Advertisment

ದಸರಾ, ದೀಪಾವಳಿಗೆ ಮೋದಿ ಸರ್ಕಾರದಿಂದ ಗುಡ್​ನ್ಯೂಸ್​​.. ನವರಾತ್ರಿ ಮೊದಲ ದಿನದಿಂದ ಜಾರಿ

ದೇಶದ ಜನರಿಗೆ ದಸರಾ-ದೀಪಾವಳಿಗೆ ಕೇಂದ್ರ ಸರ್ಕಾರ ಭರ್ಜರಿ ಗಿಫ್ಟ್ ಕೊಟ್ಟಿದೆ. ಜನರ ಜೇಬಿಗೆ ಜಿಎಸ್‌ಟಿ ದರ ಹಾಕುತ್ತಿರೋ ಬರೆಯ ನೋವನ್ನ ಕೊಂಚ ಕಡಿಮೆ ಮಾಡಿದೆ. ಕೆಂಪುಕೋಟೆ ಮೇಲೆ ನಿಂತು ಪ್ರಧಾನಿ ಮೋದಿ ನೀಡಿದ್ದ ವಾಗ್ದಾನ ನಿಜವಾಗಿದೆ.

author-image
Bhimappa
MODI_NEW (2)
Advertisment

ಗ್ರಾಹಕರ ತಲೆ ಮೇಲಿದ್ದ ಜಿಎಸ್‌ಟಿ ತೆರಿಗೆ ಬರೆಯನ್ನ ಕೇಂದ್ರ ಸರ್ಕಾರ ಇಳಿಸಿದೆ. ಕೆಂಪುಕೋಟೆ ಮೇಲೆ ಮೋದಿ ಮಾಡಿದ್ದ ಘೋಷಣೆ ಕೆಲವೇ ದಿನಗಳಲ್ಲಿ ಜಾರಿಗೆ ಬರಲಿದೆ. ದೇಶದಲ್ಲಿ ಎಲ್ಲ ಫುಡ್, ಟೆಕ್ಸ್ ಟೈಲ್ ಉತ್ಪನ್ನಗಳ ಮೇಲಿನ ಜಿಎಸ್‌ಟಿ ದರ ಇಳಿಕೆಯಾಗಿದೆ. ದಸರಾ, ದೀಪಾವಳಿಗೆ ಮೋದಿ ಸರ್ಕಾರ ದೇಶದ ಜನರಿಗೆ ಸಿಹಿಸುದ್ದಿಯನ್ನ ನೀಡಿದೆ.

Advertisment

ದೇಶದ ಜನರಿಗೆ ದಸರಾ-ದೀಪಾವಳಿಗೆ ಕೇಂದ್ರ ಸರ್ಕಾರ ಭರ್ಜರಿ ಗಿಫ್ಟ್ ಕೊಟ್ಟಿದೆ. ಜನರ ಜೇಬಿಗೆ ಜಿಎಸ್‌ಟಿ ದರ ಹಾಕುತ್ತಿರೋ ಬರೆಯ ನೋವನ್ನ ಕೊಂಚ ಕಡಿಮೆ ಮಾಡಿದೆ. ಕೆಂಪುಕೋಟೆ ಮೇಲೆ ನಿಂತು ಪ್ರಧಾನಿ ಮೋದಿ ನೀಡಿದ್ದ ವಾಗ್ದಾನ ನಿಜವಾಗಿದೆ. ಭಾರತದ ಬಡ-ಮಧ್ಯಮ ವರ್ಗದ ಬದುಕು ಬಂಗಾರವಾಗುವ ದಿನ ಹತ್ತಿರವಾಗಿದೆ.

MIRMALA_SITARAMAN_1

ದೇಶವಾಸಿಗಳ ಜಿಎಸ್‌ಟಿ ಹೊರೆಯನ್ನ ಇಳಿಸಿದ ‘ನಮೋ’

ಬಡ-ಮಧ್ಯಮ ವರ್ಗಕ್ಕೆ ದಸರಾಗೂ ಮೊದಲೇ ದೀಪಾವಳಿ ಸಂಭ್ರಮಿಸುವ ಸಮಯ ಬಂದಿದೆ. ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಟ್ಯಾಕ್ಸ್​​ ಕ್ರಾಂತಿ ಮೊಳಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಎಸ್‌ಟಿ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. 4 ಸ್ಲ್ಯಾಬ್​ಗಳ ಬದಲು 2 ಸ್ಲ್ಯಾಬ್​​​ಗಳಲ್ಲಿ ಜಿಎಸ್​ಟಿ ಜಾರಿಗೆ ಕೇಂದ್ರ ಸರ್ಕಾರ ತೀರ್ಮಾನ ಮಾಡಿದೆ. ಶೇ.5 ಮತ್ತು ಶೇ. 18ರ ಸ್ಲ್ಯಾಬ್‌ಗಳನ್ನ ಮಾತ್ರ ಉಳಿಸಿಕೊಳ್ಳಲು ‌ಒಪ್ಪಿಗೆ ನೀಡಿದೆ. ಇದ್ರಿಂದ ದೇಶದ ಮಧ್ಯಮ ವರ್ಗದವರಿಗೆ ಭರ್ಜರಿ ಗುಡ್‌ನ್ಯೂಸ್‌ ಸಿಕ್ಕಿದೆ. 

