/newsfirstlive-kannada/media/media_files/2025/08/04/bhuranpura-murder22-2025-08-04-16-02-03.jpg)
ಮಧ್ಯಪ್ರದೇಶದಲ್ಲಿ ವ್ಯಕ್ತಿಯೊಬ್ಬ 35 ವರ್ಷದ ಮಹಿಳೆಯನ್ನು ಕುತ್ತಿಗೆ ಕುಯ್ದು ಹತ್ಯೆ ಮಾಡಿದ್ದಾನೆ. ಈ ಹತ್ಯೆಗೆ ಕಾರಣವಾಗಿದ್ದು ಹಿಂದೂ ಮಹಿಳೆಯು ಇಸ್ಲಾಂ ಧರ್ಮಕ್ಕೆ ಮತಾಂತರವಾಗಲು ನಿರಾಕರಿಸಿದ್ದು. ಮಧ್ಯಪ್ರದೇಶದ ಬುರಾನ್‌ಪುರದ ನೇಪಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಭಾಗ್ಯಶ್ರೀ ನಾಮದೇವ್ ಧನುಕ್ ಹತ್ಯೆಯಾದ ಮಹಿಳೆ. ಶೇಖ್ ರಾಯಿಸ್ ಎಂಬಾತ ಕುತ್ತಿಗೆ ಕುಯ್ದು ಭಾಗ್ಯಶ್ರೀಯನ್ನು ಹತ್ಯೆ ಮಾಡಿದ್ದಾನೆ. ಜೊತೆಗೆ ಚಾಕುವಿನಿಂದ ಸಾಕಷ್ಟು ಭಾರಿ ಇರಿದು ಕೊಂದಿದ್ದಾನೆ. ಹತ್ಯೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮತಾಂತರವಾಗಲು ನಿರಾಕರಿಸಿದ್ದಕ್ಕೆ ಮಹಿಳೆಯನ್ನು ಹತ್ಯೆಗೈಯ್ದ ಈ ಘಟನೆಯು ಮಧ್ಯಪ್ರದೇಶ ರಾಜ್ಯದಲ್ಲಿ ಜನರಲ್ಲಿ ಭಾರಿ ಅಘಾತ ತಂದಿದೆ, ಆಕ್ರೋಶವನ್ನು ಮೂಢಿಸಿದೆ. ಹತ್ಯೆ ಖಂಡಿಸಿ ಜನರು ತೀವ್ರ ಪ್ರತಿಭಟನೆ ನಡೆಸಿದ್ದಾರೆ.
ಶೇಖ್ ರಾಯಿಸ್, ಯಾವಾಗಲೂ ತನ್ನ ಸೋದರಿಯ ಜಡೆ ಹಿಡಿದು ಎಳೆದಾಡುತ್ತಿದ್ದ, ಹೊಡೆಯುತ್ತಿದ್ದ, ಕಿರುಕುಳ ನೀಡುತ್ತಿದ್ದ. ತನ್ನನ್ನು ಮದುವೆಯಾಗಲು ಇಸ್ಲಾಂಗೆ ಮತಾಂತರವಾಗುವ ಎಂದು ಒತ್ತಡ ಹೇರುತ್ತಿದ್ದ. ನನ್ನ ಸೋದರಿ ಇಸ್ಲಾಂಗೆ ಮತಾಂತರವಾಗಲು ನಿರಾಕರಿಸಿದ್ದಳು. ಹೀಗಾಗಿ ರಾತ್ರಿ ವೇಳೆ ಮನೆಗೆ ನುಗ್ಗಿ ಕುತ್ತಿಗೆ ಕುಯ್ದು ಹತ್ಯೆ ಮಾಡಿದ್ದಾನೆ ಎಂದು ಭಾಗ್ಯಶ್ರೀ ಸೋದರಿ ಸುಭದ್ರಭಾಯಿ ಹೇಳಿದ್ದಾರೆ.
ಆರೋಪಿಯ ವಿರುದ್ಧ ಕೊಲೆ ಮತ್ತು ದೌರ್ಜನ್ಯದ ಆರೋಪದಡಿ ಕೇಸ್ ದಾಖಲಿಸಿಕೊಳ್ಳಲಾಗಿದೆ. ಆರೋಪಿ ಸದ್ಯ ಪೊಲೀಸರ ವಶದಲ್ಲಿದ್ದಾನೆ ಎಂದು ಬುರಾನ್ ಪುರ ಜಿಲ್ಲೆಯ ಅಡಿಷನಲ್ ಎಸ್ಪಿ ಅಂತರ್ ಸಿಂಗ್ ಕನೇಶ್ ಹೇಳಿದ್ದಾರೆ.
ಭಾಗ್ಯಶ್ರೀ ಎಂಬ ಹಿಂದೂ ಮಹಿಳೆಯನ್ನು ಬಲವಂತದ ಮತಾಂತರದ ಕಾರಣಕ್ಕಾಗಿ ಹತ್ಯೆ ಮಾಡಿರುವುದು ಹಿಂದೂ ಸಮುದಾಯದಲ್ಲಿ ತೀವ್ರ ಆಕ್ರೋಶ ಮೂಢಿಸಿದೆ. ಇದೊಂದು ಲವ್ ಜಿಹಾದ್ ಪ್ರಕರಣ. ಪೊಲೀಸರು ಈ ಕೇಸ್ ನಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಎಂದು ಜನರು ಆರೋಪಿಸಿದ್ದಾರೆ. ಮೂರು ನಾಲ್ಕು ದಿನದ ಹಿಂದೆ ಭಾಗ್ಯಶ್ರೀ , ಪೊಲೀಸರಿಗೆ ದೂರು ನೀಡಿದ್ದರು. ಆದರೇ, ಪೊಲೀಸರು ಆರೋಪಿಯನ್ನು ಬಿಡುಗಡೆ ಮಾಡಿದ್ದರು. ಆರೋಪಿಯನ್ನು ಗಲ್ಲಿಗೇರಿಸಬೇಕೆಂದು ಪ್ರತಿಭಟನಾನಿರತ ಜನರು ಆಗ್ರಹಿಸಿದ್ದಾರೆ.
ಹತ್ಯೆ ಮಾಡಿದ ಶೇಖ್ ರಾಯಿಸ್ ಮತ್ತು ಹತ್ಯೆಯಾದ ಭಾಗ್ಯಶ್ರೀ
ಮಾಜಿ ಸಚಿವೆ ಅರ್ಚನಾ ಚಿಟ್ನಿಸ್ , ಮೃತರ ಕುಟುಂಬವನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ. ನಿರ್ಲಕ್ಷ್ಯ ವಹಿಸಿದ ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಇನ್ನೂ ಹತ್ಯೆಯ ಬಗ್ಗೆ ಜನರ ಆಕ್ರೋಶ ಹೆಚ್ಚಾದ ಬಳಿಕ ಅಧಿಕಾರಿಗಳು, ಆರೋಪಿಯ ಆಕ್ರಮ ಆಸ್ತಿಗಳನ್ನು ಗುರುತಿಸಿದ್ದಾರೆ. ಆರೋಪಿ, ಆಸ್ತಿಯ ಅತಿಕ್ರಮಣ ಮಾಡಿದ್ದಾರೆ. ಆಕ್ರಮ ಚಟುವಟಿಕೆ ನಡೆಸುತ್ತಿದ್ದರು. ಇದರ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಭಗೀರಥ ವಕಾಲ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