/newsfirstlive-kannada/media/media_files/2025/12/08/navjot-singh-sidhu-and-his-wife-2025-12-08-20-14-10.jpg)
ನವಜೋತ್ ಸಿಂಗ್ ಸಿಧು ಮತ್ತು ಪತ್ನಿ ನವಜೋತ್ ಕೌರ್ ಸಿಧು
ಮುಖ್ಯಮಂತ್ರಿಯಾಗಲು ಆಕಾಂಕ್ಷಿಗಳಿಂದ ಪಕ್ಷವು "ಸೂಟ್‌ಕೇಸ್‌ನಲ್ಲಿ 500 ಕೋಟಿ ರೂ.ಗಳನ್ನು" ಪಡೆಯುತ್ತದೆ ಎಂದು ಕಾಂಗ್ರೆಸ್ ನಾಯಕಿ ನವಜೋತ್ ಕೌರ್ ಸಿಧು ಮೊನ್ನೆ ಹೇಳಿಕೆ ನೀಡಿದ್ದರು. ಇದು ರಾಜಕೀಯ ವಿವಾದವನ್ನು ಹುಟ್ಟುಹಾಕಿತ್ತು.
ಇಂದು ಪಂಜಾಬ್ ರಾಜ್ಯ ಕಾಂಗ್ರೆಸ್ ಘಟಕವು ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪಕ್ಷದಿಂದ ಅಮಾನತುಗೊಳಿಸಿದೆ. ಅಧಿಕೃತ ಪತ್ರದಲ್ಲಿ ಈ ಹಠಾತ್ ಕ್ರಮಕ್ಕೆ ಯಾವುದೇ ಕಾರಣವನ್ನು ಉಲ್ಲೇಖಿಸಲಾಗಿಲ್ಲ. ಪಂಜಾಬ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಮರೀಂದರ್ ಸಿಂಗ್ ರಾಜಾ ವಾರೀಯರ್ , ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ.
ಕಾಂಗ್ರೆಸ್ ತನ್ನ ಪತಿ ನವಜೋತ್ ಸಿಂಗ್ ಸಿಧು ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದರೆ ಮಾತ್ರ ಅವರು ಸಕ್ರಿಯ ರಾಜಕೀಯಕ್ಕೆ ಮರಳುತ್ತಾರೆ ಎಂದು ಶನಿವಾರ ಪ್ರತಿಪಾದಿಸುತ್ತಾ ಅವರು ಮಾಡಿದ ಹೇಳಿಕೆ ತೀವ್ರ ರಾಜಕೀಯ ವಿರೋಧಕ್ಕೆ ಕಾರಣವಾಗಿದೆ. ಇದು ಪಂಜಾಬ್ ಕಾಂಗ್ರೆಸ್ ಘಟಕದೊಳಗಿನ ಆಂತರಿಕ ಗೊಂದಲಗಳನ್ನು ಪುನಃ ಬಹಿರಂಗಗೊಳಿಸಿದೆ.
ಶನಿವಾರ ಪಂಜಾಬ್ ರಾಜ್ಯಪಾಲ ಗುಲಾಬ್ ಚಂದ್ ಕಟಾರಿಯಾ ಅವರನ್ನು ಭೇಟಿಯಾದ ಬಳಿಕ ನವಜೋತ್ ಕೌರ್ ಸಿಧು ಮಾಧ್ಯಮಗಳೊಂದಿಗೆ ಮಾತನಾಡಿದ್ದರು. ನಾವು ಪಂಜಾಬ್ ಗಾಗಿ ಮಾತ್ರ ಮಾತನಾಡುತ್ತೇವೆ. ಆದರೇ, ನವಜೋತ್ ಸಿಂಗ್ ಸಿಧು ಸಿಎಂ ಅಭ್ಯರ್ಥಿಯಾದರೇ, ಮಾತ್ರವೇ ರಾಜಕೀಯವಾಗಿ ಸಕ್ರಿಯವಾಗುತ್ತಾರೆ. ಆದರೇ, ಸಿಎಂ ಅಭ್ಯರ್ಥಿಯಾಗಲು 500 ಕೋಟಿ ರೂಪಾಯಿ ಹಣ ಕೊಡಬೇಕು. 500 ಕೋಟಿ ರೂಪಾಯಿ ಹಣ ನಮ್ಮ ಬಳಿ ಇಲ್ಲ ಎಂದು ನವಜೋತ್ ಕೌರ್ ಸಿಧು ಹೇಳಿದ್ದರು.
ನಿಮಗೆ ಯಾರಾದರೂ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರಾ ಎಂದು ಕೇಳಿದಾಗ, ಯಾರೂ ಹಣಕ್ಕೆ ಬೇಡಿಕೆ ಇಟ್ಟಿಲ್ಲ ಎಂದು ಸಹ ನವಜೋತ್ ಕೌರ್ ಸಿಧು ಹೇಳಿದ್ದರು.
ಆದರೇ, ಇಂದು ಕಾಂಗ್ರೆಸ್ ಪಕ್ಷವು ನವಜೋತ್ ಕೌರ್ ಸಿಧುರನ್ನು ಪಕ್ಷದಿಂದ ಅಮಾನತುಗೊಳಿಸಿದೆ. ಪತಿ ನವಜೋತ್ ಸಿಂಗ್ ಸಿಧು 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಸಕ್ರಿಯವಾಗಿ ಪ್ರಚಾರ ನಡೆಸಿರಲಿಲ್ಲ. ರಾಜಕೀಯವಾಗಿ ಯಾವಾಗ ಸಕ್ರಿಯರಾಗುತ್ತಾರೆ ಎಂದು ಮಾಧ್ಯಮಗಳು ಪ್ರಶ್ನಿಸಿದಾಗ, ಸಿಎಂ ಅಭ್ಯರ್ಥಿಯಾಗಿ ಘೋಷಿಸಿದರೇ, ರಾಜಕೀಯವಾಗಿ ಸಕ್ರಿಯವಾಗುತ್ತಾರೆ ಎಂದು ನವಜೋತ್ ಕೌರ್ ಸಿಧು ಹೇಳಿದ್ದರು.
/filters:format(webp)/newsfirstlive-kannada/media/media_files/2025/12/08/navjot-singh-sidhu-and-his-wife02-2025-12-08-20-15-25.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us