/newsfirstlive-kannada/media/media_files/2025/11/25/ayodhya-2025-11-25-12-35-43.jpg)
/newsfirstlive-kannada/media/media_files/2025/11/25/ayodhya-flag-2-2025-11-25-12-38-17.jpg)
ಧ್ವಜಾರೋಹಣ ಪೂಜಾ ಕೈಂಕರ್ಯ
ಅಯೋಧ್ಯೆಯಲ್ಲಿ ರಾಮಮಂದಿರ ಕಾಮಗಾರಿ ಸಂಪೂರ್ಣಗೊಂಡ ಹಿನ್ನೆಲೆ ಧರ್ಮ ಧ್ವಜಾರೋಹಣ ಕಾರ್ಯ ನೆರವೇರಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಅಭಿಜಿತ್ ಶುಭ ಲಗ್ನದಲ್ಲಿ ಕಾಶಿ ಅರ್ಚಕ ಗಣೇಶ್ವರ್ ಶಾಸ್ತ್ರಿ ನೇತೃತ್ವದಲ್ಲಿ ಧರ್ಮ ಧ್ವಜಾರೋಹಣ ಪೂಜಾ ಕೈಂಕರ್ಯ ನೆರವೇರಿದೆ.
/newsfirstlive-kannada/media/media_files/2025/11/25/ayodhya-flag-3-2025-11-25-12-38-49.jpg)
11 ಅಡಿ ಎತ್ತರದ ಧರ್ಮಧ್ವಜ
11 ಅಡಿ ಎತ್ತರದ ಧರ್ಮಧ್ವಜವನ್ನ ರಾಮಮಂದಿರದ ಗೋಪುರದ ಮೇಲೆ ಸ್ಥಾಪನೆ ಮಾಡಲಾಗಿದೆ.. ಶ್ರೀರಾಮರು ಸೀತಾಮಾತೆಯನ್ನ ವರಿಸಿದ ಮುಹೂರ್ತದಲ್ಲೇ ಧರ್ಮ ಧ್ವಜಾರೋಹಣ ಕಾರ್ಯ ನಡೆದಿದೆ.
/newsfirstlive-kannada/media/media_files/2025/11/25/ayodhya-flag-2025-11-25-12-39-15.jpg)
ಧ್ವಜದ ವಿಶೇಷತೆ
ರಾಮ ಮಂದಿರದಲ್ಲಿ ಹಾರಿಸಲಾಗುವ ಧ್ವಜವು ಕೇಸರಿ ಬಣ್ಣದ್ದಾಗಿರುತ್ತದೆ. ಧ್ವಜವು 22 ಅಡಿ ಉದ್ದ ಮತ್ತು 11 ಅಡಿ ಅಗಲವಿರುತ್ತದೆ. ಧ್ವಜಸ್ತಂಭವು 42 ಅಡಿ ಎತ್ತರವಿರುತ್ತದೆ. ಇದನ್ನು 161 ಅಡಿ ಎತ್ತರದಲ್ಲಿ ಹಾರಿಸಲಾಗುವುದು. ಧ್ವಜದ ಮೇಲೆ ಮೂರು ಚಿಹ್ನೆಗಳನ್ನು ಗುರುತಿಸಲಾಗಿದೆ: ಸೂರ್ಯ, ಓಂ ಮತ್ತು ಕೋವಿದಾರ್ ಮರ. ಈ ಧ್ವಜವು ಸೂರ್ಯ ದೇವರನ್ನು ಸಂಕೇತಿಸುತ್ತದೆ ಎಂದು ನಂಬಲಾಗಿದೆ.
/newsfirstlive-kannada/media/media_files/2025/11/25/ayodhya-flag-1-2025-11-25-12-39-38.jpg)
ತ್ಯಾಗ, ಶೌರ್ಯ, ಭಕ್ತಿಯ ಸಂಕೇತ
ಸನಾತನ ಸಂಪ್ರದಾಯದಲ್ಲಿ ಕೇಸರಿಯನ್ನು ತ್ಯಾಗ, ಶೌರ್ಯ ಮತ್ತು ಭಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ರಘುವಂಶ ರಾಜವಂಶದ ಆಳ್ವಿಕೆಯಲ್ಲಿಯೂ ಈ ಬಣ್ಣವು ವಿಶೇಷ ಸ್ಥಾನ ಪಡೆದುಕೊಂಡಿತ್ತು. ಕೇಸರಿ ಜ್ಞಾನ, ಶೌರ್ಯ, ಸಮರ್ಪಣೆ ಮತ್ತು ಸತ್ಯದ ವಿಜಯವನ್ನು ಪ್ರತಿನಿಧಿಸುವ ಬಣ್ಣವಾಗಿದೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us