/newsfirstlive-kannada/media/media_files/2026/01/27/gym-jiahd-at-mirzapura-5-2026-01-27-15-37-18.jpg)
ಲವ್ ಜಿಹಾದ್ ಅಲ್ಲ, ಜಿಮ್ ಜಿಹಾದ್!
ಜಿಮ್ ನೆಪದಲ್ಲಿ ಹಿಂದೂ ಯುವತಿಯರಿಗೆ ಮತಾಂತರದ ಕುತಂತ್ರ!.. ಹೈಫೈ ಲೈಫ್​​.. ಹೈಟೆಕ್ ಜಿಮ್​​​.. ಇನ್​​ಸ್ಟಾದಲ್ಲೆ ಲವ್​​ ಜಿಹಾದ್​ಗೆ ಸ್ಕೆಚ್​​​!.. ಫೋಟೋ.. ವಿಡಿಯೋ ಬ್ಲ್ಯಾಕ್‌ಮೇಲ್.. ಮುಂದಿತ್ತು ಭಾರಿ ಪ್ಲ್ಯಾನ್​!
ದೇಹ ದಂಡಿಸೋ ಜಾಗವನ್ನ.. ಮೋಹದಿಂದ ಕೆಡಿಸೋ ಜಾಗವನ್ನಾಗಿ ಮಾಡ್ಕೊಂಡು. ಆ ಊರಲ್ಲಿ ಒಂದು ಜಿಮ್​ ಮಾಫಿಯಾನೇ ನಡೀತಿತ್ತು. ಹಿಂದೂ ಯುವತಿಯರನ್ನ ಟಾರ್ಗೆಟ್​ ಮಾಡಿ, ಪ್ರೀತಿ, ಮೋಹ, ಹೈಫೈ ಲೈಫ್​​ ಅಂತ ಕಥೆ ಹೇಳಿ, ತಮ್ಮ ಕಬಂಧಬಾಹುನಲ್ಲಿ ಬಂಧಿಸ್ತಿದ್ದ ಗ್ಯಾಂಗ್​ ಅದು. ಇನ್​ಸ್ಟಾದಲ್ಲಿ ಗಾಳ ಹಾಕಿ.. ಜಿಮ್​ನಲ್ಲಿ ಕಾಳ್​ ಹಾಕಿ.. ಹಿಂದೂ ಯುವತಿಯರಿಗೆ ಮತಾಂತರ ಆಗುವಂತೆ ಧಮ್ಕಿ ಹಾಕ್ತಿದ್ರು.. ನಗ್ನ ಫೋಟೋ ವಿಡಿಯೋಸ್​ ಇಟ್ಕೊಂಡು ಹಣ ವಸೂಲಿ ಮಾಡ್ತಿದ್ರು. ಇದು ಮತ್ತೊಂದು ಕೇರಳ ಫೈಲ್ಸ್​​ನಂಥ​​ ಸ್ಟೋರಿ.
/filters:format(webp)/newsfirstlive-kannada/media/media_files/2026/01/27/gym-jiahd-at-mirzapura-2-2026-01-27-15-37-49.jpg)
ಜಿಮ್​.. ಈ ಜಿಮ್​ಗಳಲ್ಲಿ ಕಾಣೋದು ಬರೀ ವೈಯ್ಟ್​ ಲಿಫ್ಟಿಂಗ್​​.. ರನ್ನಿಂಗ್​, ಸ್ವೆಟಿಂಗ್​.. ಇಷ್ಟೇ. ಬಟ್​ ಇಲ್ಲಿ ಮಾಂಸ ಖಂಡಗಳ ಬಿಗಿತ.. ಪ್ರೀತಿ ಪ್ರೇಮದ ಸೆಳೆತ.. ನಗ್ನ ಚಿತ್ರಗಳ ಮೊರೆತ.. ಇದೆಲ್ಲಾದ್ರ ಜೊತೆಗೆ ಮತಾಂತರದ ಪ್ರೇತ ಈ ಜಿಮ್​ನಲ್ಲಿ ನಡೀತಿದೆ. ಇಂಥಾ ಅರಾಚಕತೆಯ ಕೃತ್ಯಗಳಿಗೆ ಬಲಿಯಾಗಿದ್ದು ಕೇವಲ ಹಿಂದೂ ಯುವತಿಯರೇ. ಅವ್ರ ಫಿಟ್ನೆಸ್​​ ಕ್ರೇಜನ್ನೇ, ಮೋಹದ ಪಾಶಕ್ಕಾಗಿ ಬಳಸ್ಕೊಂಡು ಮತಾಂತರ ಭೂತಕ್ಕೆ ತಳ್ಳಿ ಅಲ್ಲಿ ನರಳಾಡುವಂತೆ ಮಾಡಿದ್ರಂತೆ. ಲವ್​​ ಜಿಹಾದ್ ಅನ್ನೋ ವಿಷಕಾರಿ ಕೀಟಕ್ಕೆ ಈ ಜಿಮ್​ ಜಿಹಾದ್ ಜೊತೆಯಾಗಿದ್ದೇಗೆ? ಈ ಎಲ್ಲಾ ಕೆಲಸಗಳಿಗೆ ಸೋಷಿಯಲ್​ ಮೀಡಿಯಾ ಸಾಥ್​ ಆಗಿದ್ದೇಗೆ? ಆತಂಕಭರಿತದ ಕಥೆ ಇಲ್ಲಿದೆ ಓದಿ.
