/newsfirstlive-kannada/media/media_files/2025/10/09/coldrif-syrup-owner-arrested-2025-10-09-12-14-32.jpg)
ಕೋಲ್ಡ್ರೀಫ್ ಸಿರಫ್ ಕಂಪನಿಯ ಮಾಲೀಕ ಬಂಧನ
ಮಧ್ಯಪ್ರದೇಶದಲ್ಲಿ ಹನ್ನೆರಡು ಮಕ್ಕಳ ಜೀವ ಹೋಗಲು ಕಾರಣವಾದ ಕೆಮ್ಮಿನ ಸಿರಪ್ ದುರಂತದ ಪ್ರಮುಖ ಆರೋಪಿಯಾಗಿರುವ ಔಷಧ ಕಂಪನಿ ಮಾಲೀಕರನ್ನು ಮಧ್ಯರಾತ್ರಿಯ ನಾಟಕೀಯ ಕಾರ್ಯಾಚರಣೆಯ ನಂತರ ರಾಜ್ಯ ಪೊಲೀಸರು ಬಂಧಿಸಿದ್ದಾರೆ. ಕೋಲ್ಡ್ರಿಫ್ ಸಿರಪ್ ತಯಾರಿಸಿದ ಶ್ರೇಸನ್ ಫಾರ್ಮಾ ಕಂಪನಿಯು ರಂಗನಾಥನ್ ಗೋವಿಂದನ್ ಅವರದ್ದಾಗಿದೆ. ಕೆಮ್ಮಿನ ಸಿರಫ್ ಸೇವನೆಯಿಂದ ಕನಿಷ್ಠ 20 ಮಂದಿ ಮಕ್ಕಳು ದೇಶದಲ್ಲಿ ಸಾವನ್ನಪ್ಪಿದ್ದಾರೆ.
ದುರಂತ ಬೆಳಕಿಗೆ ಬಂದ ನಂತರ ರಂಗನಾಥನ್ ಮತ್ತು ಅವರ ಪತ್ನಿ ಪರಾರಿಯಾಗಿದ್ದರು. ಗುರುವಾರ ಬೆಳಗಿನ ಜಾವ 1:30 ರ ಸುಮಾರಿಗೆ ಚೆನ್ನೈನಲ್ಲಿ ಅವರನ್ನು ಬಂಧಿಸಲಾಯಿತು.
ನಿಖರವಾದ ಗುಪ್ತಚರ ಮಾಹಿತಿಯ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಔಷಧ ಕಂಪನಿಯ ವಿರುದ್ಧ ಎಫ್‌ಐಆರ್ ದಾಖಲಾಗಿದ ಒಂದು ದಿನದ ನಂತರ, ಅಂದರೆ ಅಕ್ಟೋಬರ್ 5 ರಂದು ಪರಸಿಯಾ ಉಪ-ವಿಭಾಗೀಯ ಪೊಲೀಸ್ ಅಧಿಕಾರಿ ನೇತೃತ್ವದ ಮಧ್ಯಪ್ರದೇಶದ ವಿಶೇಷ ಪೊಲೀಸ್ ತಂಡ ಚೆನ್ನೈ ತಲುಪಿತ್ತು. ತನಿಖೆಯ ತಾಂತ್ರಿಕ ಅಂಶಗಳನ್ನು ನಿರ್ವಹಿಸಲು ತಂಡವು ಮಹಿಳಾ ಅಧಿಕಾರಿಗಳು, ಸೈಬರ್ ತಜ್ಞರು ಮತ್ತು ಔಷಧ ನಿರೀಕ್ಷಕರನ್ನು ಒಳಗೊಂಡಿತ್ತು.
ರಂಗನಾಥನ್ ಅವರನ್ನು ಬಂಧಿಸಿದ ನಂತರ, ಅವರನ್ನು ಶ್ರೀಸನ್ ಫಾರ್ಮಾದ ಕಾಂಚೀಪುರಂ ಕಾರ್ಖಾನೆಗೆ ಕರೆದೊಯ್ಯಲಾಯಿತು. ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಳ್ಳಲಾಯಿತು. ರಂಗನಾಥನ್ ಅವರನ್ನು ವಿಚಾರಣೆಗಾಗಿ ಮಧ್ಯಪ್ರದೇಶದ ಚಿಂದ್ವಾರಕ್ಕೆ ಕರೆತರಲು ಪೊಲೀಸರು ಈಗ ಚೆನ್ನೈ ನ್ಯಾಯಾಲಯದಿಂದ ಟ್ರಾನ್ಸಿಟ್ ರಿಮಾಂಡ್ ಕೋರುತ್ತಿದ್ದಾರೆ.
ಚೆನ್ನೈ ಮೂಲದ 'ಕೋಲ್ಡ್ರಿಫ್' ಕೆಮ್ಮಿನ ಸಿರಪ್ ತಯಾರಕರಾದ ಸ್ರೆಸನ್ ಫಾರ್ಮಾಸ್ಯುಟಿಕಲ್ಸ್, 20 ಮಕ್ಕಳ ಸಾವು ಮತ್ತು ಇತರ ಹಲವಾರು ಜನರ ತೀವ್ರ ಅನಾರೋಗ್ಯಕ್ಕೆ ಸಿರಪ್ ಕಾರಣ ಎಂಬ ಆರೋಪದ ನಂತರ ತನಿಖೆ ನಡೆಯುತ್ತಿದೆ.
ಕೋಲ್ಡ್ರೀಫ್ ಸಿರಫ್ ಸೇವನೆಯಿಂದ ಮೃತಪಟ್ಟ ಮಕ್ಕಳ ಪೋಟೋ
1990 ರಲ್ಲಿ ಕಂಪನಿಯನ್ನು ಖಾಸಗಿ ಸೀಮಿತ ಕಂಪನಿಯಾಗಿ ನೋಂದಾಯಿಸಲಾಗಿತ್ತು . ಆದರೆ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ನೋಂದಣಿಯಿಂದ ತೆಗೆದುಹಾಕಲಾಗಿದೆ ಎಂದು ತನಿಖೆಗಳು ಇಲ್ಲಿಯವರೆಗೆ ಬಹಿರಂಗಪಡಿಸಿವೆ.
ಸಿರಪ್‌ಗಳು, ಟಾನಿಕ್ಸ್ ಮತ್ತು ಗಿಡಮೂಲಿಕೆ ಸೂತ್ರೀಕರಣಗಳಲ್ಲಿ "ವ್ಯಾಪಾರ" ಮಾಡುವುದಾಗಿ ಹೇಳಿಕೊಂಡ ಕಂಪನಿಯು ಈಗ ಸಂಪೂರ್ಣ ನಿರ್ಲಕ್ಷ್ಯ ಮತ್ತು ಔಷಧ ಉತ್ಪಾದನಾ ಮಾನದಂಡಗಳ ಉಲ್ಲಂಘನೆಯ ಆರೋಪಗಳನ್ನು ಎದುರಿಸುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