/newsfirstlive-kannada/media/media_files/2025/12/16/mnrega-name-changed-2025-12-16-13-42-05.jpg)
ಮನರೇಗಾ ಯೋಜನೆ ಹೆಸರು ಬದಲಾವಣೆ ಮಾಡಿದ ಕೇಂದ್ರ ಸರ್ಕಾರ
ಗ್ರಾಮೀಣ ಉದ್ಯೋಗ ಖಾತರಿ ಯೋಜನೆ MGNREGA ಬದಲಿಗೆ ಕೇಂದ್ರದ ಹೊಸ ಮಸೂದೆ ಮಂಗಳವಾರ ಲೋಕಸಭೆಯಲ್ಲಿ ಕೋಲಾಹಲದ ಕೇಂದ್ರಬಿಂದುವಾಗಿತ್ತು. ವಿರೋಧ ಪಕ್ಷವು ಸರ್ಕಾರವನ್ನು ಮನರೇಗಾ ಯೋಜನೆಯನ್ನು "ದುರ್ಬಲಗೊಳಿಸುತ್ತಿದೆ" ಎಂದು ಟೀಕಿಸಿತು, ಇದು ಕೇಂದ್ರದಿಂದ ಬಲವಾದ ಪ್ರತಿಕ್ರಿಯೆಗೆ ಕಾರಣವಾಯಿತು.
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಹೊಸ ಮಸೂದೆಯನ್ನು ಕೇಂದ್ರದ ನಿಯಂತ್ರಣವನ್ನು ವಿಸ್ತರಿಸುವ ಮತ್ತು ರಾಜ್ಯಗಳಿಗೆ ಆರ್ಥಿಕ ಹೊರೆಯನ್ನು ವರ್ಗಾಯಿಸುವ ಪ್ರಯತ್ನ ಎಂದು ಕರೆದರು. ಯೋಜನೆಗಳನ್ನು ಮರುನಾಮಕರಣ ಮಾಡುವ "ಗೀಳು" ಗಾಗಿ ಸರ್ಕಾರವನ್ನು ಟೀಕಿಸಿದ ಅವರು, VB-G RAM G ಮಸೂದೆಯು ಅಧಿಕಾರವನ್ನು ಕೇಂದ್ರೀಕರಿಸುತ್ತದೆ . MGNREGA ಅಡಿಯಲ್ಲಿ ಹಿಂದೆ ಖಾತರಿಪಡಿಸಿದ ಹಕ್ಕುಗಳನ್ನು ದುರ್ಬಲಗೊಳಿಸುತ್ತದೆ ಎಂದು ಹೇಳಿದರು, ಇದು ಪ್ರತಿ ವರ್ಷ ಗ್ರಾಮೀಣ ಕುಟುಂಬಗಳಿಗೆ 125 ದಿನಗಳ ವೇತನ ಉದ್ಯೋಗದ ಕಾನೂನು ಖಾತರಿಯನ್ನು ಒದಗಿಸುತ್ತದೆ. ಆದರೇ,. ಈಗ ಯೋಜನೆಯ ವೆಚ್ಚದ ಶೇ.40 ರಷ್ಟು ಹಣವನ್ನು ರಾಜ್ಯ ಸರ್ಕಾರಗಳು ಒದಗಿಸಬೇಕಾಗಿದೆ. ಹೀಗಾಗಿ ಇದು ಆರ್ಥಿಕ ಹೊರೆಯನ್ನ ರಾಜ್ಯಗಳಿಗೆ ವರ್ಗಾಯಿಸುವ ಪ್ರಯತ್ನ ಎಂದು ಕಾಂಗ್ರೆಸ್ ಲೋಕಸಭಾ ಸದಸ್ಯೆ ಪ್ರಿಯಾಂಕಾ ಗಾಂಧಿ ಟೀಕಿಸಿದ್ದಾರೆ.
ಇನ್ನೂ ಯೋಜನೆಯ ಹೆಸರು ಅನ್ನು ಮಹಾತ್ಮಗಾಂಧಿ ಗ್ರಾಮೀಣಾ ಉದ್ಯೋಗ ಖಾತರಿ ಯೋಜನೆ ಎಂದು ಇದ್ದಿದ್ದನ್ನು ವಿಕಸಿತ ಭಾರತ್ ಗ್ಯಾರಂಟಿ ಫಾರ್ ರೋಜಗಾರ್ ಅಂಡ್ ಅಜೀವಿಕಾ ಮಿಷನ್ ಗ್ರಾಮೀಣ್ ಎಂದು ಬದಲಾಯಿಸಿದೆ( ವಿಬಿ-ರಾಮ್ ಜಿ ) . ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 60: 40 ಅನುಪಾತದಲ್ಲಿ ಕೂಲಿ ಹಣವನ್ನು ಜನರಿಗೆ ನೀಡಬೇಕು.
/filters:format(webp)/newsfirstlive-kannada/media/media_files/2025/12/16/mnrega-name-changed-priyanka-gandhi-2025-12-16-13-43-54.jpg)
ನರೇಗಾ ಯೋಜನೆಯ ಹೆಸರಿನಲ್ಲಿದ್ದ ಮಹಾತ್ಮಗಾಂಧಿ ಹೆಸರು ಅನ್ನು ತೆಗೆದು ವಿಬಿ ರಾಮ್ ಜಿ ಮಸೂದೆಯನ್ನು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿದೆ. ಇದು ಈಗ ವಿವಾದಕ್ಕೆ ಕಾರಣವಾಗಿದೆ. ಕೇಂದ್ರದ ಎನ್‌ಡಿಎ ಸರ್ಕಾರಕ್ಕೆ ಮಹಾತ್ಮ ಗಾಂಧಿ ಬೇಡವಾದರೇ, ಮಹಾತ್ಮ ಗಾಂಧಿ ಹೆಸರು ಇನ್ನು ಏಕೆ ತೆಗೆಯಬೇಕಾಗಿತ್ತು ಎಂಬ ಪ್ರಶ್ನೆ ಎದ್ದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us