/newsfirstlive-kannada/media/media_files/2025/11/14/vip-party-chief-mukesh-sahni-2025-11-14-17-29-53.jpg)
VIP ಪಕ್ಷದ ಮುಖ್ಯಸ್ಥ ಮುಖೇಶ್ ಸಾಹ್ನಿ
ಬಿಹಾರದಲ್ಲಿ ವಿರೋಧ ಪಕ್ಷಗಳ ಮೈತ್ರಿಕೂಟಕ್ಕೆ ತಳಮಟ್ಟದ ಪರಿಸ್ಥಿತಿಯ ಬಗ್ಗೆ ಸರಿಯಾದ ಮಾಹಿತಿಯೇ ಇರಲಿಲ್ಲ ಎಂಬುದು ಫಲಿತಾಂಶದಿಂದ ಸ್ಪಷ್ಟವಾಗಿದೆ. ಬಿಹಾರದಲ್ಲಿ ವಿಐಪಿ ಪಕ್ಷದ ಮುಖೇಶ್ ಸಾಹ್ನಿ ಅವರನ್ನು ಮಹಾಘಟಬಂಧನ್ ನಿಂದ ಉಪಮುಖ್ಯಮಂತ್ರಿ ಅಭ್ಯರ್ಥಿ ಎಂದು ಮುಂಚಿತವಾಗಿಯೇ ಘೋಷಿಸಲಾಗಿತ್ತು. ಆದರೇ, ವಿಐಪಿ ಪಕ್ಷವು 12 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿತ್ತು. ಆದರೇ, ಯಾವುದೇ ಕ್ಷೇತ್ರದಲ್ಲೂ ಗೆಲ್ಲದೇ ಶೂನ್ಯ ಸಾಧನೆ ಮಾಡಿದೆ. ಬಿಹಾರದಲ್ಲಿ ಎನ್‌ಡಿಎ ಗೆಲುವು ಫ್ರೀಬಿ ಅಥವಾ ಉಚಿತ ಕೊಡುಗೆಗಳಿಂದ ಆಗಿರುವ ಗೆಲುವು ಎಂದು ಮುಖೇಶ್ ಸಾಹ್ನಿ ಹೇಳಿದ್ದಾರೆ. ಇನ್ನೂ ವಿರೋಧ ಪಕ್ಷಗಳ ವೋಟ್ ಚೋರಿ ದೂರಿನ ಬಗ್ಗೆ ಚುನಾವಣಾ ಆಯೋಗ ಸಂಪೂರ್ಣ ಕಿವುಡು ಆಗಿತ್ತು ಎಂದು ದೂರಿದ್ದಾರೆ. ನಾವು ಜನಾದೇಶವನ್ನು ಗೌರವಿಸುತ್ತೇವೆ. ಎಲ್ಲಿ ತಪ್ಪಾಯಿತು ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ. ಪ್ರಧಾನಿ ಮೋದಿ ಭಾಷೆಯಲ್ಲಿ ಹೇಳುವುದಾದರೇ, ಎನ್‌ಡಿಎ ರೀವಾಡಿ ಹಂಚುವ ಮೂಲಕ ಸರ್ಕಾರವನ್ನು ರಚಿಸುತ್ತಿದೆ. ನಿತೀಶ್ ಕುಮಾರ್ ಮಹಿಳೆಯರ ಬ್ಯಾಂಕ್ ಖಾತೆಗೆ 10 ಸಾವಿರ ರೂಪಾಯಿ ವರ್ಗಾವಣೆ ಮಾಡುವ ಮೂಲಕ ಮಹಿಳೆಯರ ಮತ ಪಡೆದಿದ್ದಾರೆ. ಇದು ನಿತೀಶ್ ಕುಮಾರ್ ಅವರ ಕೊನೆಯ ಚುನಾವಣೆ. ಕಳೆದ 20 ವರ್ಷಗಳಿಂದ ಮಹಿಳೆಯರಿಗಾಗಿ ನಿತೀಶ್ ಕುಮಾರ್ ಕೆಲಸ ಮಾಡಿದ್ದಾರೆ. 10 ಸಾವಿರ ರೂಪಾಯಿ ಹಣ ಹಂಚುವ ಮೂಲಕ ತಮ್ಮ ಸರ್ಕಾರವನ್ನು ನಿತೀಶ್ ಕುಮಾರ್ ಉಳಿಸಿಕೊಂಡಿದ್ದಾರೆ. ನಾನು ಅವರನ್ನು ಅಭಿನಂದಿಸುವೆ. ಆದರೇ, ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಮುಖೇಶ್ ಸಾಹ್ನಿ ಹೇಳಿದ್ದಾರೆ.
ನಾವು ವೋಟ್ ಕಳ್ಳತನ ವಿಷಯ ಎತ್ತಿದ್ದೇವು. ರಾಹುಲ್ ಗಾಂಧಿ ನೇತೃತ್ವದಲ್ಲಿ ವೋಟ್ ಅಧಿಕಾರ ಯಾತ್ರೆ ನಡೆಸಿದ್ದೇವು. ಕೆಲವರನ್ನು ಮತದಾರರ ಪಟ್ಟಿಗೆ ಸೇರಿಸಲು ಕೇಳಿದ್ದೇವು. ಆದರೇ, ಅದು ಆಗಲೇ ಇಲ್ಲ ಎಂದು ವಿಐಪಿ ಪಕ್ಷದ ಮುಖ್ಯಸ್ಥ ಮುಖೇಶ್ ಸಾಹ್ನಿ ಹೇಳಿದ್ದಾರೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us