/newsfirstlive-kannada/media/media_files/2025/08/03/madhya-pradesh-man-2025-08-03-18-28-22.jpg)
ಭೋಪಾಲ್:ರಕ್ತ ಸಂಬಂಧಗಳ ಮೀರಿದ ಬಂಧವೇ ಈ ಸ್ನೇಹ. ಸ್ನೇಹವು ರಕ್ತ ಸಂಬಂಧಗಳನ್ನು ಮೀರಿ ಬೆಳೆಯುವ ಒಂದು ಆಪ್ತ ಬಂಧವಾಗಿದೆ. ಯಾವುದೇ ಜಾತಿ, ಧರ್ಮ, ಅಥವಾ ಸಾಮಾಜಿಕ ತಾರತಮ್ಯವಿಲ್ಲದೆ ಬೆಳೆಯುವ ಒಂದು ಅನನ್ಯ ಸಂಬಂಧವಾಗಿದೆ. ಈ ಸ್ನೇಹ ಒಬ್ಬ ವ್ಯಕ್ತಿಯ ಜೀವನದಲ್ಲಿ ಸಂತೋಷ, ನೆಮ್ಮದಿ ಮತ್ತು ಭರವಸೆ ತರುತ್ತದೆ. ಸ್ನೇಹಿತರು ಕಷ್ಟಕಾಲದಲ್ಲಿ ಮಾತ್ರವಲ್ಲದೇ ಸಾವಿನಲ್ಲೂ ಜೊತೆಯಾಗಿ ನಿಲ್ಲುತ್ತಾರೆ ಅನ್ನೋದಕ್ಕೆ ಇದೇ ಪ್ರತ್ಯಕ್ಷ ಸಾಕ್ಷಿ.
ಇದನ್ನೂ ಓದಿ: ಅವಳಿ ಮಕ್ಕಳಿಗೆ ಅಮ್ಮ ಆಗ್ತಿದ್ದಾರೆ ಭಾವನಾ.. ಒಂಟಿಯಾಗಿ ತಾಯಿ ಆಗುವ ಬಗ್ಗೆ ನಟಿ ಹೇಳಿದ್ದೇನು..?
ಈ ವಿಡಿಯೋ ನೋಡಿದ್ರೆ ಎಂಥವರಿಗೂ ಕಣ್ಣಲ್ಲಿ ನೀರು ಬರುತ್ತೆ. ಇಂದೋರ್‌ನ ವ್ಯಕ್ತಿಯೊಬ್ಬ ತನ್ನ ಆಪ್ತ ಸ್ನೇಹಿತನ ಅಂತ್ಯಕ್ರಿಯೆಯ ಮೆರವಣಿಗೆಯಲ್ಲಿ ಕಣ್ಣೀರಿನೊಂದಿಗೆ ನೃತ್ಯ ಮಾಡುತ್ತ ಅಂತಿಮ ವಿದಾಯ ಹೇಳಿದ್ದಾರೆ. ಇದೇ ವಿಡಿಯೋ ನೋಡಿದ ನೆಟ್ಟಿಗರು ಭಾವುಕರಾಗಿ ಕಾಮೆಂಟ್ಸ್ ಹಾಕಿ ಆತನ ಗೆಳೆಯನಿಗೆ ಅಂತಿಮ ವಿದಾಯ ಹೇಳಿದ್ದಾರೆ.
In Mandsaur, India 🇮🇳, friendship transcended death
— Akhil Brahmand (@akhilbrahmand) July 31, 2025
When social worker Sohanlal Jain passed away his close friend Ambalal Prajapat honored a final promise — dancing in front of his funeral procession as a tribute to their unbreakable bond.
