/newsfirstlive-kannada/media/media_files/2025/09/30/rules-change-2025-09-30-14-26-50.jpg)
ಅಕ್ಟೋಬರ್ 1. ಅಂದರೆ ನಾಳೆಯಿಂದ ದೇಶದಲ್ಲಿ ಪ್ರಮುಖ 4 ನಿಯಮಗಳಲ್ಲಿ ಬದಲಾವಣೆ ಆಗಲಿದೆ. ಇವು ಸಾಮಾನ್ಯ ಜನರ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತವೆ. ರೈಲ್ವೆ ಟಿಕೆಟ್ ಬುಕಿಂಗ್ ನಿಯಮಗಳನ್ನು ಪರಿಷ್ಕರಿಸಲಾಗಿದೆ. ಎಲ್‌ಪಿಜಿ ಸಿಲಿಂಡರ್ ಬೆಲೆಗಳು ಬದಲಾಗುವ ಸಾಧ್ಯತೆಯಿದೆ. ಯುಪಿಐ ವಹಿವಾಟುಗಳು ಕೂಡ ಬದಲಾಗಲಿದೆ.
ಎಲ್‌ಪಿಜಿ ಸಿಲಿಂಡರ್ ಬೆಲೆಗಳು
ಹಬ್ಬದ ತಿಂಗಳು ಅಕ್ಟೋಬರ್. ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಇಳಿಕೆಯ ನಿರೀಕ್ಷೆಯಲ್ಲಿ ಜನರಿದ್ದಾರೆ. ಕಳೆದ ತಿಂಗಳುಗಳಲ್ಲಿ 19 ಕೆಜಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಕಡಿಮೆ ಮಾಡಲಾಗಿತ್ತು. ಈ ಬಾರಿ 14 ಕೆಜಿ ಸಿಲಿಂಡರ್‌ಗಳ ಬೆಲೆ ಕಡಿಮೆ ಆಗುವ ನಿರೀಕ್ಷೆಯಲ್ಲಿ ಜನರಿದ್ದಾರೆ.
ಟಿಕೆಟ್ ನಿಯಮಗಳು
ಟಿಕೆಟ್ ವಂಚನೆ ತಡೆಗಟ್ಟಲು ರೈಲ್ವೆ ಇಲಾಖೆ ಬುಕಿಂಗ್ ನಿಯಮಗಳನ್ನು ಪರಿಷ್ಕರಿಸಿದೆ. ನಾಳೆಯಿಂದ ಹೊಸ ನಿಯಮ ಜಾರಿಗೆ ಬರಲಿದೆ. ಅದರ ಪ್ರಕಾರ ಆಧಾರ್ ಕಾರ್ಡ್‌ಗಳನ್ನು IRCTC ಗೆ ಲಿಂಕ್ ಮಾಡಿದ್ದರೆ ಮಾತ್ರ ಟಿಕೆಟ್ ಕೌಂಟರ್ ತೆರೆದ 15 ನಿಮಿಷಗಳಲ್ಲಿ ಟಿಕೆಟ್ ಬುಕ್ ಮಾಡಲು ಸಾಧ್ಯ. ಪ್ರಸ್ತುತ ಈ ನಿಯಮವು ತತ್ಕಾಲ್ ಟಿಕೆಟ್ ಬುಕಿಂಗ್‌ಗಳಿಗೆ ಮಾತ್ರ ಅನ್ವಯಿಸುತ್ತದೆ.
UPI ಗೆ ಸಂಬಂಧಿಸಿದ ಬದಲಾವಣೆಗಳು
ಇವತ್ತಿನಿಂದ UPI (ಏಕೀಕೃತ ಪಾವತಿ ಇಂಟರ್ಫೇಸ್)ನಲ್ಲಿ ಕೆಲವು ಪ್ರಮುಖ ನಿಯಮಗಳು ಬದಲಾಗಲಿವೆ. NPCI ನಿಗದಿಪಡಿಸಿದ ಹೊಸ ನಿಯಮಗಳು PhonePe, Google Pay, Paytm ನಂತಹ ಅಪ್ಲಿಕೇಶನ್‌ಗಳ ಮೇಲೆ ಪರಿಣಾಮ ಬೀರುತ್ತವೆ. P2P ವಹಿವಾಟು ಫೀಚರ್ಸ್ ತೆಗೆದುಹಾಕುವುದು ಅತ್ಯಂತ ಮಹತ್ವದ ಬದಲಾವಣೆ ಆಗಿದೆ. ಬಳಕೆದಾರರ ಸುರಕ್ಷತೆಯನ್ನು ಸುಧಾರಿಸಲು ಮತ್ತು ಆನ್‌ಲೈನ್ ವಂಚನೆ ತಡೆಗಟ್ಟಲು ಈ ನಿಯಮ ಜಾರಿಗೆ ಬರುತ್ತಿದೆ. ನಾಳೆಯಿಂದ UPI ಅಪ್ಲಿಕೇಶನ್‌ಗಳಲ್ಲಿ ನೇರ ಹಣ ಕಳುಹಿಸುವ ಆಯ್ಕೆಯನ್ನು ಬಳಸಲು ಇನ್ಮುಂದೆ ಸಾಧ್ಯವಾಗುವುದಿಲ್ಲ.
ಪಿಂಚಣಿ ಸಂಬಂಧಿತ ಬದಲಾವಣೆಗಳು
ನಾಳೆಯಿಂದ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS)ಯಲ್ಲಿ ಬದಲಾವಣೆ ಆಗಲಿದೆ. ಸರ್ಕಾರೇತರ ಚಂದಾದಾರರು ತಮ್ಮ ಸಂಪೂರ್ಣ ಪಿಂಚಣಿ ಮೊತ್ತವನ್ನು (100%) ಈಕ್ವಿಟಿ-ಸಂಬಂಧಿತ ಯೋಜನೆಗಳಲ್ಲಿ ಹೂಡಿಕೆ ಮಾಡಲು ಸಾಧ್ಯವಾಗುತ್ತದೆ. ಇದಕ್ಕೂ ಮೊದಲು ಈ ಮಿತಿ ಕೇವಲ 75% ಆಗಿತ್ತು. ಖಾಸಗಿ ವಲಯದ ಉದ್ಯೋಗಿಗಳು ಈಗ PRAN (Permanent Retirement Account Number) ತೆರೆಯಲು ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಇದನ್ನೂ ಓದಿ:ಮಹೇಶ್ ಶೆಟ್ಟಿ ತಿಮ್ಮರೋಡಿ ಗಡೀಪಾರಿಗೆ ಅಕ್ಟೋಬರ್ 8ರವರೆಗೆ ಮಧ್ಯಂತರ ತಡೆಯಾಜ್ಞೆ: ಹೈಕೋರ್ಟ್ ನಿಂದ ತಾತ್ಕಾಲಿಕ ರೀಲೀಫ್
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