/newsfirstlive-kannada/media/media_files/2025/11/18/naxal-commander-hadi-hidma-killed-2025-11-18-13-14-21.jpg)
ನಕ್ಸಲ್ ಕಮ್ಯಾಂಡರ್ ಮದ್ವಿ ಹಿಡ್ಮಾ ಹತ್ಯೆಗೈದ ಭದ್ರತಾ ಪಡೆಗಳು
ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯಲ್ಲಿ ಮಂಗಳವಾರ ನಡೆದ ಎನ್‌ಕೌಂಟರ್‌ನಲ್ಲಿ ಮಾವೋವಾದಿ ಕಮ್ಯಾಂಡರ್ ಮದ್ವಿ ಹಿಡ್ಮಾ ನನ್ನು ಗುಂಡಿಕ್ಕಿ ಕೊಂದಿವೆ. ಇಂದು ಆರು ಮಂದಿ ಮಾವೋವಾದಿ ನಕ್ಸಲರನ್ನು ಭದ್ರತಾ ಪಡೆಗಳು ಗುಂಡಿಕ್ಕಿ ಕೊಂದಿವೆ. ಇದರಲ್ಲಿ ಮದ್ವಿ ಹಿಡ್ಮಾ ಪತ್ನಿ ಕೂಡ ಸೇರಿದ್ದಾರೆ.
ಮದ್ವಿ ಹಿಡ್ಮಾ , ಭಾರತದ ಭದ್ರತಾ ಪಡೆಗಳ ವಿರುದ್ಧ 26 ಸಶಸ್ತ್ರ ದಾಳಿಯನ್ನ ನಡೆಸಿದ್ದ ಉನ್ನತ ಮಾವೋವಾದಿ ನಕ್ಸಲ್ ನಾಯಕನಾಗಿದ್ದ. ಮದ್ವಿ ಹಿಡ್ಮಾ ಬಗ್ಗೆ ಮಾಹಿತಿಗಾಗಿ ಭದ್ರತಾ ಪಡೆಗಳು 50 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದವು. ಮದ್ವಿ ಹಿಡ್ಮಾ ನೇತೃತ್ವದಲ್ಲಿ ನಕ್ಸಲರು 2010ರ ದಾಂತೇವಾಡ ದಾಳಿ ಮತ್ತು 2013ರ ಜೀರಂ ಕಣಿವೆಯ ದಾಳಿಗಳನ್ನು ನಡೆಸಿದ್ದರು . 2021ರ ಸುಕ್ಮಾ- ಬಿಜಾಪುರ ಎನ್ ಕೌಂಟರ್ ನಲ್ಲಿ ಈ ಮದ್ವಿ ಹಿಡ್ಮಾ ಕೂಡ ಭಾಗಿಯಾಗಿದ್ದ. ಬಹಳ ದೀರ್ಘ ಕಾಲದಿಂದ ಭಾರತದ ಭದ್ರತಾ ಪಡೆಗಳು ಮದ್ವಿ ಹಿಡ್ಮಾಗಾಗಿ ಹುಡುಕಾಟ ನಡೆಸುತ್ತಿದ್ದವು.
ಇಂದು ಆಂಧ್ರಪ್ರದೇಶ- ಛತ್ತೀಸ್ ಘಡ- ಒರಿಸ್ಸಾ ಗಡಿಯಲ್ಲಿ ಎನ್ ಕೌಂಟರ್ ನಡೆಸಿ ಮದ್ವಿ ಹಿಡ್ಮಾ ಹತ್ಯೆ ಮಾಡಲಾಗಿದೆ. ಇಂಟಲಿಜೆನ್ಸ್ ಮಾಹಿತಿಯ ಆಧಾರದ ಮೇಲೆ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿ ನಕ್ಸಲರ ವಿರುದ್ಧ ಎನ್ ಕೌಂಟರ್ ನಡೆಸಿವೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us