/newsfirstlive-kannada/media/media_files/2025/10/09/tata-trust-in-fighting-2025-10-09-14-30-13.jpg)
ಟಾಟಾ ಸನ್ಸ್ ಅಧ್ಯಕ್ಷ ನೋಯಲ್ ಟಾಟಾ ಮತ್ತು ಮೆಹಿಲಿ ಮಿಸ್ತ್ರೀ
ಟಾಟಾ ಟ್ರಸ್ಟ್ ನಿಂದ ಮೆಹಿಲಿ ಮಿಸ್ತ್ರೀ ನಿರ್ಗಮಿಸುವುದು ಖಚಿತವಾಗಿದೆ. ಮಿಹಿಲಿ ಮಿಸ್ತ್ರೀ ಅವರ ಮೂರು ವರ್ಷದ ಅವಧಿಯೂ ಅಕ್ಟೋಬರ್ 28ರ ಇಂದಿಗೆ ಅಂತ್ಯವಾಗುತ್ತಿದೆ. ಬಹುಮತದ ತತ್ವದ ಆಧಾರದ ಮೇಲೆ ಮಿಹಿಲಿ ಮಿಸ್ತ್ರೀ ಅವರ ಸೇವಾವಧಿಯನ್ನು ವಿಸ್ತರಿಸದೇ ಇರಲು ಟಾಟಾ ಟ್ರಸ್ಟ್ ನ ಟ್ರಸ್ಟಿಗಳು ನಿರ್ಧರಿಸಿದ್ದಾರೆ. ಇದರಿಂದಾಗಿ ಸರ್ ದೋರಾಬ್ಜಿ ಟಾಟಾ ಟ್ರಸ್ಟ್ ಮತ್ತು ಸರ್ ರತನ್ ಟಾಟಾ ಟ್ರಸ್ಟ್ ನಿಂದ ಮೆಹಿಲಿ ಮಿಸ್ತ್ರೀ ನಿರ್ಗಮಿಸಬೇಕಾಗಿದೆ.
ಟಾಟಾ ಟ್ರಸ್ಟ್ ನ ಅಧ್ಯಕ್ಷ ನೋಯಲ್ ಟಾಟಾ, ವೇಣು ಶ್ರೀನಿವಾಸನ್, ವಿಜಯ ಸಿಂಗ್ ಅವರು ಮೆಹಿಲಿ ಮಿಸ್ತ್ರೀ ಅವರ ಸೇವಾವಧಿಯ ವಿಸ್ತರಣೆಗೆ ವಿರೋಧವಾಗಿದ್ದಾರೆ. ಇನ್ನೂಳಿದ ಡರಿಯಸ್ ಕಂಭಾಟಾ, ಪ್ರಮೀಟ್ ಜವೇರಿ ಮತ್ತು ಜಹಂಗೀರ್ ಎಚ್.ಸಿ. ಜಹಂಗೀರ್ ಮಾತ್ರವೇ ಮೆಹಿಲಿ ಮಿಸ್ತ್ರೀ ಮುಂದುವರಿಕೆಯ ಪರವಾಗಿದ್ದಾರೆ. ಟಾಟಾ ಟ್ರಸ್ಟ್ ನಲ್ಲಿ ಈ ಭಿನ್ನಾಭಿಪ್ರಾಯದಿಂದ ಮೆಹಿಲಿ ಮಿಸ್ತ್ರೀ ಅವರಿಗೆ ಟಾಟಾ ಟ್ರಸ್ಟ್ ನಲ್ಲಿ ಮುಂದುವರಿಕೆಗೆ ಅವಕಾಶ ಸಿಗುತ್ತಿಲ್ಲ.
/filters:format(webp)/newsfirstlive-kannada/media/media_files/2025/10/28/mehli-mistry-2025-10-28-18-48-25.jpg)
ಮೆಹಿಲಿ ಮಿಸ್ತ್ರೀ 2022 ರಲ್ಲಿ ಸರ್ ದೋರಾಬ್ಜಿ ಟಾಟಾ ಟ್ರಸ್ಟ್ ಮತ್ತು ಸರ್ ರತನ್ ಟಾಟಾ ಟ್ರಸ್ಟ್ ಗೆ ಟ್ರಸ್ಟಿಯಾಗಿ ಸೇರ್ಪಡೆಯಾಗಿದ್ದರು. ಟಾಟಾ ಸನ್ಸ್ ನಲ್ಲಿ ಈ ಎರಡೂ ಟ್ರಸ್ಟ್ ಗಳ ಪಾಲು ದೊಡ್ಡಿದಿದೆ. ಇತ್ತೀಚಿನ ಕೆಲ ತಿಂಗಳುಗಳಲ್ಲಿ ಟಾಟಾ ಟ್ರಸ್ಟ್ ನ ಟ್ರಸ್ಟಿಗಳಲ್ಲಿ ಭಿನ್ನಾಭಿಪ್ರಾಯಗಳು ಹೆಚ್ಚಾಗಿದ್ದವು.
