/newsfirstlive-kannada/media/media_files/2025/11/03/punjab-cm-shoe-duty-2025-11-03-17-21-56.jpg)
ಸಿಎಂ ಭಗವಂತ್ ಮಾನ್ ಶೂ ಕಾಯಲು ಪೊಲೀಸರ ನಿಯೋಜನೆ
ಪಂಜಾಬ್ ಸಿಎಂ ಭಗವಂತ್ ಮಾನ್ ಅವರ ಶೂ ಕಾಯೋದಕ್ಕೆ ಇಬ್ಬರು ಪೋಲಿಸರ ನಿಯೋಜನೆ ಮಾಡಲಾಗಿದೆ.
ಸದ್ಯ ಸಿಎಂ ಭಗವಂತ್ ಮಾನ್ ನಡೆಯು ಭಾರಿ ಚರ್ಚೆಗೆ ಗ್ರಾಸವಾಗಿದೆ. ಮುಕ್ತಸರ್ ಸಾಹಿಬ್ ನಲ್ಲಿರುವ ಐತಿಹಾಸಿಕ ದರ್ಬಾರ್ ಸಾಹಿಬ್ ಗೆ ಭಗವಂತ್ ಮಾನ್ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಭಗವಂತ್ ಮಾನ್ ಶೂ ಕಾಯೋದಕ್ಕೆ ಇಬ್ಬರು ಪೊಲೀಸರ ನೇಮಕ ಮಾಡಲಾಗಿತ್ತು. ಗೇಟ್ ನಂಬರ್ 7 ರಲ್ಲಿ ಭಗವಂತ್ ಮಾನ್ ಶೂ ಬಿಟ್ಟು ಗುರುದ್ವಾರಕ್ಕೆ ಎಂಟ್ರಿ ಕೊಟ್ಟಿದ್ರು. ಈ ಸಂದರ್ಭದಲ್ಲಿ ಹೆಡ್ ಕಾನ್ಸಟೇಬಲ್ ರೂಪ್ ಸಿಂಗ್ ಮತ್ತು ಕಾನ್ಸ್ೆಟೇಬಲ್ ಸರ್ಬತ್ ಸಿಂಗ್ ಅವರನ್ನು ಪೋಲಿಸ್ ಸಮವಸ್ತ್ರದ ಬದಲಾಗಿ ಸಾಮಾನ್ಯ ಉಡುಪಿನಲ್ಲಿ ಶೂಕಾಯಲು ನಿಯೋಜನೆ ಮಾಡಲಾಗಿತ್ತು. ಈ ಬಗ್ಗೆ ಅಧಿಕೃತವಾಗಿ ಹಿರಿಯ ಪೋಲಿಸ್ ಅಧಿಕಾರಿಯಿಂದ ಆದೇಶ ಮಾಡಲಾಗಿದೆ. ಸದ್ಯ ಈ ವಿಚಾರಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ. ಆಮ್ ಆದ್ಮಿ ಸಿಎಂ ಭವಗಂತ್ ಮಾನ್ ರ ದೌಲತ್ತಿನ ನಡುವಳಿಕೆ ಎಂದು ಟೀಕೆ ಮಾಡಿದ್ದಾರೆ. ಸುಮಾರು 3 ಲಕ್ಷ ಬೆಲೆಬಾಳುವ ಶೂ ಅನ್ನೋ ಕಾರಣಕ್ಕೆ ಪೊಲೀಸ್ ಭದ್ರತೆ ನೀಡಲಾಗಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us