/newsfirstlive-kannada/media/media_files/2025/09/05/donal-trump-2025-09-05-21-53-50.jpg)
ಪಾಕಿಸ್ತಾನವು ಸದ್ದಿಲ್ಲದೆ ಪರಮಾಣು ಪ್ರಯೋಗಗಳನ್ನ ಮಾಡ್ತಾ ಇದೆಯಾ? ಪಾಕಿಸ್ತಾನವು ಪರಮಾಣು ಶಸ್ತ್ರಾಸ್ತ್ರಗಳನ್ನ ಪ್ರಯೋಗ ಮಾಡ್ತಾ ಇದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಹಿರಂಗಪಡಿಸಿದ್ದಾರೆ. ರಷ್ಯಾ, ಚೀನಾ, ಪಾಕಿಸ್ತಾನ, ಉತ್ತರ ಕೊರಿಯಾ ದೇಶಗಳು ಪರಮಾಣು ಅಸ್ತ್ರಗಳ ಪ್ರಯೋಗ ಮಾಡ್ತಾ ಬರ್ತಿವೆ. ಆದರೆ ಅವು ವರದಿಯಾಗ್ತಾ ಇಲ್ಲ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅಮೆರಿಕಾ ಕೂಡ ಪರಮಾಣು ಅಸ್ತ್ರಗಳ ಪ್ರಯೋಗಕ್ಕೆ ಚಾಲನೆ ಕೊಡಲು ಮುಂದಾಗಿದ್ದು ಈ ಕುರಿತಂತೆ ಸಂದರ್ಶನವೊಂದರಲ್ಲಿ ಕೇಳಲಾದ ಪ್ರಶ್ನೆಗೆ ಟ್ರಂಪ್ ಉತ್ತರಿಸಿದ ಪರಿ ಇದು. ಜಗತ್ತನ್ನ 150 ಬಾರಿ ಸ್ಫೋಟಿಸುವಷ್ಟು ಪರಮಾಣು ಅಸ್ತ್ರಗಳು ಅಮೆರಿಕಾದ ಬಳಿ ಇದೆ. ಆದರೂ ನಾವು ಪರೀಕ್ಷೆ ಮುಂದುವರಿಸುತ್ತೇವೆ ಎಂದು ಟ್ರಂಪ್ ಹೇಳಿದ್ದಾರೆ. ಆದರೆ ಪಾಕಿಸ್ತಾನವೂ ಪರಮಾಣು ಶಸ್ತ್ರಾಸ್ತ್ರಗಳನ್ನ ಪ್ರಯೋಗ ಮಾಡ್ತಾ ಇದೆ ಎಂದು ಹೇಳಿರುವ ಟ್ರಂಪ್ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಅಮೆರಿಕಾವು 33 ವರ್ಷಗಳ ಬಳಿಕ ಮತ್ತೆ ಪರಮಾಣು ಶಸ್ತ್ರಾಸ್ತ್ರಗಳನ್ನ ಪರೀಕ್ಷೆ ಮಾಡಲು ಮುಂದಾಗಿದೆ.
1998ರಲ್ಲಿ ಭಾರತವು ಪೋಕ್ರಾನ್ ಅಣ್ವಸ್ತ್ರ ಪರೀಕ್ಷೆ ನಡೆಸಿತ್ತು. ಈ ವೇಳೆ ಅಮೆರಿಕಾವು ಭಾರತದ ಮೇಲೆ ನಿರ್ಬಂಧ ಹೇರಿತ್ತು. ಇದಾದ ಬಳಿಕ ಭಾರತವು ಅಣ್ವಸ್ತ್ರ ಪರೀಕ್ಷೆ ನಡೆಸಿಲ್ಲ. ಈಗ ಅಮೆರಿಕಾವು ಅಣ್ವಸ್ತ್ರ ಪರೀಕ್ಷೆಗೆ ಮರು ಚಾಲನೆ ನೀಡುತ್ತಿದೆ. ಭಾರತಕ್ಕೂ ಈಗ ಮತ್ತಷ್ಟು ಅಣ್ವಸ್ತ್ರ ಪರೀಕ್ಷೆಗೆ ಬಾಗಿಲು ಓಪನ್ ಆದಂತೆ ಆಗಿದೆ. ಹಾಗೇನೇ ಹೈಡ್ರೋಜನ್ ಬಾಂಬ್ ಪರೀಕ್ಷೆಗೂ ಭಾರತಕ್ಕೆ ಅವಕಾಶ ಮುಕ್ತವಾಗಿದೆ.
ಪಾಕಿಸ್ತಾನ ಪರಮಾಣು ಅಸ್ತ್ರ ಪ್ರಯೋಗ ಮಾಡಿದರೇ, ಭಾರತವು ಪಾಕಿಸ್ತಾನದ ಮೇಲೆ ಪರಮಾಣು ಅಸ್ತ್ರ ಪ್ರಯೋಗ ಮಾಡುತ್ತೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us