​​
ಜಿಮ್ ನೆಪದಲ್ಲಿ ಹಿಂದೂ ಯುವತಿಯರಿಗೆ ಮತಾಂತರದ ಕುತಂತ್ರ!
ಹೈಫೈ ಲೈಫ್​​.. ಹೈಟೆಕ್ ಜಿಮ್​​​.. ಇನ್​​ಸ್ಟಾದಲ್ಲೆ ಲವ್​​ ಜಿಹಾದ್​ಗೆ ಸ್ಕೆಚ್​​​!
ಅದು ಉತ್ತರ ಪ್ರದೇಶದ ಮಿರ್ಜಾಪುರ. ಇಲ್ಲೊಂದು ಐರನ್ ಫೈರ್ ಕೆಜಿಎಂ ಅನ್ನೋ ಹೆಸ್ರಲ್ಲಿ ಜಿಮ್​ ಇದೆ. ಇದೇ ಜಿಮ್​ನ ಮಾಲೀಕ ಇಮ್ರಾನ್​. ಇದನ್ನ ಇಮ್ರಾನ್​ ಮತ್ತವನ ಸಹೋದರ, ಹಾಗೆ ಅವ್ರೊಟ್ಟಿಗೆ ಸೋದರ ಮಾವ ಕೂಡ ಸೇರಿ ನಡೆಸ್ತಿದ್ರು. ಇದೇ ಜಿಮ್​​.. ಇನ್​ಸ್ಟಾದಲ್ಲಿ ಲಕ್ಷ ಲಕ್ಷ ಫಾಲೋವರ್ಸ್​ನ ಹೊಂದಿದೆ. ಹಾಗಂತ ಈ ಜಿಮ್​​ನಲ್ಲಿ ವರ್ಕೌಟ್​ ಮಾತ್ರ ನಡೆಯಲ್ಲ. ಔಟ್​ ವರ್ಕ್​ ಕೂಡ ನಡೀತಾ ಇದ್ದವು. ಅದೊಂದು ದೊಡ್ಡ ಜಿಮ್​ ಮಾಫಿಯಾ ಅಂತ ಹೇಳ್ಬೋದು ಯಾಕಂದ್ರೆ ಇವ್ರು ನಡೆಸ್ತಿದ್ದ ಔಟ್​ ವರ್ಕ್ಸ್​.. ಲವ್​​ ಜಿಹಾದ್​.
ಹೆಸರಿಗೆ ಲವ್​​ ಜಿಹಾದೇ.. ಬಟ್​ ಅದರ ಹಿಂದೆ ದೊಡ್ಡ ಜಾಲವೇ ಇದೆ. ದೊಡ್ಡ ಮಾಫಿಯಾ ಇದೆ.. ದೊಡ್ಡ ಸ್ಕೆಚ್​ಗಳೇ ಇವೆ. ಇವ್ರ ಮೈನ್​ ಟಾರ್ಗೆಟ್​ ಯುವತಿಯರೇ ಆದ್ರೂ.. ಹಿಂದೂ ಹುಡುಗಿಯರೇ ಮೈನ್​ ಟಾರ್ಗೆಟ್​. ಜಿಮ್‌ನ ಸೋಗಲ್ಲಿ ಇವ್ರೆಲ್ಲಾ ನಡೆಸ್ತಾ ಇದ್ದದ್ದು ಧಾರ್ಮಿಕ ಮತಾಂತರ. ಇಷ್ಟೆ ಅಲ್ಲ ಬ್ಲ್ಯಾಕ್‌ಮೇಲಿಂಗ್.. ರಾಬರಿ.. ಸ್ಮಗ್ಲಿಂಗ್​ ಹೀಗೆ ಒಂದಲ್ಲ ಎರಡಲ್ಲ.