ಟಾಟಾ ಸನ್ಸ್ ಬೋರ್ಡ್ ಗೆ ವಿಜಯ ಸಿಂಗ್ ರನ್ನು ಡೈರೆಕ್ಟರ್ ಆಗಿ ಪುನರ್ ನೇಮಿಸುವುದಕ್ಕೆ ಬೆಂಬಲ ಸಿಗಲಿಲ್ಲ. ಇದರಿಂದ ವಿಜಯ ಸಿಂಗ್ ಅವರು ಟಾಟಾ ಸನ್ಸ್ ಬೋರ್ಡ್ ಡೈರೆಕ್ಟರ್ ಹುದ್ದೆಯಿಂದ ಕೆಳಗಿಳಿದರು. ಮೆಹಿಲಿ ಮಿಸ್ತ್ರೀ ಅವರು ವಿಜಯ ಸಿಂಗ್ ರನ್ನು ಮರು ನೇಮಿಸುವುದಕ್ಕೆ ವಿರೋಧಿಸಿದ್ದರು. ಹೀಗಾಗಿ ಈಗ ಮತ್ತೊಂದು ಗುಂಪು ಮೆಹಿಲಿ ಮಿಸ್ತ್ರೀರನ್ನು ಟ್ರಸ್ಟ್ ಗಳಲ್ಲಿ ಮುಂದುವರಿಕೆಗೆ ವಿರೋಧ ವ್ಯಕ್ತಪಡಿಸಿದೆ. ಮೆಹಿಲಿ ಮಿಸ್ತ್ರೀ ಅವರ ಮುಂದುವರಿಕೆಗೆ ಸರ್ವಸಮ್ಮತದ ಒಪ್ಪಿಗೆ ಅಗತ್ಯ ಎಂಬ ಷರತ್ತು ಅನ್ನು ಈ ಹಿಂದೆಯೇ ವಿಧಿಸಲಾಗಿತ್ತು . ಹೀಗಾಗಿ ಈಗ ಮೆಹಿಲಿ ಮಿಸ್ತ್ರೀ ಮುಂದುವರಿಕೆಗೆ ಸರ್ವಸಮ್ಮತದ ಒಪ್ಪಿಗೆ ಸಿಗದೇ ಇರೋದರಿಂದ ಮೆಹಿಲಿ ಮಿಸ್ತ್ರೀ ಟಾಟಾ ಟ್ರಸ್ಟ್ ಗಳಿಂದ ನಿರ್ಗಮಿಸಬೇಕಾಗಿದೆ.
ಮೆಹಿಲಿ ಮಿಸ್ತ್ರೀ ಸ್ಥಾನಕ್ಕೆ ಬೇರೊಬ್ಬರನ್ನು ಆಯ್ಕೆ ಮಾಡಿ ನೇಮಿಸಬೇಕಾಗಿದೆ. ಹೊಸಬರನ್ನು ಗುರುತಿಸುವ ಪ್ರಕ್ರಿಯೆ ಈಗಷ್ಟೇ ಆರಂಭವಾಗಬೇಕಾಗಿದೆ. ಟಾಟಾ ಟ್ರಸ್ಟ್ ಮತ್ತು ಟಾಟಾ ಸನ್ಸ್ ನಲ್ಲಿ ಈಗ ಎರಡು ಗುಂಪುಗಳಾಗಿದ್ದು ಒಂದು ಗುಂಪು ಮತ್ತೊಂದು ಗುಂಪು ಅನ್ನು ವಿರೋಧಿಸುತ್ತಿದೆ. ಇದರಿಂದಾಗಿ ಈಗ ಟಾಟಾ ಗ್ರೂಪ್ ಆಡಳಿತದ ಮೇಲೆ ಪರಿಣಾಮ ಬೀರುತ್ತಿದೆ.
ಈಗಾಗಲೇ ಕೇಂದ್ರ ಸರ್ಕಾರವು ಟಾಟಾ ಗ್ರೂಪ್ ನ ಅಂತರಿಕ ಕಿತ್ತಾಟದಲ್ಲಿ ಮಧ್ಯಪ್ರವೇಶ ಮಾಡಿದ್ದು , ಟಾಟಾ ಸನ್ಸ್ ಅಧ್ಯಕ್ಷ ನೋಯಲ್ ಟಾಟಾ, ಚಂದ್ರಶೇಖರನ್ ರನ್ನು ದೆಹಲಿಗೆ ಕರೆಸಿಕೊಂಡು ಮಾತುಕತೆ ನಡೆಸಿದೆ. ಟಾಟಾ ಗ್ರೂಪ್ ನಲ್ಲಿ ಯಾವುದೇ ಅಸ್ಥಿರತೆ ಆಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದೆ. ಟಾಟಾ ಗ್ರೂಪ್ ನಲ್ಲಿ ಅಸ್ಥಿರತೆಯೂ ದೇಶದ ಆರ್ಥಿಕತೆ ಹಾಗೂ ಕಂಪನಿಯ ದೈನಂದಿನ ವ್ಯವಹಾರಗಳ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ನೋಯಲ್ ಟಾಟಾ, ಚಂದ್ರಶೇಖರನ್ ಅವರಿಗೆ ಕೇಂದ್ರ ಸರ್ಕಾರ ಬೆಂಬಲ ಸೂಚಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us