/newsfirstlive-kannada/media/media_files/2026/01/25/padma-awards-2026-2026-01-25-18-35-38.jpg)
ನವದೆಹಲಿ: ದೇಶದ ಪ್ರತಿಷ್ಠಿತ ನಾಗರಿಕ ಗೌರವಗಳಾದ ಪದ್ಮ ವಿಭೂಷಣ, ಪದ್ಮ ಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರವು ಶನಿವಾರ ಸಂಜೆ ಪ್ರಕಟಿಸಿದೆ. 77ನೇ ಗಣರಾಜ್ಯೋತ್ಸವದ ಸಂಭ್ರಮದಲ್ಲಿರುವ ದೇಶಕ್ಕೆ, ವಿವಿಧ ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ಸಾಧಕರ ಪಟ್ಟಿಯನ್ನು ಬಿಡುಗಡೆ ಮಾಡುವ ಮೂಲಕ ಕೇಂದ್ರ ಸರ್ಕಾರ ಹರ್ಷ ಹಂಚಿಕೊಂಡಿದೆ.
ಈ ವರ್ಷ ಐದು ಜನರಿಗೆ ಪದ್ಮವಿಭೂಷಣ, 13 ಜನರಿಗೆ ಪದ್ಮಭೂಷಣ ಮತ್ತು 113 ಜನರಿಗೆ ಪದ್ಮಶ್ರೀ ಪ್ರಶಸ್ತಿಗಳನ್ನು ನೀಡಲಾಗಿದೆ. ಚಲನಚಿತ್ರ ನಟ ಧರ್ಮೇಂದ್ರ ಅವರಿಗೆ ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿದೆ. ಜಾರ್ಖಂಡ್ ರಾಜ್ಯ ಸ್ಥಾಪನೆಗಾಗಿ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ ನಾಯಕ ಶಿಬು ಸೊರೆನ್ ಅವರಿಗೆ ಮರಣೋತ್ತರವಾಗಿ ಪದ್ಮಭೂಷಣ ಪ್ರಶಸ್ತಿ ನೀಡಲಾಗಿದೆ. ಮಹಾರಾಷ್ಟ್ರದ ಮಾಜಿ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರಿಗೂ ಪದ್ಮಭೂಷಣ ಪ್ರಶಸ್ತಿ ನೀಡಲಾಗಿದೆ.
ಚುನಾವಣಾ ರಾಜ್ಯವಾದ ಕೇರಳದಿಂದ ಎಂಟು ಜನರು, ತಮಿಳುನಾಡಿನಿಂದ 13 ಜನರು, ಬಂಗಾಳದಿಂದ 11 ಜನರು ಮತ್ತು ಅಸ್ಸಾಂನಿಂದ 5 ಜನರು ಪದ್ಮ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇದಲ್ಲದೆ, ಉತ್ತರ ಪ್ರದೇಶದ 11 ಮತ್ತು ಮಹಾರಾಷ್ಟ್ರದ 16 ಜನರು ಪದ್ಮ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಪದ್ಮ ವಿಭೂಷಣ
- ಧರ್ಮೇಂದ್ರ ಸಿಂಗ್ ಡಿಯೋಲ್ (ಮರಣೋತ್ತರ)
- ಕೆಟಿ ಥಾಮಸ್
- ಎನ್ ರಂಜಮ್
- ಪಿ. ನಾರಾಯಣನ್
- ವಿ.ಎಸ್.ಅಚ್ಚುತನಂದನ್ (ಮರಣೋತ್ತರ)
ಪದ್ಮ ಭೂಷಣ
- ಅಲ್ಕ ಯಾಗ್ನಿಕ್
- ಭಗತ್ ಸಿಂಗ್ ಕೊಶ್ಯಾರಿ
- ಕಳ್ಳಿಪಟ್ಟಿ ರಾಮಸಾಮಿ ಪಳನಿಸ್ವಾಮಿ
- ಮಮ್ಮುಟ್ಟಿ
- ನೋರಿ ದತ್ತಾತ್ರೇಯುಡು
- ಪಿಯೂಷ್ ಪಾಂಡೆ (ಮರಣೋತ್ತರ)
- ಎಸ್‌ಕೆಎಂ ಮೈಲಾನಂಧನ್
- ಶತಾವಧಾನಿ ಆರ್ ಗಣೇಶ್
- ಶಿಬು ಸೊರೆನ್ (ಮರಣೋತ್ತರ)
- ಉದಯ್ ಕೊಟಕ್
- ವಿ.ಕೆ. ಮಲ್ಹೋತ್ರಾ (ಮರಣೋತ್ತರ)
- ವೆಲ್ಲಪ್ಪಳ್ಳಿ ನಟೇಶನ್
- ವಿಜಯ್ ಅಮೃತರಾಜ್
ಇನ್ನು, ಒಟ್ಟು 113 ಮಂದಿಗೆ ಪದ್ಮಶ್ರೀ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಕ್ರಿಕೆಟಿಗ ರೋಹಿತ್ ಶರ್ಮಾ, ಅಂಕೇಗೌಡ, ಡಾ ಪ್ರಭಾಕರ್ ಕೋರೆ, ಎಸ್ ಜಿ ಸುಶಿಲಮ್ಮ, ಶಶಿಶೇಖರ್ ವೆಂಪತಿ, ಶುಭವೇಂಕಟೇಶ ಅಯ್ಯಂಗಾರ್ ಸೇರಿ ಒಟ್ಟು 113 ಮಂದಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇದನ್ನೂ ಓದಿ: ‘ಅಕ್ಷರ ಯೋಗಿ’ ಅಂಕೇಗೌಡ ಯಾರು..? KSRTC ನೌಕರನ ಅಕ್ಷರ ಪ್ರೇಮ ‘ಪದ್ಮಶ್ರೀ’ ಮಟ್ಟಕ್ಕೆ ಬೆಳೆದ ಅಪರೂಪದ ಕಥೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us