ಖಂಡದ ಮೈ ತುಂಬಿದ ಜಿಮ್​ ಟ್ರೈನರ್ಸ್​.. ಕತೆಗಳನ್ನ ಹೇಳಿ ಹಿಂದೂ ಯುವತಿಯರನ್ನ ಅವ್ರ ಕಬಂಧ ಬಾಹುಗಳಲ್ಲಿ ಬಂಧಿಸಿಬಿಟ್ಟಿದ್ರು. ಅವ್ರಿಗೆ ಏನೂ ಮಾಡ್ಬೇಕು.. ಯಾರಿಗೆ ಹೇಳ್ಬೆಕು ಅನ್ನೋದೇ ಅರ್ಥವಾಗಿಲ್ಲ. ಅಂತೂ ಒಬ್ಬ ಯುವತಿ ಕೆರಳಿ ಈ ಜಿಮ್​ ಟ್ರೈನರ್ಸ್​ ವಿರುದ್ಧ ಕೆರಳಿ ಕೆಂಡವಾಗಿದ್ದಳು. ಅದೇ ಈ ದಿನ ಈ ಸುದ್ದಿ ಇಷ್ಟು ಮಟ್ಟಕ್ಕೆ ಸದ್ದಾಗಲು ಕಾರಣವಾಗಿದೆ.
ಯುವತಿಯರ ಗಾಳಕ್ಕೆ ಇನ್​ಸ್ಟಾ ಗ್ರಾಂ ಮೈನ್​ ರೋಲ್ ಆಗಿದ್ದೇಗೆ?
ಕನ್ವರ್ಟ್​​ ಸೆಂಟರ್​ ಆಗಿ ಬದಲಾಗಿವೆಯೇ ಅಲ್ಲಿನ ಜಿಮ್​ ಸೆಂಟರ್​​ಗಳು?
ಇಷ್ಟು ದೊಡ್ಡ ಜಾಲ ಉತ್ತರಪ್ರದೇಶದ ಮಿರ್ಜಾಪುರ್​ನಲ್ಲಿ ನಡೀತಿದೆ ಅಂದ್ರೆ.. ಖಂಡಿತ ದೊಡ್ಡ ಟೀಮೇ ಕೆಲ್ಸ ಮಾಡ್ತಿರ್ಬೋದು. ಈ ಜಿಮ್​​ ಒಂದೇ ಅಲ್ಲ.. ಯುಪಿಯಲ್ಲಿನ ಹಲವಾರು ಜಿಮ್​ಗಳು ಇದೇ ಕೆಲ್ಸವನ್ನ ಮಾಡ್ತಿವೆ ಎನ್ನಲಾಗ್ತಿದೆ. ಅದ್ರಲ್ಲಿ ಈ ಐರನ್ ಫೈರ್ ಕೆಜಿಎಂ ಜಿಮ್​ ಈ ದಿನ ಬಯಲಿಗೆ ಬಿದ್ದಿದೆ. ಈ ಕನ್ವರ್ ದಂಧೆಯ ಮೈನ್​ ಕಿಂಗ್​ಪಿನ್​.. ಹಿಂದಿದ್ದು ನಡೆಸ್ತಿದ್ದ ಖತರ್ನಾಕ್..​ ​​ ಈ ಇಡೀ ಜಾಲದ ಮಾಸ್ಟರ್ ಮೈಂಡ್ ಇಮ್ರಾನ್​ ಅಂತ ಪೊಲೀಸರು ಹೇಳಿದ್ದಾರೆ.
