/newsfirstlive-kannada/media/media_files/2025/07/31/dheeraj_kansal-2025-07-31-21-31-59.jpg)
ಗುರುಗ್ರಾಮ್‌ನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ 25 ವರ್ಷದ ವ್ಯಕ್ತಿಯೊಬ್ಬರು ದೆಹಲಿಯ ಗೋಲ್ ಮಾರ್ಕೆಟ್ ಪ್ರದೇಶದ ಏರ್ ಬಿಎನ್‌ಬಿ ಫ್ಲಾಟ್‌ನಲ್ಲಿ ಹೀಲಿಯಂ ಗ್ಯಾಸ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಧೀರಜ್ ಕನ್ಸಾಲ್ ಎಂಬ ಯುವಕ ಜುಲೈ 20 ರಿಂದ 28 ರವರೆಗೆ ಎಂಟು ದಿನಗಳವರೆಗೆ ಫ್ಲಾಟ್ ಅನ್ನು ಬುಕ್ ಮಾಡಿದ್ದರು ಇಂಡಿಯಾಮಾರ್ಟ್‌ನಲ್ಲಿ ಹುಡುಕಿದ ನಂತರ ಗಾಜಿಯಾಬಾದ್‌ನಲ್ಲಿಲ 3,500 ರೂ.ಗಳಿಗೆ ಹೀಲಿಯಂ ಗ್ಯಾಸ್ ಅನ್ನು ಖರೀದಿಸಿದ್ದರು. ಈಗ ಅದೇ ಹೀಲಿಯಂ ಗ್ಯಾಸ್ ಅನ್ನು ಏರ್ ಬಿಎನ್‌ಬಿ ಫ್ಲಾಟ್ ನಲ್ಲಿದ್ದಾಗ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತನ್ನ ಆತ್ಮಹತ್ಯೆಗೂ ಮೊದಲು ಧೀರಜ್ ಕನ್ಸಾಲ್ ಫೇಸ್‌ಬುಕ್‌ನಲ್ಲಿ ದೀರ್ಘ ಭಾವನಾತ್ಮಕ ಟಿಪ್ಪಣಿಯನ್ನು ಪೋಸ್ಟ್ ಮಾಡಿದ್ದಾರೆ, ಅದರಲ್ಲಿ "ಸಾವು ನನಗೆ ಜೀವನದ ಅತ್ಯಂತ ಸುಂದರವಾದ ಭಾಗವಾಗಿದೆ. ದಯವಿಟ್ಟು ನನ್ನ ಸಾವಿನ ಬಗ್ಗೆ ದುಃಖಿಸಬೇಡಿ. ಆತ್ಮಹತ್ಯೆ ತಪ್ಪಲ್ಲ ಏಕೆಂದರೆ ನನ್ನ ಮೇಲೆ ನನಗೆ ಯಾವುದೇ ಜವಾಬ್ದಾರಿಗಳಿಲ್ಲ ಎಂದು ಬರೆದಿದ್ದಾರೆ. ತನ್ನ ನಿರ್ಧಾರಕ್ಕೆ "ಯಾರನ್ನೂ ದೂಷಿಸಬಾರದು" ಎಂದು ಅವರು ಸ್ಪಷ್ಟಪಡಿಸಿದ್ದಾರೆ. "ಇದು ನನ್ನ ಆಯ್ಕೆ ಮಾತ್ರ. ನನ್ನ ಜೀವನದಲ್ಲಿ ನಾನು ಭೇಟಿಯಾದ ಪ್ರತಿಯೊಬ್ಬ ವ್ಯಕ್ತಿಯು ನನಗೆ ನಿಜವಾಗಿಯೂ ದಯೆ ತೋರಿಸಿದ್ದರು." ಆದ್ದರಿಂದ ದಯವಿಟ್ಟು ಈ ಕಾರಣದಿಂದಾಗಿ ಯಾರಿಗೂ ತೊಂದರೆ ಕೊಡಬೇಡಿ ಎಂದು ನಾನು ಪೊಲೀಸರು ಮತ್ತು ಸರ್ಕಾರವನ್ನು ವಿನಂತಿಸುತ್ತೇನೆ ಎಂದು ಧೀರಜ್ ಕನ್ಸಾಲ್ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ತಮ್ಮ ಫೇಸ್ ಬುಕ್ ಪೋಸ್ಟ್‌ನಲ್ಲಿ ಧೀರಜ್ ಕನ್ಸಾಲ್, "ಇದು ನನ್ನ ಆಯ್ಕೆ, ನನ್ನ ಜೀವನ ಮತ್ತು ನನ್ನ ನಿಯಮಗಳು" ಎಂದು ಹೇಳುತ್ತಾ, ತಮ್ಮ ಅಸ್ತಿತ್ವವನ್ನು "ಸುಳ್ಳು" ಎಂದು ಬಣ್ಣಿಸಿದ್ದಾರೆ. ಈ ಭೂಮಿಯಲ್ಲಿ ಮತ್ತೆ ಹುಟ್ಟಲು ಬಯಸುವುದಿಲ್ಲ ಎಂದು ಹೇಳಿದ್ದಾರೆ. ಅವರು ತಮ್ಮನ್ನು ದ್ವೇಷಿಸುತ್ತಾ ಮತ್ತು ತಮ್ಮನ್ನು "ಸೋತವರು" ಎಂದು ಕರೆದುಕೊಂಡಿದ್ದಾರೆ.
