/newsfirstlive-kannada/media/media_files/2025/11/25/ayodhya-rama-mandir-1-2025-11-25-09-17-06.jpg)
/newsfirstlive-kannada/media/media_files/2025/11/25/ayodhya-rama-mandir-2-2025-11-25-09-17-26.jpg)
ಕೇಸರಿಧ್ವಜ ಹಾರಿಸಲಿದ್ದಾರೆ..
ರಾಮಜನ್ಮಭೂಮಿ ದೇವಾಲಯದ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದರ ಸಂಕೇತವಾಗಿ ಇಂದು ಪ್ರಧಾನಿ ಮೋದಿ ಅಯೋಧ್ಯೆಗೆ ಭೇಟಿ ನೀಡಲಿದ್ದು ರಾಮಮಂದಿರದ ಮೇಲಿಂದ ಕೇಸರಿಧ್ವಜ ಹಾರಿಸಲಿದ್ದಾರೆ.. ಧ್ವಜಾರೋಹಣಕ್ಕೆ ಅಯೋಧ್ಯೆ ಸಕಲ ರೀತಿಯಲ್ಲೂ ಸಜ್ಜಾಗಿದೆ.
/newsfirstlive-kannada/media/media_files/2025/11/25/ayodhya-rama-mandir-3-2025-11-25-09-17-41.jpg)
ಕೋಟಿ ಭಕ್ತರ ಕನಸು ಸಕಾರಗೊಂಡ ಕ್ಷಣ
ಭರತ ವರ್ಷದ ಆತ್ಮ, ಅದರ ಚೈತನ್ಯ ಹಾಗೂ ವೈಭವದ ಅಡಿಪಾಯ ಭಗವಾನ್ ಶ್ರೀ ರಾಮ.. ಶ್ರೀರಾಮ ಅಂದ್ರೆ ತೇಜಸ್ಸು.. ಶೌರ್ಯ..ಆದರ್ಶಗಳ ಪ್ರತೀಕ.. ಜೈ ಶ್ರೀರಾಮ್ ಎಂಬುದು ಆಧ್ಯಾತ್ಮಿಕತೆ ಹಾಗೂ ಸಾಂಸ್ಕೃತಿಕ ಪರಂಪರೆಯ ಸಂಕೇತ.. ದಶರಥನಂದನ.. ಜಾನಕಿರಮಣ ಶ್ರೀರಾಮನ ಜನ್ಮಭೂಮಿಯಲ್ಲಿ ಕೋಟಿ ಕೋಟಿ ಭಕ್ತರ ಕನಸು ಸಕಾರಗೊಂಡ ಕ್ಷಣ ಇದು..
/newsfirstlive-kannada/media/media_files/2025/11/25/ayodhya-rama-mandir-4-2025-11-25-09-17-54.jpg)
2ನೇ ವಾರ್ಷಿಕೋತ್ಸವ
2025ರ ಈ ವರ್ಷ ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಸಂಬಂಧ ವಿಶೇಷ ಸಂವತ್ಸರ. ಜನವರಿ 22, 2024ರಂದು ನಡೆದ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯ ಮೊದಲ ಹಾಗೂ 2ನೇ ವಾರ್ಷಿಕೋತ್ಸವಗಳು ವರ್ಷಾಂತ್ಯಕ್ಕೆ ಜರುಗಲಿವೆ.
/newsfirstlive-kannada/media/media_files/2025/11/25/ayodhya-rama-mandir-5-2025-11-25-09-18-04.jpg)
ಪ್ರಧಾನಿ ಮೋದಿ ಅಯೋಧ್ಯೆಗೆ
ಇದಕ್ಕೂ ಮುನ್ನ ಶ್ರೀರಾಮ ದೇಗುಲ ನಿರ್ಮಾಣ ಕಾರ್ಯ ಸಂಪೂರ್ಣಗೊಂಡಿರುವ ಹಿನ್ನೆಲೆ ಇವತ್ತು ಧ್ವಜಾರೋಹಣಕ್ಕೆ ಸಜ್ಜಾಗಿದೆ. ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಶುಭ ಪಂಚಮಿಯಂದು, ರಾಮಮಂದಿರದ ಮೇಲೆ ಧರ್ಮಧ್ವಜ ರಾರಾಜಿಸಲಿದೆ. ಇವತ್ತು ಪ್ರಧಾನಿ ಮೋದಿ ಅಯೋಧ್ಯೆಗೆ ಆಗಮಿಸಲಿದ್ದು ರಾಮಮಂದಿರದ ಮೇಲೆ ಕೇಸರಿಧ್ವಜ ಪ್ರತಿಷ್ಠಾಪನೆ ಮಾಡಲಿದ್ದಾರೆ.. ಹೀಗಾಗಿ ಅಯೋಧ್ಯೆ ಝಗಮಗಿಸುತ್ತಿದೆ.
/newsfirstlive-kannada/media/media_files/2025/11/25/ayodhya-rama-mandir-6-2025-11-25-09-18-22.jpg)
ಅಯೋಧ್ಯೆಯಲ್ಲಿ ‘ಧ್ವಜ’ ವೈಭವ!