ಸಿಕ್ಸ್​ ಪ್ಯಾಕ್​ ಫೋಟೋಗಳು.. ವಿಡಿಯೋಗಳನ್ನ ಇನ್​​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿ.. ಯುವತಿಯರನ್ನ ಸೆಳೆಯುತ್ತಿದ್ದ ಗ್ಯಾಂಗ್​. ಜಿಮ್​ ಸೆಂಟರ್​ಗಳನ್ನೇ ಕನ್ವರ್ಟ್​ ಸೆಂಟರ್​ಗಳಾಗಿ ಮಾಡಿಕೊಂಡಿದ್ರು. ಇಲ್ಲಿವರೆಗೂ ಲವ್​ ಜಿಹಾದ್​ ಹೆಸ್ರಲ್ಲಿ ಮತಾಂತರ ಮಾಡಿಸ್ತಿದ್ದ ಗ್ಯಾಂಗ್​.. ಈಗ ಜಿಮ್​​ ಹೆಸ್ರಲ್ಲಿ ಜಿಮ್​ ಜಿಹಾದ್​ ನಡೆಸ್ತಿವೆ. ಅಷ್ಟಕ್ಕೂ ಇವ್ರು ಹಿಂದೂ ಯುವತಿಯರನ್ನ ಹೇಗೆ ಟ್ರ್ಯಾಪ್​ ಮಾಡ್ತಾರೆ ಅಂತ ಹೇಳ್ತೀವಿ ಕೇಳಿ.
50ಕ್ಕೂ ಹೆಚ್ಚು ಹಿಂದೂ ಯುವತಿಯರ ಮತಾಂತರ!
ಫ್ರೆಂಡ್​​ ರಿಕ್ವೆಸ್ಟ್​.. ಲವ್​​​.. ಬೆದರಿಕೆ.. ಸುಲಿಗೆ ಮೋಸ!
ಇಲ್ಲಿವರೆಗೂ ಐವತ್ತಕ್ಕೂ ಹೆಚ್ಚು ಮಂದಿ ಯುವತಿಯರನ್ನ ಮತಾಂತರ ಮಾಡಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರಂತೆ. ಅಸಲಿಗೆ ಇವ್ರು ಎರಡು ಪದ್ಧತಿಯಲ್ಲಿ ಈ ಮತಾಂತರ ಕುತಂತ್ರ ಹೆಣೆದಿದ್ದಾರೆ. ಒಂದು ಇನ್​ಸ್ಟಾಗ್ರಾಂನಲ್ಲಿ ಹಿಂದೂ ಯುವತಿಯರನ್ನ ಟ್ರ್ಯಾಪ್​ ಮಾಡ್ತಾರೆ. ಇನ್​ಸ್ಟಾ ರಿಕ್ವೆಸ್ಟ್​ ಕಳಿಸಿ.. ಅವ್ರ ಪ್ರೊಫೈಲ್​ನ ಡಿಸ್ಲೇ ಮಾಡ್ತಾರೆ. ಆನಂತರ ಅವ್ರನ್ನ ಜಿಮ್​ಗೆ ರಿಕ್ರೂಟ್​ ಆಗುವಂತೆ ಮಾಡ್ತಾರೆ. ಅಲ್ಲಿಂದ ಸ್ನೇಹ.. ಸ್ನೇಹ ಪ್ರೀತಿಯಾಗಿ.. ಮೋಹದ ಬಲೆಗೆ ಹಿಂದೂ ಯುವತಿಯರು ಈಸಿಯಾಗಿ ಬಿದ್ಬಿಡ್ತಾರೆ.
ಇಲ್ಲಿ ಮತ್ತೊಂದು ವಿಷ್ಯ ನಿಮ್ಗೆ ಹೇಳಲೇ ಬೇಕು.. ಈ ಎಲ್ಲಾ ಟ್ರ್ಯಾಪ್​ ಯುವತಿಯರನ್ನ ಸೆಳೆಯೋಕೆ ವರ್ಕೌಟ್​ ಆಗದೇ ಇದ್ರೆ.. ಬೇರೆ ರೀತಿಯಲ್ಲಿ ಈ ಕೆಲ್ಸ ಮಾಡ್ತಾರೆ. ಅದೇಗೆ ಅಂತೀರಾ.. ಥೇಟ್​ ದಿ ಕೇರಳ ಫೈಲ್ಸ್​​ ಸ್ಟೋರಿಯಂತೆ.. ಒಬ್ಬ ಯುವತಿಯನ್ನ ಹಿಂದೂ ಯುವತಿಯರ ನಡುವೆ ಬಿಡ್ತಾರೆ. ಆಕೆಯಿಂದಲೇ ಟ್ರ್ಯಾಪ್​ ಮಾಡಿಸ್ತಾರೆ. ಇದೊಂದು ವ್ಯವಸ್ಥಿತವಾದ ಟ್ರ್ಯಾಪ್​.