ದೆಹಲಿಯಲ್ಲಿ ಬೆಳೆದ ಹರಿಯಾಣದ ಕರ್ನಾಲ್ ಮೂಲದ ಧೀರಜ್ ಕನ್ಸಾಲ್ , ತಾನು ಅನೇಕ ಕೆಲಸ ಮಾಡಿದ್ದೇನೆ ಆದರೆ ಕೊನೆಯಲ್ಲಿ ಏನನ್ನೂ ಸಾಧಿಸಿಲ್ಲ ಎಂದು ಬರೆದಿದ್ದಾರೆ. ಅನೇಕ ವರ್ಷಗಳಿಂದ ಹಲವಾರು ಜನರು ತಮಗೆ ಸಹಾಯ ಮಾಡಲು ಪ್ರಯತ್ನಿಸಿದ್ದಾರೆ, ಆದರೆ ಬದಲಾಗಲು ಸಾಧ್ಯವಾಗದ ಕಾರಣ ತಾವು "ಮೂರ್ಖ", "ಮೂರ್ಖ" ಮತ್ತು "ಮೂರ್ಖ" ಎಂದು ಹೇಳಿಕೊಂಡಿದ್ದಾರೆ.
ತಮ್ಮ ಅಜ್ಜಿ ಅವರ ಮರಣದ ನಂತರ ತಾನು ತುಂಬಾ ಕಷ್ಟಪಟ್ಟಿದ್ದೇವೆ ಎಂದು ಧೀರಜ್ ಕನ್ಸಾಲ್ ಹೇಳಿದ್ದಾರೆ. ಇದರಿಂದಾಗಿ ಅವರು ತಮ್ಮ ಮನೆಯಿಂದ ಹೊರಗೆ ಹೆಜ್ಜೆ ಇಡಲು ಸಹ ಸಾಧ್ಯವಾಗಲಿಲ್ಲ. "ನಾನು ಇದನ್ನು ವರ್ಷಗಳ ಹಿಂದೆಯೇ ಮಾಡಬೇಕಾಗಿತ್ತು" ಎಂದು ಅವರು ಬರೆದಿದ್ದಾರೆ. ತಮ್ಮ ಸಾವಿನ ಬಗ್ಗೆ ಎಲ್ಲರೂ ದುಃಖಿತರಾಗಬೇಡಿ ಎಂದು ಅವರು ಕೇಳಿಕೊಂಡಿದ್ದಾರೆ. ತನಗೆ ಯಾವುದೇ ಪ್ರಮುಖ ಜವಾಬ್ದಾರಿಗಳಿಲ್ಲ ಮತ್ತು ಯಾರೊಂದಿಗೂ ಹೆಚ್ಚು ಭಾವನಾತ್ಮಕವಾದ ಸಂಬಂಧವೂ ಇಲ್ಲ ಎಂದು ಧೀರಜ್ ಕನ್ಸಾಲ್ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದಿದ್ದಾರೆ. ಜೊತೆಗೆ ಏರ್ ಬಿಎನ್‌ಬಿ ಪ್ಲ್ಯಾಟ್ ನಲ್ಲಿ ಮತ್ತೊಂದು ಡೆತ್ ನೋಟ್ ಅನ್ನು ಧೀರಜ್ ಕನ್ಸಾಲ್ ಬರೆದಿಟ್ಟಿದ್ದರು. ತನ್ನ ಸಾವಿನ ಕಾರಣ ಯಾರಿಗೂ ತೊಂದರೆ ನೀಡಬಾರದು ಎಂದು ಪೊಲೀಸರು ಮತ್ತು ಸರ್ಕಾರವನ್ನು ಡೆತ್ ನೋಟ್ ನಲ್ಲಿ ಒತ್ತಾಯಿಸಿದ್ದಾರೆ. "ನಾನು ನಿಮ್ಮೆಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ನಿಮ್ಮಲ್ಲಿ ಯಾರೂ ತೊಂದರೆಗೆ ಸಿಲುಕಬಾರದು ಎಂಬ ಕಾರಣಕ್ಕೆ ನಾನು ಯಾವುದೇ ಹೆಸರುಗಳನ್ನು ಹೇಳಲು ಹೋಗುವುದಿಲ್ಲ" ಎಂದು ಧೀರಜ್ ಕನ್ಸಾಲ್ ಹೇಳಿದ್ದಾರೆ. ತಮ್ಮ ಹಣವನ್ನು ಅನಾಥಾಶ್ರಮ ಅಥವಾ ವೃದ್ಧಾಶ್ರಮಕ್ಕೆ ದಾನ ಮಾಡಬೇಕೆಂದು ಹಾಗೂ ತನ್ನ ಅಂಗಾಂಗಗಳನ್ನು ದಾನ ಮಾಡಬೇಕೆಂದು ಅವರು ಅಂತಿಮ ಆಶಯವನ್ನು ವ್ಯಕ್ತಪಡಿಸಿದ್ದಾರೆ.
ಚಂದ್ರಮೋಹನ್, ನ್ಯೂಸ್ ಫಸ್ಟ್.