ಬೆಳಗ್ಗೆ 10ಕ್ಕೆ ಸಪ್ತಮಂದಿರಗಳಿಗೆ ಮೋದಿ ಭೇಟಿ, ಪೂಜೆ ಮಾತಾ ಅನ್ನಪೂರ್ಣ, ರಾಮ ದರ್ಬಾರ್ ಗೃಹಕ್ಕೂ ಭೇಟಿ ಬಳಿಕ ಭಗವಾನ್ ರಾಮನ ವಿಗ್ರಹಕ್ಕೂ ಪ್ರಧಾನಿ ಪ್ರಾರ್ಥನೆ ಮಧ್ಯಾಹ್ನ 12ಕ್ಕೆ ಮಂದಿರದ ಮೇಲೆ ಕೇಸರಿ ಧ್ವಜಾರೋಹಣ 10 ಅಡಿ ಎತ್ತರ, 20 ಅಡಿ ಉದ್ದದ ತ್ರಿಕೋನ ಕೇಸರಿ ಧ್ವಜ ಧ್ವಜದ ಮೇಲೆ ಸೂರ್ಯ, ಓಂ ಚಿಹ್ನೆ, ಕುವಿದಾರ ವೃಕ್ಷ ಕುಸುರಿ ಧ್ವಜಾರೋಹಣದ ಬಳಿಕ ಸಭೆಯನ್ನುದ್ದೇಶಿಸಿ ಮೋದಿ ಮಾತು
/newsfirstlive-kannada/media/media_files/2025/11/25/ayodhya-rama-mandir-7-2025-11-25-09-18-37.jpg)
ಗಣ್ಯರು ದೌಡು
ಈಗಾಗಲೇ ಅಯೋಧ್ಯೆಯಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಧ್ವಜಾರೋಹಣ ಮಹೋತ್ಸವದ ಸಕಲ ಉಸ್ತುವಾರಿ ಜವಾಬ್ದಾರಿ ಹೊತ್ತಿದ್ದಾರೆ. ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸೇರಿ ಹಲವು ಹಿಂದೂ ಸಂಘಟನೆಗಳ ಮುಖಂಡರು, ಗಣ್ಯರು ಅಯೋಧ್ಯೆಗೆ ಆಗಮಿಸುತ್ತಿದ್ದಾರೆ.
/newsfirstlive-kannada/media/media_files/2025/11/25/ayodhya-rama-mandir-8-2025-11-25-09-18-48.jpg)
ಟೈಟ್ ಸೆಕ್ಯೂರಿಟಿ
ದೇಶದ ಮೂಲೆಮೂಲೆಗಳಿಂದಲೂ ಭಕ್ತರು ಕೂಡ ಆಗಮಿಸ್ತಿದ್ದಾರೆ. ಈ ಹಿನ್ನೆಲೆ ಅಯೋಧ್ಯೆಯಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಭದ್ರತೆಗಾಗಿ ಒಟ್ಟು 6970 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈ ಮೂಲಕ ಸಣ್ಣ ಅಹಿತಕರ ಘಟನೆ ನಡೆಯದಂತೆ ಹದ್ದಿನ ಕಣ್ಣಿಡಲಾಗಿದೆ.
/newsfirstlive-kannada/media/media_files/2025/11/25/ayodhya-rama-mandir-9-2025-11-25-09-18-59.jpg)
ಶ್ರೀರಾಮನ ಜೀವನಗಾಥೆ
ಧ್ವಜಾರೋಹಣಕ್ಕೂ ಮುನ್ನ ದಿನ ಸಂಜೆ ಇಡೀ ಅಯೋಧ್ಯಾ ನಗರವನ್ನು ದೀಪಾಲಂಕಾರ, ಹೂವುಗಳಿಂದ ಅಲಂಕರಿಸಲಾಗಿತ್ತು. ಲೇಸರ್ ಲೈಟ್ ಮೂಲಕ ಶ್ರೀರಾಮಚಂದ್ರನ ಜೀವನದ ಕತೆಯನ್ನು ಬಿತ್ತರಿಸಲಾಯಿತು.
/newsfirstlive-kannada/media/media_files/2025/11/25/ayodhya-rama-mandir-10-2025-11-25-09-19-13.jpg)
ಒಟ್ಟಾರೆ ಅಯೋಧ್ಯೆಯ ರಾಮಮಂದಿರ 2024ರ ಜನವರಿ 22ರಂದೇ ಉದ್ಘಾಟನೆಗೊಂಡಿದ್ದರೂ, ಮಂದಿರದ ಹಲವು ನಿರ್ಮಾಣ ಕಾರ್ಯಗಳು ಇನ್ನೂ ಪ್ರಗತಿಯಲ್ಲಿದ್ವು. ಈಗ ಎಲ್ಲಾ ಕಾರ್ಯಗಳು ಸಂಪೂರ್ಣಗೊಂಡಿದ್ದು, ಐತಿಹಾಸಿಕ ಸಮಾರಂಭಕ್ಕೆ ರಾಮಜನ್ಮ ಭೂಮಿ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಇವತ್ತಿನ ಧ್ವಜಾರೋಹಣದ ಮೂಲಕ ರಾಮರಾಜ್ಯದ ಹೊಸ ಯುಗದ ಆರಂಭಕ್ಕೆ ಸಾಕ್ಷಿಯಾಗಲಿದೆ.
/newsfirstlive-kannada/media/media_files/2025/11/25/ayodhya-rama-mandir-11-2025-11-25-09-19-26.jpg)
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us