ಈ ಟ್ರ್ಯಾಪ್​ ಕೆಲಸದಲ್ಲಿ ಸನ್ನೋ ಅನ್ನೋ ಯುವತಿ ಇರೋದಾಗಿ ಹೇಳಲಾಗ್ತಿದೆ. ಈ ಯುವತಿನೇ ಹಿಂದೂ ಯುವತಿಯರನ್ನ ಟಾರ್ಗೆಟ್​ ಮಾಡಿ ಟ್ರ್ಯಾಪ್​ ಮಾಡಿ ಬುಟ್ಟಿಗೆ ಬಿದ್ರು ಅಂದಾಗ, ಅವ್ರನ್ನ ಇದೇ ಜಿಮ್​ ಗ್ಯಾಂಗ್​ಗೆ ಪರಿಚಯ ಮಾಡಿಕೊಡುತ್ತಿದ್ದಳಂತೆ. ಈ ಜಿಮರ್ಸ್​ ಎಲ್ಲಾ ಸಿಕ್ಸ್​ ಪ್ಯಾಕ್​ ಬಾಡಿ ಶೋ ಮಾಡುತ್ತಲೇ ಯುವತಿಯರನ್ನ ಸೆಳೀತಿದ್ರು. ಮತಾಂತರ ಪ್ರಕರಣದ ಆರೋಪಿಗಳಾದ ಫರೀದ್ ಮತ್ತು ಇರ್ಷಾದ್.. ಲಕ್ಕಿ ಅಲಿ..ಹೀಗೆ ದೊಡ್ಡ ಗ್ಯಾಂಗ್​ ಈಗ ಚೆಲ್ಲಾಪಿಲ್ಲಿಯಾಗಿದೆ.
/filters:format(webp)/newsfirstlive-kannada/media/media_files/2026/01/27/gym-jiahd-at-mirzapura-3-2026-01-27-15-38-36.jpg)
ಕೇಸ್​ ಫೈಲ್​ ಆಗ್ತಿದ್ದಂತೆ ಪರಾರಿ ಆಗಿರೋ ಆರೋಪಿಗಳು!
ಈ ಮತಾಂತರ ಜಾಲ ಬಯಲು ಮಾಡಿದ್ರು ಆ ಇಬ್ಬರು!
ಪೊಲೀಸರ ಪ್ರಕಾರ.. ಕೆಜಿಎನ್ ಜಿಮ್ ಶುರುವಲ್ಲೇ ಈ ದಂಧೆ ಶುರು ಮಾಡಿದ್ರಂತೆ. ಐರನ್ ಫೈರ್ ಕೆಜಿಎಂ ಜಿಮ್‌ನ ಮಾಲೀಕ ಇಮ್ರಾನ್, ತನ್ನ ಸಹೋದರ ಮತ್ತು ಸೋದರ ಮಾವನನ್ನ ಸಹ ಈ ಜಾಲಕ್ಕೆ ಸೇರಿಸಿಕೊಂಡಿದ್ದನಂತೆ. ಜಿಮ್‌ನ ಸೋಗಿನಲ್ಲಿ ಮಹಿಳೆಯರನ್ನು ಮತಾಂತರಿಸುವ ಈ ಪಿತೂರಿ ಒಂದು ಕುತಂತ್ರವಾಗಿತ್ತು. ಸಾಮಾಜಿಕ ಮಾಧ್ಯಮವನ್ನ ಒಂದು ಅಸ್ತ್ರವಾಗಿ ಬಳಸಿ, ಹುಡುಗಿಯರನ್ನ ಆಫರ್‌ಗಳು ಮತ್ತು ಹೈಟೆಕ್ ಎಕ್ಯುಪ್ಮೆಂಟ್​ಗಳಿಂದ, ಜಿಮ್‌ಗಳಿಗೆ ಆಕರ್ಷಿಸಿ.. ನಂತರ ಅವರನ್ನ ಮಾನಸಿಕ ಮತ್ತು ಸಾಮಾಜಿಕ ದೌರ್ಜನ್ಯಕ್ಕೆ ಒಳಪಡಿಸಲಾಗ್ತಿತ್ತಂತೆ. ಹುಡುಗಿಯರನ್ನ ಪ್ರೀತಿ ಅಂಥ ನಂಬಿಸಿ ಅವರನ್ನು ನಗ್ನವಾಗಿಸಿ, ಬೆತ್ತಲೆ ಫೋಟೋ ವಿಡಿಯೋಗಳನ್ನ ತೆಗೆದು ಆಮೇಲೆ ಅವರನ್ನು ಮತಾಂತರವಾಗುವಂತೆ ಒತ್ತಡ ಹೇರಲಾಗ್ತಿತ್ತು. ಒಪ್ಪದಿದ್ರೆ ಫೋಟೋಸ್​ ವಿಡಿಯೋಸ್​ ಲೀಕ್​ ಮಾಡೋದಾಗಿ ಬೆದರಿಸಲಾಗುತ್ತಿತ್ತು. ಹಾಗೆ ಕೆಲ ಸಂದರ್ಭಗಳಲ್ಲಿ, ದೊಡ್ಡ ಮೊತ್ತದ ಹಣದ ಸುಲಿಗೆ ನಡೀತಿದ್ದು ಎನ್ನಲಾಗ್ತಿದೆ.
