/newsfirstlive-kannada/media/media_files/2025/09/21/modi-7-2025-09-21-17-14-40.jpg)
ನವದೆಹಲಿ: ನವರಾತ್ರಿ ಮುನ್ನಾ ದಿನವೇ ಪ್ರಧಾನಿ ಮೋದಿ ಅವರು ಇಡೀ ದೇಶದ ಜನರಿಗೆ ಶುಭಾಶಯಗಳನ್ನು ಕೋರಿದ್ದಾರೆ. ನಾಳೆಯಿಂದ ಜಿಎಸ್​ಟಿ ಪರಿಷ್ಕೃತ ದರ 2.0 ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ.
ದೇಶವನ್ನು ಉದ್ದೇಶಿಸಿ ಮಾತನಾಡುತ್ತಿರುವ ಪ್ರಧಾನಿ ಮೋದಿ ಅವರು, ದೇಶದ ಸಮಸ್ತ ಜನರಿಗೆ ನವರಾತ್ರಿಯ ಶುಭಾಶಯಗಳು. ನಾಳೆ ಸೆಪ್ಟೆಂಬರ್​ 22 ರಿಂದ ಜಿಎಸ್​ಟಿ ಪರಿಷ್ಕೃತ ದರ ಜಾರಿಗೆ ಬರಲಿದೆ. ಮಧ್ಯಮ ವರ್ಗದ ಜನರಿಗೆ ಹೊಸ ಜಿಎಸ್​ಟಿ ಉಪಯೋಗ ಆಗಲಿದೆ. ನಿಮ್ಮ ಇಷ್ಟದ ವಸ್ತುಗಳನ್ನು ಖರೀದಿ ಮಾಡಬಹುದು. ದೇಶವನ್ನು ಈ ಪರಿಸ್ಥಿತಿಯಿಂದ ಹೊರ ತರುವುದು ಮುಖ್ಯವಾಗಿತ್ತು. ಈಗ ಒಂದು ದೇಶ, ಒಂದು ತೆರಿಗೆ ಸಹಕಾರವಾಗಿದೆ ಎಂದು ಹೇಳಿದ್ದಾರೆ.
- ನಾವು ಸ್ವದೇಶಿ ವಸ್ತುಗಳನ್ನು ಬಳಸಿದರೆ ದೇಶದ ಅಭಿವೃದ್ಧಿ ಸಾಧ್ಯ
- ಎಂಎಸ್​ಎಂಇ ಗೆ ನಾವು ಸಾಕಷ್ಟು ಪ್ರೋತ್ಸಾಹ ಕೊಟ್ಟಿದ್ದೇವೆ
- ಎಲ್ಲರೂ ಮೇಡ್ ಇನ್ ಇಂಡಿಯಾ ವಸ್ತುಗಳನ್ನು ಬಳಸಿ
- ಬಡ ಹಾಗೂ ಮಧ್ಯಮ ವರ್ಗಕ್ಕೆ ಹೊಸ ಜಿಎಸ್​ಟಿ ಉಪಯೋಗ
- ಔಷಧ, ಹಾಲು ಸೇರಿ ಅಗತ್ಯ ವಸ್ತುಗಳ ಬೆಲೆ ಕಡಿಮೆ ಆಗಲಿವೆ
- ಇನ್ಮುಂದೆ ಶೇಕಡಾ 99 ರಷ್ಟು ವಸ್ತುಗಳ ಬೆಲೆ ಕಡಿಮೆ ಆಗಲಿವೆ
- ಬಡ ಮಧ್ಯಮ ಹಾಗೂ ಮಹಿಳೆಯರು ಸೇರಿ ಎಲ್ಲರಿಗೂ ಉಪಯೋಗ
- ಜನರು ಈಗ ಸುಲಭವಾಗಿ ಹಣ ಉಳಿತಾಯ ಮಾಡಬಹುದು
- ದೇಶದ ಜನರ ಉಳಿತಾಯ ನಾಳೆಯಿಂದ ಆರಂಭವಾಗಲಿದೆ
- ಜಿಎಸ್​ಟಿ ಸುಧಾರಣೆಯಿಂದ ಜನರಿಗೆ ಉಳಿತಾಯ ಆಗಲಿದೆ
- ಇನ್ಮುಂದೆ ಶೇ. 5 ಹಾಗೂ ಶೇ. 18 ರಷ್ಟು ಸ್ಲ್ಯಾಬ್
- ಮಧ್ಯಮ ವರ್ಗದ ಪರ ನಮ್ಮ ಸರ್ಕಾರ ಇದೆ
- ಜಿಎಸ್​ಟಿ ಸರಳೀಕರಣದಿಂದ ಎಲ್ಲರಿಗೂ ಪ್ರಯೋಜನ
- ನಮಗೆ ಗೊತ್ತಿಲ್ಲದಂತೆ ವಿದೇಶಿ ವಸ್ತುಗಳನ್ನು ಬಳಕೆ ಮಾಡುತ್ತಿದ್ದೇವೆ
- ಸ್ವದೇಶ ವಸ್ತುಗಳ ಖರೀದಿ ಹೆಚ್ಚು ಹೆಚ್ಚು ಮಾಡಿ- ಪ್ರಧಾನಿ ಮೋದಿ
- ನಾಗರೀಕ ದೇವೋಭವ ನಮ್ಮ ಮೊದಲ ಮಂತ್ರವಾಗಿದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