/newsfirstlive-kannada/media/media_files/2025/12/16/live-in-partner-2025-12-16-09-16-53.jpg)
ಇತ್ತೀಚೆಗೆ ಲಿವ್​-ಇನ್​ ರಿಲೇಷನ್​ಶಿಪ್​ಗಳು ಘೋರ ದುರಂತದಲ್ಲಿ ಅಂತ್ಯವಾಗುತ್ತಿವೆ. ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದ ವಿಚ್ಛೇದಿತ ಪ್ರೇಯಸಿಯ ತಲೆಯನ್ನೇ ಪಾಪಿ ಪ್ರಿಯತಮ ಕತ್ತರಿಸಿದ ದಾರುಣ ಘಟನೆ ಉತ್ತರ ಪ್ರದೇಶದ ಸಹಾರನ್‌ಪುರದಲ್ಲಿ ನಡೆದಿದೆ.
ಟ್ಯಾಕ್ಸಿ ಡ್ರೈವರ್ ಬಿಲಾಲ್ ಎಂಬಾತ ಉಮಾ ಎಂಬಾಕೆಯ ಜೊತೆ ಲಿವಿಂಗ್‌ನಲ್ಲಿದ್ದ. 30 ವರ್ಷದ ಉಮಾ ಜಾನಿ ಎಂಬಾತನನ್ನು ಮದುವೆಯಾಗಿದ್ದು, 13 ವರ್ಷದ ಮಗನಿದ್ದಾನೆ. ಒಂದೂವರೆ ವರ್ಷದ ಹಿಂದೆ ಉಮಾ ಹಾಗೂ ಜಾನಿಗೆ ಡಿವೋರ್ಸ್ ಆಗಿತ್ತು. ಬಳಿಕ ಉಮಾ ಪತಿ, ಮಗನನ್ನು ಬಿಟ್ಟು ಬಿಲಾಲ್ ಜೊತೆ ಲಿವ್ ಇನ್ ರಿಲೇಷನ್‌ನಲ್ಲಿದ್ದಳು.
ಈ ನಡುವೆ ಬಿಲಾಲ್‌ಗೆ ಬೇರೊಂದು ಹುಡುಗಿಯೊಂದಿಗೆ ಮದುವೆ ನಿಶ್ಚಯವಾಗಿತ್ತು. ಆದರೆ ಉಮಾ ತನ್ನನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದಳು. ಇದರಿಂದ ಹಿಮಾಚಲ ಪ್ರದೇಶಕ್ಕೆ ಹೋಗೋಣವೆಂದು ಉಮಾಳನ್ನು ತನ್ನ ಕಾರಿನಲ್ಲಿ ಹತ್ತಿಸಿಕೊಂಡು ಸಾಯಿಸಿ, ರುಂಡವನ್ನು ಕತ್ತರಿಸಿ, ಮೃತದೇಹವನ್ನು ಚೀಲಕ್ಕೆ ತುಂಬಿ ಹರಿಯಾಣ ಗಡಿಯಲ್ಲಿ ಬಿಸಾಕಿದ್ದ. ಸದ್ಯ ಪ್ರಕರಣ ಭೇದಿಸಿದ ಪೊಲೀಸರು ಆರೋಪಿ ಬಿಲಾಲ್‌ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us