ಯಾವ ವಸ್ತುಗಳು ಶೇ.18 ರಿಂದ 5ಕ್ಕೆ ಇಳಿಕೆ?

  • ಚಾಕೋಲೆಟ್​, ಕಾಫಿ, ಇನ್​ಸ್ಟಾಂಟ್​​ ನೂಡಲ್ಸ್, ಪಾಸ್ತಾ
  • ಬೆಣ್ಣೆ, ತುಪ್ಪ, ಸಾಸ್​, ನಮ್ಕೀನ್​, ಸಂರಕ್ಷಿತ ಮಾಂಸ
  • ಟೂತ್​ಬ್ರೆಷ್​, ಸೈಕಲ್, ಪಾದರಕ್ಷೆ, ಬಟ್ಟೆಗಳು
  • ಹೇರ್​ ಆಯಿಲ್, ಟಾಯ್ಲೆಟ್​ ಸೋಪ್, ಸೋಪುಗಳು
  • ಅಡುಗೆ ಸಾಮಗ್ರಿ, ಬೆಡ್​ ಶೀಟ್​, ಟೂತ್​ಪೇಸ್ಟ್​, ಮಾರ್ಬಲ್​
  • ಕರಕುಶಲ ವಸ್ತುಗಳು, ಚರ್ಮದ ಉತ್ಪನ್ನಗಳು, ಶಾಂಪೂ
  • ಕಾರ್ನ್ ಫ್ಲೇಕ್ಸ್, ಉಪ್ಪು, ಟೇಬಲ್, ಕುರ್ಚಿಗಳು 
  • ನವೀಕರಿಸಬಹುದಾದ ಇಂಧನ, ರಸಗೊಬ್ಬರಗಳು
Advertisment

GST (2)

ಇದಷ್ಟೇ ಅಲ್ಲ, ಆಟೋಮೊಬೈಲ್ ಕ್ಷೇತ್ರಕ್ಕೂ ಜಿಎಸ್‌ಟಿ ಗುಡ್‌ನ್ಯೂಸ್‌ ಸಿಕ್ಕಿದೆ. ಕಾರು, ಬೈಕ್‌, ಆಟೋಗಳ ಮೇಲಿನ ಜಿಎಸ್‌ಟಿಯೂ ಇಳಿಕೆಯಾಗಿದೆ.

ಯಾವುದು ಶೇ. 28ರಿಂದ 18ಕ್ಕೆ ಇಳಿಕೆ

  • ಸಿಮೆಂಟ್​, ಎಲ್ಲ ಮಾದರಿಯ ಟಿವಿ, ಎಸಿ, ಪ್ರಿಡ್ಜ್
  • 350 ಸಿಸಿ ಒಳಗಿನ ಮೋಟಾರ್​ ಸೈಕಲ್, ಸಣ್ಣ ಕಾರುಗಳು
  • ಟ್ರ್ಯಾಕ್ಟರ್​, ಬಸ್​, ಟ್ರಕ್, ತ್ರಿಚಕ್ರವಾಹನ, ಆಟೋ ಬಿಡಿ ಭಾಗ

ಇನ್ನು ಕೆಲವು ಉತ್ಪನ್ನಗಳ ಮೇಲಿನ ಜಿಎಸ್‌ಟಿ ದರವನ್ನ ಕೇಂದ್ರ ಸರ್ಕಾರ ಹೆಚ್ಚಿಸಿದೆ. ಅವುಗಳು ಎಂದರೆ.. ಪಾನ್​ ಮಸಾಲ, ಸಿಗರೇಟ್​, ತಂಬಾಕು ಪದಾರ್ಥಗಳ ಮೇಲಿನ ಜಿಎಸ್‌ಟಿಯನ್ನ ಕೇಂದ್ರ ಸರ್ಕಾರ ಶೇಕಡ 40ಕ್ಕೆ ಏರಿಕೆ ಮಾಡಿದೆ. ತಂಪು ಪಾನೀಯಗಳು, ವೈಯಕ್ತಿಕ ಬಳಕೆಯ ವಿಮಾನ, ನಾನ್ ಆಲ್ಕೋಹಾಲ್ ಪಾನೀಯಗಳ ಮೇಲಿನ ಜಿಎಸ್‌ಟಿ ಏರಿಕೆಯಾಗಿದೆ.)