A heart-touching moment from Javasia… pic.twitter.com/v2WyxKhaLQ
ಹೌದು, ಮಂದ್ಸೌರ್ ಜಿಲ್ಲೆಯ ಜವಾಸಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. 2023ರಿಂದ ಸೋಹನ್ಲಾಲ್ ಜೈನ್ ಕ್ಯಾನ್ಸರ್ ವಿರುದ್ಧ ಹೋರಾಡಿ ನಿಧನರಾಗಿದ್ದರು. ಸೋಹನ್ಲಾಲ್ ಅವರು ಸಾವಿಗೂ ಮುನ್ನ ಭಾವುಕರಾಗಿ ಪತ್ರವೊಂದನ್ನು ಬರೆದಿದ್ದರು. ಗೆಳೆಯನ ಸಾವಿನ ಬಳಿಕ ಅವರ ಅವಿನಾಭಾವ ಬಂಧಕ್ಕೆ ಗೌರವವಾಗಿ ಆಪ್ತ ಸ್ನೇಹಿತ ಕೊನೆಯ ಆಸೆಯನ್ನು ಈಡೇರಿಸಿದ್ದಾರೆ.
ಪತ್ರದಲ್ಲಿ ಏನಿತ್ತು..?
ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದ ಜೈನ್ ಪತ್ರದಲ್ಲಿ, ‘‘ಕಣ್ಣೀರು ಬೇಡ, ಮೌನ ಬೇಡ, ಆಚರಣೆ ಮಾತ್ರ. ನಾನು ಈ ಲೋಕದಲ್ಲಿ ಇಲ್ಲದಿರುವಾಗ, ನೀವು ನನ್ನ ಅಂತ್ಯಕ್ರಿಯೆಯ ಮೆರವಣಿಗೆಯಲ್ಲಿ ಸೇರಿ ಡ್ರಮ್ಸ್ ಬಾರಿಸುತ್ತಾ ನೃತ್ಯ ಮತ್ತು ಹಾಡುವ ಮೂಲಕ ನನಗೆ ವಿದಾಯ ಹೇಳಬೇಕು. ದುಃಖ ಅಥವಾ ಅಳುವಿಕೆಯಿಂದ ನನ್ನನ್ನು ಕಳುಹಿಸಬೇಡಿ, ಸಂತೋಷದಿಂದ ವಿದಾಯ ಹೇಳಬೇಕು’’ ಎಂದು ಬರೆದುಕೊಂಡಿದ್ದರು.
ಸೋಹನ್ಲಾಲ್ ಅವರಿಗೆ ಜನರು ಅಳುವುದು ಇಷ್ಟ ಇರಲಿಲ್ಲ. ತನ್ನ ಅಂತ್ಯಕ್ರಿಯೆಯನ್ನು ಆಚರಣೆಯಂತೆ ಅನುಭವಿಸಬೇಕು ಎಂಬುವುದು ಅವರ ಬಯಕೆಯಾಗಿತ್ತು. ಹೀಗಾಗಿ ಸೋಹನ್ಲಾಲ್ ಆಪ್ತ ಸ್ನೇಹಿತ ಅಂಬಾಲಾಲ್ ಪ್ರಜಾಪತ್ ಅವರು, ಗೆಳೆಯನ ಅಂತ್ಯಕ್ರಿಯೆಯಲ್ಲಿ ಡಿಜೆ ಜೊತೆಗೆ ಡ್ಯಾನ್ಸ್ ಮಾಡಿದ್ದಾರೆ. ಈ ಮೂಲಕ ಸ್ನೇಹವು ಅವರಿಗೆ ಎಷ್ಟು ಮುಖ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಈ ಭಾವನಾತ್ಮಕ ಕ್ಷಣದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಜನರು ಕಣ್ಣೀರು ಹಾಕುವಂತೆ ಮಾಡಿದೆ. ಈ ಮೂಲಕ ನಿಜವಾದ ಸ್ನೇಹವು ಸಾವಿನ ನಂತರವೂ ಜೀವಂತವಾಗಿರುತ್ತದೆ ಎಂದು ಸಾಬೀತು ಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