Advertisment

ದೀಪಾವಳಿಗೆ ಹೈವೇ ಫಾಸ್ಟ್ ಟ್ಯಾಗ್ ಪಾಸ್ ಗಿಫ್ಟ್ ನೀಡಲು ಅವಕಾಶ : ಗಿಫ್ಟ್ ನೀಡೋದು ಹೇಗೆ ಗೊತ್ತಾ?

ದೇಶದಲ್ಲಿ ಆಗಸ್ಟ್ 15 ರಿಂದ ಫಾಸ್ಟ್ ಟ್ಯಾಗ್ ಪಾಸ್ ಜಾರಿಯಾಗಿದೆ. 3 ಸಾವಿರ ರೂಪಾಯಿ ಪಾಸ್ ಪಡೆದರೇ, ಒಂದು ವರ್ಷದ ಅವಧಿ ಅಥವಾ 200 ಟೋಲ್ ಪ್ಲಾಜಾ ಕ್ರಾಸ್ ಮಾಡುವವರೆಗೂ ಟೋಲ್ ಗಳಲ್ಲಿ ಶುಲ್ಕ ಕಟ್ಟುವ ಅಗತ್ಯವಿಲ್ಲ. ಈಗ ಇದನ್ನು ಪ್ರೀತಿಪಾತ್ರರಿಗೆ ಗಿಫ್ಟ್ ನೀಡಲು ಅವಕಾಶ ಸಿಕ್ಕಿದೆ.

author-image
Chandramohan
HIGHWAY FASTAG GIFT

ಹೈವೇ ಟೋಲ್ ಫಾಸ್ಟ್ ಟ್ಯಾಗ್ ಪಾಸ್ ಗಿಫ್ಟ್ ನೀಡಲು ಅವಕಾಶ

Advertisment
  • ಹೈವೇ ಟೋಲ್ ಫಾಸ್ಟ್ ಟ್ಯಾಗ್ ಪಾಸ್ ಗಿಫ್ಟ್ ನೀಡಲು ಅವಕಾಶ
  • ದೀಪಾವಳಿಗೆ ಹಬ್ಬದ ಸಿಹಿ ಜೊತೆ ಫಾಸ್ಟ್ ಟ್ಯಾಗ್ ಗಿಫ್ಟ್ ನೀಡಬಹುದು
  • ರಾಜಮಾರ್ಗ ಯಾತ್ರಾ ಆ್ಯಪ್ ನಲ್ಲಿ Add Pass ಆಯ್ಕೆ ಮೂಲಕ ಗಿಫ್ಟ್ ನೀಡಿ

ಈ ದೀಪಾವಳಿಗೆ ನಿಮ್ಮ ಪ್ರೀತಿಪಾತ್ರರಿಗೆ ಫಾಸ್ಟ್‌ಟ್ಯಾಗ್ ಪಾಸ್ ಗಿಫ್ಟ್ ನೀಡಲು ಅವಕಾಶ ಸಿಕ್ಕಿದೆ. 'ರಾಜಮಾರ್ಗಯಾತ್ರಾ' ಆ್ಯಪ್ ಮೂಲಕ ಫಾಸ್ಟ್ ಟ್ಯಾಗ್ ಪಾಸ್ ಗಿಫ್ಟ್ ನೀಡಲು‌ ಅವಕಾಶ ನೀಡಲಾಗಿದೆ. ಈ ಪಾಸ್ ನಿಂದ ಹೆದ್ದಾರಿಯ ಟೋಲ್ ಗಳಲ್ಲಿ ಕಾರ್ ಮತ್ತು ಪ್ರಯಾಣಿಕ ವಾಹನಗಳಲ್ಲಿ   ದೇಶಾದ್ಯಂತ ಒಂದು ವರ್ಷದವರೆಗೆ  ಯಾವುದೇ ತೊಂದರೆ  ಇಲ್ಲದೇ ಮುಕ್ತವಾಗಿ ಟೋಲ್ ಕಟ್ಟದೇ ಪ್ರಯಾಣ ಮಾಡಲು  ಅವಕಾಶ ಸಿಗುತ್ತೆ.  ಕೇವಲ ₹3,000 ಶುಲ್ಕದಲ್ಲಿ 200 ಟೋಲ್ ಪ್ಲಾಜಾ ಕ್ರಾಸಿಂಗ್‌ಗಳವರೆಗೆ ಈ  ಸೌಲಭ್ಯ ಸಿಗಲಿದೆ. ಈ ಬಗ್ಗೆ  ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪ್ರಕಟಣೆ  ನೀಡಿದೆ. 
 
