/newsfirstlive-kannada/media/media_files/2026/01/14/makara-jyothi-darshan-2026-01-14-19-44-41.jpg)
ಕೇರಳದ ಶಬರಿ ಮಲೆ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಇಂದು ಮಕರ ವಿಳಕ್ಕುಂ ಆಚರಣೆಗಳನ್ನು ಸಂಪ್ರದಾಯಬದ್ದವಾಗಿ ನಡೆಸಲಾಗಿದೆ. ಸಾವಿರಾರು ಅಯ್ಯಪ್ಪ ಭಕ್ತರು ಇಂದು ಶಬರಿಮಲೆಯಲ್ಲಿ ಅಯ್ಯಪ್ಪನ ದರ್ಶನ ಪಡೆದಿದ್ದಾರೆ.
ಇನ್ನೂ ಪ್ರತಿ ವರ್ಷದಂತೆ ಈ ವರ್ಷವೂ ಪೊನ್ನಂಬಲಮೇಡುವಿನಲ್ಲಿ ಮಕರ ಜ್ಯೋತಿಯ ದರ್ಶನ ಪಡೆದು ಭಕ್ತರು ಪುನೀತರಾಗಿದ್ದಾರೆ.
ಇಂದು ಮಧ್ಯಾಹ್ನದಿಂದಲೇ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಮಕರ ವಿಳಕ್ಕುಂ ಆಚರಣೆಗಳು ನಡೆದಿವೆ.
ಇಂದು ಸಂಜೆ 6.30 ರ ಬಳಿಕ ಪೊನ್ನಂಬಲಮೇಡು ಬೆಟ್ಟದಲ್ಲಿ ಮಕರ ಜ್ಯೋತಿಯ ದರ್ಶನವಾಗಿದೆ.
ಆದರೇ, ಇಂದು ನೈಸರ್ಗಿಕವಾಗಿ ಕಾಣಿಸಿಕೊಳ್ಳುವ ಜ್ಯೋತಿಯಲ್ಲ. ಮಾನವ ನಿರ್ಮಿತ ಜ್ಯೋತಿ ಎಂದು ಈ ಹಿಂದೆಯೇ ಕೇರಳ ಸರ್ಕಾರ ಸುಪ್ರೀಂಕೋರ್ಟ್ ನಲ್ಲಿ ಒಪ್ಪಿಕೊಂಡಿದೆ. ಆದರೇ, ಮಕರ ಜ್ಯೋತಿಯ ಬಗ್ಗೆ ಭಕ್ತರಲ್ಲಿ ನಂಬಿಕೆ, ಗೌರವ ಇದೆ. ಇಂದು ಮಕರ ಜ್ಯೋತಿ ಕಾಣಿಸಿಕೊಂಡಿದೆ.
/filters:format(webp)/newsfirstlive-kannada/media/media_files/2026/01/14/makara-jyothi-darshan-1-2026-01-14-19-45-49.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us