ಡಾಕ್ಟರ್ ಡ್ರೆಸ್ ನಲ್ಲಿರುವ ಉಗ್ರ ಉಮರ್ ನಬಿಯ ಪೋಟೋ ಬಿಡುಗಡೆ : ಫರೀದಾಬಾದ್‌ ಅಂಗಡಿಗೆ ಭೇಟಿ ನೀಡಿದ್ದ ಉಮರ್‌

ದೆಹಲಿಯ ಕೆಂಪುಕೋಟೆ ಎದುರು ಕಾರ್ ಸ್ಪೋಟಿಸಿದ ಡಾಕ್ಟರ್ ಉಮರ್ ಮೊಹಮ್ಮದ್ ನಬಿ ವೈದ್ಯನ ಡ್ರೆಸ್ ನಲ್ಲಿರುವ ಪೋಟೋ ಬಿಡುಗಡೆಯಾಗಿದೆ. ಫರೀದಾಬಾದ್‌ನ ಅಂಗಡಿಯೊಂದಕ್ಕೆ ಉಮರ್ ನಬಿ ಭೇಟಿ ಕೊಟ್ಟಿದ್ದ. ಆ ವೇಳೆಯ ಸಿಸಿಟಿವಿ ದೃಶ್ಯಾವಳಿಗಳನ್ನೇ ಪೋಟೋ ಆಗಿ ಈಗ ಬಿಡುಗಡೆ ಮಾಡಲಾಗಿದೆ.

author-image
Chandramohan
DR UMAR NABI IN DOCTOR DRESS

ವೈದ್ಯನ ಡ್ರೆಸ್ ನಲ್ಲಿರುವ ಉಗ್ರ ಡಾ.ಉಮರ್ ನಬಿ ಪೋಟೋ

Advertisment
  • ವೈದ್ಯನ ಡ್ರೆಸ್ ನಲ್ಲಿರುವ ಉಗ್ರ ಡಾ.ಉಮರ್ ನಬಿ ಪೋಟೋ
  • ಅಂಗಡಿಗೆ ಭೇಟಿ ಕೊಟ್ಟಿದ್ದ ಸಿಸಿಟಿವಿ ದೃಶ್ಯದಿಂದ ಪೋಟೋ ಬಿಡುಗಡೆ


ದೆಹಲಿಯ ರೆಡ್ ಪೋರ್ಟ್ ಎದುರು ಕಾರ್ ನಲ್ಲಿ ಬಾಂಬ್ ಸ್ಪೋಟಿಸಿದ ಡಾ.ಉಮರ್ ಮೊಹಮ್ಮದ್ ನಬಿಯ ಪೋಟೋ ಈಗ ಬಿಡುಗಡೆಯಾಗಿದೆ.  ಡಾಕ್ಟರ್ ಡ್ರೆಸ್ ನಲ್ಲಿ ಡಾ.ಉಮರ್ ಮೊಹಮ್ಮದ್ ನಬಿ ಇರುವ ಪೋಟೋ ಈಗ  ಬಿಡುಗಡೆಯಾಗಿದೆ.  ಹರಿಯಾಣದ ಫರೀದಾಬಾದ್ ನಲ್ಲಿರುವ ಆಲ್ ಫಲಾಹ್ ವಿಶ್ವವಿದ್ಯಾಲಯದ ಬಳಿಯ ಅಂಗಡಿಯೊಂದಕ್ಕೆ ಈ ಹಿಂದೆ ಉಮರ್ ಮೊಹಮ್ಮದ್  ನಬಿ ಹೋಗಿದ್ದ. ಆ ವೇಳೆ ಅಂಗಡಿಯ ಸಿಸಿಟಿವಿಯಲ್ಲಿ ಉಮರ್ ನಬಿಯ ವಿಡಿಯೋ ರೆಕಾರ್ಡ್ ಆಗಿತ್ತು. ಈ ವಿಡಿಯೋದಲ್ಲಿ ಡಾಕ್ಟರ್ ಡ್ರೆಸ್ ನಲ್ಲಿರುವ ಉಮರ್ ನಬಿಯ ಪೋಟೋವನ್ನು ಈಗ ತನಿಖಾ ಸಂಸ್ಥೆಗಳು ಸಂಗ್ರಹಿಸಿ ಬಿಡುಗಡೆ ಮಾಡಿವೆ.
ಡಾಕ್ಟರ್ ಉಮರ್ ನಬಿ ವೈಟ್ ಕಾಲ್ಹರ್ ಟೆರರಿಸ್ಟ್ . ಜೈಷ್ ಇ ಮೊಹಮ್ಮದ್ ಉಗ್ರಗಾಮಿ ಸಂಘಟನೆಯ ಪರವಾಗಿ ಭಾರತದಲ್ಲಿ ಕೆಲಸ ಮಾಡುತ್ತಿದ್ದ. 

Delhi bomb blast accussed umar nabi photos
Advertisment