Advertisment

ಇನ್ನೂ ಆರೋಗ್ಯ ವಲಯ ಮತ್ತು ಶೈಕ್ಷಣಿಕ ವಲಯಕ್ಕೆ ಕೇಂದ್ರ ಸರ್ಕಾರ ಬಿಗ್ ರಿಲೀಫ್ ಕೊಟ್ಟಿದೆ. ಝೀರೋ ಜಿಎಸ್‌ಟಿ ಘೋಷಣೆ ಮಾಡಿ ಗುಡ್‌ನ್ಯೂಸ್‌ ಕೊಟ್ಟಿದೆ. 

ಯಾವುದಕ್ಕೆಲ್ಲಾ GST ವಿನಾಯಿತಿ?

  • 33 ಜೀವರಕ್ಷಕ ಔಷಧಗಳು, ಕ್ಯಾನ್ಸರ್ ಔಷಧಗಳು
  • ಅಪರೂಪದ ಕಾಯಿಲೆಗಳ ಔಷಧಗಳು
  • ವೈಯಕ್ತಿಕ ಜೀವ ವಿಮೆ, ಆರೋಗ್ಯ ಪಾಲಿಸಿಗಳು
  • ಮ್ಯಾಪ್‌, ಚಾರ್ಟ್‌, ಗ್ಲೋಬ್‌ಗಳು, ಪೆನ್ಸಿಲ್‌ಗಳು
  • ಶಾರ್ಪನರ್‌, ಕ್ರಯೋನ್‌, ನೋಟ್‌ಬುಕ್‌ಗಳು
  • ಪ್ಯಾಸ್ಟೆಲ್‌ಗಳು, ಎರೇಸರ್‌ಗೆ ಜಿಎಸ್‌ಟಿ ಇಲ್ಲ
  • ಹಾಲು, ಪನೀರ್, ಪಿಜ್ಜಾ, ಬ್ರೆಡ್, ಚಪಾತಿ, ರೋಟಿ

GST (3)

ದೇಶದ ಜನರಿಗೆ ದೀಪಾವಳಿ ಗಿಫ್ಟ್ ಎಂದ ಮೋದಿ

ಜಿಎಸ್‌ಟಿ ಸ್ಲ್ಲ್ಯಾಬ್‌ಗಳಲ್ಲಿ ಭಾರೀ ಬದಲಾವಣೆ ಮಾಡಿದ ಬಳಿಕ ಪ್ರಧಾನಿ ಮೋದಿ ಟ್ವೀಟ್‌ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ಸ್ವಾತಂತ್ರ್ಯೋತ್ಸವ ಭಾಷಣದ ಸಂದರ್ಭದಲ್ಲಿ ಜಿಎಸ್‌ಟಿಯಲ್ಲಿ ಮುಂದಿನ ಪೀಳಿಗಾಗಿ ಕೆಲವೊಂದು ಮಹತ್ವದ ಸುಧಾರಣೆಗಳನ್ನು ತರುವ ಉದ್ದೇಶದ ಬಗ್ಗೆ ಮಾತನಾಡಿದ್ದೆ. ಅದರಂತೆ ಸಾಮಾನ್ಯ ಜನರ ಜೀವನ ಸುಗಮಗೊಳಿಸುವ ಮತ್ತು ಆರ್ಥಿಕತೆಯನ್ನು ಬಲಪಡಿಸುವ ಗುರಿಯಿಂದ ದೀಪಾಳಿಗೆ ಗಿಫ್ಟ್ ನೀಡಲಾಗಿದೆ ಅಂತ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. 

Advertisment

ಕೇಂದ್ರ ಸರ್ಕಾರದ ಈ ಜಿಎಸ್‌ಟಿ ಸ್ಲ್ಯಾಬ್ ನವರಾತ್ರಿ ಮೊದಲ ದಿನವಾದ ಸೆಪ್ಟೆಂಬರ್ 22 ರಂದು ಜಾರಿಯಾಗಲಿದೆ. ಈ ಮೂಲಕ ದೇಶವಾಸಿಗಳಿಗೆ ದಸರಾ, ದೀಪಾವಳಿ ಹಬ್ಬಕ್ಕೆ ನರೇಂದ್ರ ಮೋದಿ ಸರ್ಕಾರ ಶುಭ ಸುದ್ದಿ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Pm Narendra Modi GST cut 175 items PM Modi GST REFORMS
Advertisment
Advertisment
Advertisment