/newsfirstlive-kannada/media/media_files/2025/08/15/modi-6-2025-08-15-07-10-45.jpg)
ನವದೆಹಲಿ: ಇಂದು ದೇಶದ್ಯಾಂತ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ, ಸಡಗರ ಹರಡಿದೆ. ಹಳ್ಳಿಯಿಂದ ದೆಹಲಿಯವರೆಗೂ ಸ್ವಾತಂತ್ರ್ಯ ದಿನಾಚರಣೆ ರಂಗು ರಂಗಿನಿಂದ ಹರಡಿದ್ದು, ಜನರೆಲ್ಲ ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಶಾಲಾ ಮಕ್ಕಳು ಹೊಸ ನಗುವಿನೊಂದಿಗೆ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗಿಯಾಗುತ್ತಿದ್ದಾರೆ. ಅದರಂತೆ ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರು ಎಷ್ಟನೇ ಬಾರಿ ಧ್ವಜಾರೋಹಣ ನೆರವೇರಿಸಲಿದ್ದಾರೆ ಎನ್ನುವ ಮಾಹಿತಿ ಇಲ್ಲಿದೆ.
ಪ್ರಧಾನಿ ನರೇಂದ್ರ ಮೋದಿಯವರು ಇಂದು ಬೆಳಗ್ಗೆ ದೆಹಲಿಯ ರಾಜ್ಘಾಟ್ನಲ್ಲಿರುವ ಮಹಾತ್ಮ ಗಾಂಧಿ ಅವರ ಸಮಾಧಿಗೆ ಭೇಟಿ ನೀಡಲಿದ್ದಾರೆ. ಬಳಿಕ ಮಹಾತ್ಮ ಗಾಂಧಿ ಸಮಾಧಿಗೆ ನಮನ ಸಲ್ಲಿಕೆ ಮಾಡಲಿದ್ದಾರೆ. ಇದಾದ ಮೇಲೆ ದೆಹಲಿಯ ಕೆಂಪುಕೋಟೆಯ ಮೇಲೆ 7:20 ರಿಂದ 7: 30ರ ಒಳಗಾಗಿ ಧ್ವಜಾರೋಹಣ ನೆರವೇರಿಸುವರು. ಈ ಬಾರಿಯ ಧ್ವಜಾರೋಹಣ ಸೇರಿ ಪ್ರಧಾನಿ ಮೋದಿ ಅವರು ಒಟ್ಟು 12 ಬಾರಿ ಧ್ವಜಾರೋಹಣ ನೆರವೇರಿಸಿದಂತೆ ಆಗುತ್ತದೆ.
ಇದನ್ನೂ ಓದಿ: ಭಾರತದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಹಾತ್ಮ ಗಾಂಧಿ ಭಾಗವಹಿಸಲಿಲ್ಲ; ಕಾರಣವೇನು?
ಭಾರತೀಯ ಸೇನೆಯ ತುಕಡಿಗಳಾದ ಭೂ ಸೇನೆ, ನೌಕಪಡೆ, ಸಿಆರ್ಪಿಎಫ್, ಐಟಿಬಿಪಿ, ಸಿಐಎಸ್ಎಫ್, ಎನ್ಸಿಸಿ ಸೇರಿದಂತೆ ಎಲ್ಲರೂ ಮಾರ್ಚಿಂಗ್ ಮಾಡುವ ಮೂಲಕ ವಂದನೆ ಸಲ್ಲಿಕೆ ಮಾಡಲಿದ್ದಾರೆ. ಈ ಸಮಾರಂಭಕ್ಕೆ ಭಾರೀ ಭದ್ರತೆ ಒದಗಿಸಲಾಗಿರುತ್ತದೆ. ಎಸ್ಪಿಜಿ ಭದ್ರತಾ ಪಡೆ, ಯಾವುದೇ ಡ್ರೋನ್ ಹಾರಾಟಕ್ಕೆ ಅವಕಾಶ ಇರುವುದಿಲ್ಲ. ಸಿಸಿಟಿ ಕ್ಯಾಮೆರಾಗಳು ಹದ್ದಿನ ಕಣ್ಣು ಇಟ್ಟಿರುತ್ತಾವೆ. 10 ಸಾವಿರಕ್ಕೂ ಹೆಚ್ಚು ಪೊಲೀಸರಿಂದ ನಗರದಲ್ಲಿ ಎಲ್ಲೆಡೆ ಭದ್ರತೆ ಒದಗಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