 ಟೋಲ್ ಫಾಸ್ಟ್ ಟ್ಯಾಗ್‌ ಪಾಸ್ ಗಿಫ್ಟ್ ಮಾಡೋದ್ಹೇಗೆ? 
ರಾಜಮಾರ್ಗಯಾತ್ರಾ' ಅಪ್ಲಿಕೇಶನ್‌ನಲ್ಲಿ ಈ ಪಾಸ್ ಅನ್ನು ಸುಲಭವಾಗಿ ಉಡುಗೊರೆಯಾಗಿ ನೀಡಬಹುದು. 'ರಾಜಮಾರ್ಗಯಾತ್ರಾʼ ಆ್ಯಪ್ ಡೌನ್‌ಲೋಡ್‌ ಮಾಡಿಕೊಂಡು  ಆ್ಯಪ್ ನಲ್ಲಿರುವ 'Add Pass' (ಪಾಸ್ ಸೇರಿಸಿ) ಆಯ್ಕೆಯನ್ನು ಕ್ಲಿಕ್ ಮಾಡಬೇಕು .  ನೀವು ಯಾರಿಗೆ ವಾರ್ಷಿಕ ಪಾಸ್ ನೀಡಲು ಬಯಸುತ್ತೀರೋ , ಅವರ ವಾಹನ ಸಂಖ್ಯೆ ಮತ್ತು ಸಂಪರ್ಕ ವಿವರಗಳನ್ನು ನಮೂದಿಸಬೇಕು . 
ಒಮ್ಮೆ ನಮೂದಿಸಿದ ನಂತರ, OTP ಪರಿಶೀಲನೆ ನಡೆಯುತ್ತೆ .  ಈ ಪರಿಶೀಲನೆ ಯಶಸ್ವಿಯಾದ ನಂತರ, ಆ ವಾಹನಕ್ಕೆ ಲಗತ್ತಿಸಲಾದ  ಅಸ್ತಿತ್ವದಲ್ಲಿರುವ ಫಾಸ್ಟ್‌ಟ್ಯಾಗ್‌ನಲ್ಲಿ ವಾರ್ಷಿಕ ಪಾಸ್ ಸಕ್ರಿಯಗೊಳ್ಳುತ್ತದೆ. 

Advertisment

FASTag! ಟೋಲಲ್ಲಿ ದುಪ್ಪಟ್ಟು ದಂಡ.. ಫಾಸ್ಟ್​​ಟ್ಯಾಗ್​ನ 5 ಹೊಸ ನಿಯಮಗಳು ಏನೇನು..?


ಏನಿದು ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್‌? 

ಈ ವಾರ್ಷಿಕ ಪಾಸ್‌ನ ಒಂದು-ಬಾರಿ ಶುಲ್ಕ ₹3,000 ಆಗಿದೆ.  ಇದು ಒಂದು ವರ್ಷದ ಅವಧಿಗೆ ಅಥವಾ 200 ಟೋಲ್ ಪ್ಲಾಜಾ ಕ್ರಾಸಿಂಗ್‌ಗಳಿಗೆ ಮಾನ್ಯವಾಗಿರುತ್ತದೆ.  ಪದೇ ಪದೇ ಫಾಸ್ಟ್‌ಟ್ಯಾಗ್ ರೀಚಾರ್ಜ್ ಮಾಡುವ ಅಗತ್ಯವಿರುವುದಿಲ್ಲ .  ಇದು ಮಾನ್ಯವಾದ ಫಾಸ್ಟ್‌ಟ್ಯಾಗ್ ಹೊಂದಿರುವ ಎಲ್ಲಾ ವಾಣಿಜ್ಯೇತರ ವಾಹನಗಳಿಗೆ ಅನ್ವಯವಾಗುತ್ತೆ.   ಭಾರತದಾದ್ಯಂತ ಸುಮಾರು 1,150 ಟೋಲ್ ಪ್ಲಾಜಾಗಳಲ್ಲಿ ಅನ್ವಯವಾಗುತ್ತೆ. 'ರಾಜಮಾರ್ಗಯಾತ್ರಾ' ಆ್ಯಪ್ ಮೂಲಕ ಒಂದು-ಬಾರಿ ಶುಲ್ಕ ಪಾವತಿಸಿದ ನಂತರ, ಅಸ್ತಿತ್ವದಲ್ಲಿರುವ ಫಾಸ್ಟ್‌ಟ್ಯಾಗ್‌ನಲ್ಲಿ ಈ ವಾರ್ಷಿಕ ಪಾಸ್ ಸಾಮಾನ್ಯವಾಗಿ ಎರಡು ಗಂಟೆಗಳ ಒಳಗೆ ಸಕ್ರಿಯಗೊಳ್ಳುತ್ತದೆ. 

ಈಗಾಗಲೇ ಆಗಸ್ಟ್ 15 ರಿಂದ ಇಲ್ಲಿಯವರೆಗೂ ಕೇವಲ 2 ತಿಂಗಳಲ್ಲಿ ದೇಶದಲ್ಲಿ 25 ಲಕ್ಷ ವಾಹನಗಳಿಗೆ ಫಾಸ್ಟ್ ಟ್ಯಾಗ್ ವಾರ್ಷಿಕ ಪಾಸ್ ಅನ್ನು ಜನರು ಪಡೆದಿದ್ದಾರೆ. ವಾರ್ಷಿಕ ಫಾಸ್ಟ್ ಟ್ಯಾಗ್ ಪಾಸ್ ಗೆ ಉತ್ತಮ ಪ್ರತಿಕ್ರಿಯೆ ಜನರಿಂದ ವ್ಯಕ್ತವಾಗಿದೆ. ಪ್ರತಿಯೊಂದು ಟೋಲ್ ಗಳಲ್ಲಿ ಹಣ ಕಟ್ ಆಗುವುದಕ್ಕಿಂತ ಈ ವಾರ್ಷಿಕ ಪಾಸ್‌ಗೆ ಒಮ್ಮೆ ರೀಚಾರ್ಜ್ ಮಾಡಿದರೇ, ಉತ್ತಮ.ಭಾರಿ ಹಣ ಉಳಿತಾಯವಾಗಲಿದೆ. ವಾಹನವೊಂದಕ್ಕೆ ವರ್ಷಕ್ಕೆ 5 ಸಾವಿರ ರೂಪಾಯಿ ಹಣ ಉಳಿತಾಯವಾಗುವ ಅಂದಾಜು ಇದೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

ANNUAL FASTAG TOLL PASS RAJMARGYATRA APP NHAI NITING GADKARI
Advertisment
Advertisment
Advertisment