ದುಬಾರಿ ವಾಹನಗಳನ್ನ ಬಳಸಿ ಅವ್ರನ್ನ ಅದ್ರಲ್ಲಿ ಓಡಾಡಿಸಿ..ಆನಂತರ ಅವರನ್ನು ಬೆದರಿಸಿ ಲಕ್ಷ ಲಕ್ಷ ಹಣ ಪೀಕಿದ್ರಂತೆ. ಮತಾಂತರ ಮತ್ತು ಬ್ಲ್ಯಾಕ್‌ಮೇಲಿಂಗ್ ಜಾಲಕ್ಕೆ ಸಂಬಂಧಿಸಿದ ಚಟುವಟಿಕೆಗಳಿಂದ ಕೋಟಿ ಕೋಟಿ ಹಣ ಸಂಪಾದಿಸ್ತಿದ್ರು ಅಂತ ತನಿಖಾ ಸಂಸ್ಥೆಗಳು ಶಂಕಿಸಿವೆ.
ಆರೋಪಿಗಳಲ್ಲಿ ಒಬ್ಬನು ಬುರ್ಖಾ ಧರಿಸಿದ ಮಹಿಳೆಯೊಂದಿಗೆ ಕಾಣಿಸಿಕೊಂಡಿದ್ದಾನೆ. ಬುರ್ಖಾ ಧರಿಸಿದ ಆ ಮಹಿಳೆ ಹಿಂದೂ ಅಂತಲೇ ಹೇಳಲಾಗಿತ್ತು. ಹುಡುಗಿಯರ ಫೋಟೋಗಳನ್ನು ಇದೇ ರೀತಿಯಲ್ಲಿ ತೆಗೆಯಲಾಗಿದೆ. ಆನಂತರ ಈ ಫೋಟೋಸ್​ ವಿಡಿಯೋಗಳನ್ನ ಎನ್‌ಜಿಒಗಳ ಮೂಲಕ ವಿದೇಶಕ್ಕೆ ಕಳುಹಿಸಲಾಗಿದೆ ಅನ್ನೋ ವರದಿಯಾಗಿದೆ. ಇಸ್ಲಾಂಗೆ ಮತಾಂತರಗೊಂಡಂತೆ ನಟಿಸುವ ಮೂಲಕ ಕೂಡ ಹಣ ಮಾಡುವ ಹುನ್ನಾರ ನಡೆದಿತ್ತು. ಇದನ್ನೆಲ್ಲಾ ಅನುಭವಿಸಿ ಇಬ್ಬರು ಹುಡುಗಿಯರು ಧೈರ್ಯದಿಂದ ಪೊಲೀಸರಿಗೆ ದೂರು ಕೊಟ್ಟಿದ್ರು. ಆಗಲೇ ಈ ಸಂಪೂರ್ಣ ದಂಧೆ ಬಯಲಾಯಿತು. ತನಿಖೆ ಆದ್ಮೇಲೆ ಮತ್ತಷ್ಟು ರೋಚಕ ಕತೆಗಳು ತೆರೆದುಕೊಂಡವು. ಬಟ್​ ಮೈನ್​ ಮಾಸ್ಟರ್​ ಮೈಂಡ್​ ಇಮ್ರಾನ್ ಮಾತ್ರ ಎಸ್ಕೇಪ್​ ಆಗೋಕೆ ಏರ್ ಪೋರ್ಟ್ ಸೇರಿದ್ದ. ಉಳಿದವರಿಗಾಗಿ 25 ಸಾವಿರ ಪ್ರೈಸ್​ಮನಿ ಇಡಲಾಗಿತ್ತು. ಇಲ್ಲಿಂದ ಶುರುವಾಗಿದ್ದೇ ಕೀಚಕರ ಬೇಟೆ.
/filters:format(webp)/newsfirstlive-kannada/media/media_files/2026/01/27/gym-jiahd-at-mirzapura-2026-01-27-15-40-28.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us