/newsfirstlive-kannada/media/media_files/2025/10/02/maharashtra-shops-open-24-hours-2025-10-02-18-25-01.jpg)
ಮಹಾರಾಷ್ಟ್ರದಲ್ಲಿ ದಿನದ 24 ಗಂಟೆ ಅಂಗಡಿ ತೆರೆಯಲು ಅವಕಾಶ
ಮಹಾರಾಷ್ಟ್ರ ರಾಜ್ಯ ಸರ್ಕಾರವು ಲಿಕ್ಕರ್ ಮಾರಾಟ ಮಾಡುವ ಬಾರ್ ಗಳನ್ನು ಹೊರತುಪಡಿಸಿ ಉಳಿದೆಲ್ಲಾ ಅಂಗಡಿ, ಹೋಟೇಲ್, ರೆಸ್ಟೋರೆಂಟ್ ಗಳು ದಿನದ 24 ಗಂಟೆ ಕಾರ್ಯನಿರ್ವಹಿಸಲು ಅವಕಾಶ ಕೊಟ್ಟು ಆದೇಶ ಹೊರಡಿಸಿದೆ. ಈ ಮೊದಲು ಮುಂಬೈನಲ್ಲಿ ಮಧ್ಯರಾತ್ರಿವರೆಗೂ ಅಂಗಡಿ, ಮುಂಗಟ್ಟು, ಶಾಪಿಂಗ್ ಮಾಲ್ ತೆರೆಯಲು ಅವಕಾಶ ನೀಡಲಾಗಿತ್ತು. ಆದರೇ, ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಲಿಕ್ಕರ್ ಮಾರಾಟ ಮಾಡುವ ಬಾರ್ ಹೊರತುಪಡಿಸಿ ಉಳಿದೆಲ್ಲವೂ ದಿನದ 24 ಗಂಟೆ ತೆರೆಯಲು ಅವಕಾಶ ನೀಡಲಾಗಿದೆ. ಇದರಿಂದಾಗಿ ವ್ಯಾಪಾರ, ವಾಣಿಜ್ಯ ಚಟುವಟಿಕೆಗಳನ್ನು ಮುಕ್ತವಾಗಿ ನಡೆಸಲು ಅವಕಾಶವಾಗುತ್ತೆ. ವ್ಯಾಪಾರ, ವಾಣಿಜ್ಯ ಚಟುವಟಿಕೆಗಳಿಂದ ವ್ಯಾಪಾರಿಗಳು, ಗ್ರಾಹಕರಿಬ್ಬರಿಗೂ ಅನುಕೂಲವಾಗುತ್ತೆ. ದೇಶದ ವಾಣಿಜ್ಯ ರಾಜಧಾನಿ ಮುಂಬೈ ಎಂದೂ ಕೂಡ ಮಲಗಲ್ಲ. ರಾತ್ರಿ ಎಲ್ಲ ಚಟುವಟಿಕೆಗಳು ನಡೆಯುತ್ತಲೇ ಇರುತ್ತಾವೆ. ಹೀಗಾಗಿ ಈ ಹೊಸ ಆದೇಶವನ್ನು ಮಹಾರಾಷ್ಟ್ರ ರಾಜ್ಯ ಸರ್ಕಾರ ಹೊರಡಿಸಿದೆ.
ಕೈಗಾರಿಕೆಗಳು, ಇಂಧನ, ಕಾರ್ಮಿಕ ಮತ್ತು ಗಣಿಗಾರಿಕೆ ಇಲಾಖೆಯು ಈ ನಿರ್ಧಾರದ ಪರಿಣಾಮಕಾರಿ ಅನುಷ್ಠಾನದ ಕುರಿತು ಸುತ್ತೋಲೆಯನ್ನು ಹೊರಡಿಸಿದೆ. ರಾಜ್ಯದ ಹೆಚ್ಚಿನ ಅಂಗಡಿಗಳು ಮತ್ತು ವ್ಯವಹಾರಗಳು ಈಗ ದಿನದ 24 ಗಂಟೆಗಳ ಕಾಲ ತೆರೆದಿರಬಹುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ, ಇದಕ್ಕೆ ಹೊರತಾಗಿ ಪರ್ಮಿಟ್ ರೂಮ್‌ಗಳು, ಬಿಯರ್ ಬಾರ್‌ಗಳು ಮತ್ತು ವೈನ್ ಅಂಗಡಿಗಳಂತಹ ಮದ್ಯವನ್ನು ಪೂರೈಸುವ ಅಥವಾ ಮಾರಾಟ ಮಾಡುವ ಅಂಗಡಿಗಳಿಗೆ ಮಾತ್ರ ನಿರ್ಬಂಧ ವಿಧಿಸಲಾಗಿದೆ.
ಇದರಿಂದ ಬ್ಯುಸಿನೆಸ್ ಚಟುವಟಿಕೆಗಳಿಗೆ ಉತ್ತೇಜನ ಸಿಗಲಿದೆ. ಪೊಲೀಸ್ ಇಲಾಖೆ ಹಾಗೂ ಕೈಗಾರಿಕೆ, ಕಾರ್ಮಿಕ, ಸ್ಥಳೀಯ ಸಂಸ್ಥೆಗಳು ಸೇರಿದಂತೆ ಇತರೆ ಇಲಾಖೆಗಳಿಗೂ ಈ ಆದೇಶದ ಬಗ್ಗೆ ತಿಳಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.