನ್ನು ಖರೀದಿಸುವುದರಿಂದ ಹಿಂದೆ ಸರಿದಿದೆ. ಭಾರತದ ಲೋಕಪಾಲ್ ಈಗ ವಿವಾದಾತ್ಮಕ ಆದೇಶವನ್ನು ರದ್ದುಗೊಳಿಸಿದೆ. ಲೋಕಪಾಲ್ ಸಂಸ್ಥೆಗೆ ಏಳು ದುಬಾರಿ ಬಿಎಂಡಬ್ಲ್ಯು ಕಾರ್ ಖರೀದಿಸುವುದು ತೀವ್ರ ಆಕ್ಷೇಪ, ವಿವಾದ, ಟೀಕೆಗೆ ಕಾರಣವಾಗಿತ್ತು. ಭ್ರಷ್ಟಾಚಾರ ವಿರೋಧಿ ಸಂಸ್ಥೆಯಾಗಿ ಜನ್ಮ ತಳೆದ ಲೋಕಪಾಲ್ ಮುಖ್ಯಸ್ಥರು, ಸದಸ್ಯರಿಗೇಕೆ ಐಷಾರಾಮಿ ಕಾರ್? ಇದು ದೇಶದ ಜನ ಸಾಮಾನ್ಯರ ತೆರಿಗೆ ಹಣದ ಪೋಲು ಎಂಬ ಚರ್ಚೆಗಳು ನಡೆದಿದ್ದವು. ಲೋಕಪಾಲ್ ನಿಂದ ಯಾವುದೇ ಭ್ರಷ್ಟಾಚಾರವನ್ನು ಮಟ್ಟ ಹಾಕಲು ಆಗಿಲ್ಲ. ಭ್ರಷ್ಟ ರಾಜಕಾರಣಿಗಳು, ರಾಜಕಾರಣಿಗಳನ್ನು ಶಿಕ್ಷಿಸುವಂಥ ಕ್ರಮಗಳನ್ನು ಕೈಗೊಂಡಿಲ್ಲ. ಹೀಗಾಗಿ ಇಂಥ ಲೋಕಪಾಲ್ ಸಂಸ್ಥೆಗೇಕೆ ಐಷಾರಾಮಿ, ದುಬಾರಿ ಕಾರ್ ಗಳು ಎಂದು ಜನ ಸಾಮಾನ್ಯರು ಪ್ರಶ್ನಿಸಿದ್ದರು.
"ಆಡಳಿತಾತ್ಮಕ ಕಾರಣಗಳು/ಸಮಸ್ಯೆಗಳಿಂದಾಗಿ" ಟೆಂಡರ್ ಅನ್ನು ರದ್ದುಗೊಳಿಸಲಾಗಿದೆ ಮತ್ತು ನವೆಂಬರ್ 27, 2025 ರ ಲೋಕಪಾಲ್‌ನ ಪೂರ್ಣ ಪೀಠದ ನಿರ್ಣಯದ ಮೂಲಕ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.
/filters:format(webp)/newsfirstlive-kannada/media/media_files/2025/10/21/lokapal-wants-bmw-cars02-2025-10-21-14-27-43.jpg)
ಕಳೆದ ವರ್ಷ ಅಕ್ಟೋಬರ್ 20 ರಂದು, ಭಾರತೀಯ ಲೋಕಪಾಲ್ ಸುಮಾರು 70 ಲಕ್ಷ ರೂಪಾಯಿ ಮೌಲ್ಯದ ಏಳು ಹೈ-ಎಂಡ್ BWM ಕಾರುಗಳನ್ನು ಖರೀದಿಸಲು ಬಯಸಿತ್ತು . ಅಕ್ಟೋಬರ್ 16 ರಂದು ಅದಕ್ಕಾಗಿ ಅಧಿಕೃತ ಟೆಂಡರ್ ಅನ್ನು ಕರೆಯಿತು.
