/newsfirstlive-kannada/media/media_files/2025/09/07/ananda-mahindra-van-2025-09-07-12-17-22.jpg)
ಕೇಂದ್ರ ಸರ್ಕಾರ ಸೆಪ್ಟೆಂಬರ್ 22 ರಿಂದ ಹೊಸ ಜಿಎಸ್‌ಟಿ ಜಾರಿಗೆ ತರುತ್ತಿದೆ. ಆದರೆ ಆಟೋ ಮೊಬೈಲ್ ಉತ್ಪಾದಕ ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿ (Mahindra & Mahindra) ನಿನ್ನೆಯಿಂದಲೇ ಹೊಸ ಬೆಲೆಗಳನ್ನು ಜಾರಿಗೆ ತಂದಿದೆ. ಈಗ ಮಹೀಂದ್ರಾ ಕಂಪನಿಯ ಕಾರುಗಳನ್ನು ಖರೀದಿಸೋದ್ರಿಂದ 1.56 ಲಕ್ಷ ರೂಪಾಯಿ ಅಗ್ಗವಾಗಲಿದೆ.
ಹೌದು, ಜಿಎಸ್‌ಟಿ ದರ ಕಡಿತದ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಮಹೀಂದ್ರಾ ಅಂಡ್ ಮಹೀಂದ್ರಾ ಶನಿವಾರ ಪ್ರೀಮಿಯಂ ವಾಹನಗಳ ಮಾರಾಟ ಮತ್ತು ಮಾರುಕಟ್ಟೆಯನ್ನು ಹೆಚ್ಚಿಸಿದೆ. ಪ್ರಯಾಣಿಕ ವಾಹನಗಳು ತಕ್ಷಣದಿಂದ ಜಾರಿಗೆ ಬರುವಂತೆ 1.56 ಲಕ್ಷ ರೂ.ಗಳವರೆಗೆ ಬೆಲೆಗಳನ್ನು ಇಳಿಸಿದೆ.
ಪರಿಷ್ಕೃತ ಹೊಸ ಬೆಲೆ
ಪರಿಷ್ಕೃತ ಬೆಲೆಗಳು ಸೆಪ್ಟೆಂಬರ್ 6, 2025 ರಿಂದ ಜಾರಿಗೆ ಬಂದಿದೆ. ಡೀಲರ್‌ಶಿಪ್‌ಗಳಲ್ಲಿ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಪಾರದರ್ಶಕವಾಗಿ ನವೀಕರಿಸಲಾಗುತ್ತದೆ.
ಯಾವ ವಾಹ ಖರೀದಿಸಿದ್ರೆ ಎಷ್ಟು ಲಾಭ..? |
ಮಾಡೆಲ್ | ಪ್ರಸ್ತುತ GST + ಸೆಸ್ | ಹೊಸ GST | GST ಪ್ರಯೋಜನ |
ಬೊಲೆರೋ /ನಿಯೋ | 31% | 18% | ₹1.27 ಲಕ್ಷ |
XUV3XO ಪೆಟ್ರೋಲ್ | 29% | 18% | ₹1.40 ಲಕ್ಷ |
XUV3XO ಡೀಸೆಲ್ | 31% | 18% | ₹1.56 ಲಕ್ಷ |
ಥಾರ್ 2WD ಡೀಸೆಲ್ | 31% | 18% | ₹1.35 ಲಕ್ಷ |
ಥಾರ್ 4WD ಡೀಸೆಲ್ | 48% | 40% | ₹1.01 ಲಕ್ಷ |
ಸ್ಕಾರ್ಪಿಯೋ ಕ್ಲಾಸಿಕ್ | 48% | 40% | ₹1.01 ಲಕ್ಷ |
ಸ್ಕಾರ್ಪಿಯೋ ಎನ್ | 48% | 40% | ₹1.45 ಲಕ್ಷ |
ಥಾರ್ ರಾಕ್ಸ್ | 48% | 40% | ₹1.33 ಲಕ್ಷ |
XUV700 | 48% | 40% | ₹1.43 ಲಕ್ಷ |
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