ಒಟ್ಟು ಖರೀದಿಯು ಸುಮಾರು 5 ಕೋಟಿ ರೂಪಾಯಿಗಳಾಗಿದ್ದು, ಹೆಚ್ಚಿನ ಟೀಕೆಗೆ ಕಾರಣವಾಯಿತು.
ಲೋಕಪಾಲ್ ಖರೀದಿಯೊಂದಿಗೆ ಮುಂದಕ್ಕೆ ಹೋಗಿದ್ದರೆ, ಏಳು BMW ಗಳ ಖರೀದಿಗೆ ತನ್ನ ವಾರ್ಷಿಕ ಬಜೆಟ್‌ನ ಶೇಕಡಾ 10 ಕ್ಕಿಂತ ಹೆಚ್ಚು ಹಣವನ್ನು ಸುಮಾರು 5 ಕೋಟಿ ರೂಪಾಯಿಗಳಿಗೆ ಖರ್ಚು ಮಾಡುತ್ತಿತ್ತು. ದಾಖಲೆಗಳ ಪ್ರಕಾರ, 2025-26 ರ ಲೋಕಪಾಲ್‌ನ ಒಟ್ಟು ಬಜೆಟ್ 44.32 ಕೋಟಿ ರೂಪಾಯಿಗಳು.
ಕುತೂಹಲಕಾರಿ ಅಂಶವೆಂದರೇ, 2023-24ರ ಲೋಕಪಾಲ ಬಜೆಟ್ ಮತ್ತು ವೆಚ್ಚದ ಪ್ರಕಾರ, "ಮೋಟಾರು ವಾಹನಗಳಿಗೆ" 12 ಲಕ್ಷ ರೂ.ಗಳನ್ನು ಬಜೆಟ್‌ನಲ್ಲಿ ನಿಗದಿಪಡಿಸಲಾಗಿತ್ತು.
ಆದರೇ, 2023-24ರಲ್ಲಿ ಲೋಕಪಾಲ್ ಮೋಟಾರು ವಾಹನಗಳಿಗೆ ಯಾವುದೇ ಹಣವನ್ನು ಖರ್ಚು ಮಾಡಲಿಲ್ಲ. ಏಕೆಂದರೆ ನಿಜವಾದ ವೆಚ್ಚವು "ಶೂನ್ಯ" ಎಂದು ತೋರಿಸಲಾಗಿದೆ. ಅದಕ್ಕೂ ಮೊದಲು, ಲೋಕಪಾಲ್ ಮೋಟಾರು ವಾಹನಗಳ ಮೇಲಿನ ಯಾವುದೇ ವೆಚ್ಚವನ್ನು ಲೆಕ್ಕ ಹಾಕಿರಲಿಲ್ಲ.
ಮಾಜಿ ಐಪಿಎಸ್ ಅಧಿಕಾರಿ ಮತ್ತು ಒಮ್ಮೆ ಜನಲೋಕಪಾಲದ ಪ್ರತಿಪಾದಕಿ ಕಿರಣ್ ಬೇಡಿ, ಲೋಕಪಾಲ್ ಬಿಎಂಡಬ್ಲ್ಯು ಗಳನ್ನು ಖರೀದಿಸುವ ಕ್ರಮವನ್ನು ಟೀಕಿಸಿದ್ದರು. ಲೋಕಪಾಲ್ ಅನ್ನು ದುಬಾರಿ ವೆಚ್ಚ ಮಾಡಲು ರಚಿಸಿಲ್ಲ. ಇದು ನಿಜವಾಗಿಯೂ ತಪ್ಪಿಸಬಹುದಾದ ನಿರ್ಧಾರ ಕಿರಣ್ ಬೇಡಿ ಹೇಳಿದ್ದರು.
/filters:format(webp)/newsfirstlive-kannada/media/media_files/2026/01/01/lokpal-cancels-bmw-cars-buying-tender-2026-01-01-18-23-01.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us