ಪ್ರಿಯಾಂಕಾ ಗಾಂಧಿ ಪುತ್ರನ ಮದುವೆ ಎಂಗೇಜ್ ಮೆಂಟ್‌ : ಗೆಳತಿ ಅವೈವಾ ಬೇಗ್ ಜೊತೆ ರೈಹಾನ್ ವಾದ್ರಾಗೆ ಮದುವೆ

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಪುತ್ರ ರೈಹಾನ್ ವಾದ್ರಾ ಮದುವೆ ಎಂಗೇಜ್ ಮೆಂಟ್ ನಡೆದಿದೆ. ದೆಹಲಿಯ ಅವೈವಾ ಬೈಗ್ ಜೊತೆ ರೈಹಾನ್ ವಾದ್ರಾ ಮದುವೆಯಾಗಲು ಸಜ್ಜಾಗಿದ್ದಾರೆ. ನಿನ್ನೆ ದೆಹಲಿಯಲ್ಲಿ ರೈಹಾನ್ ವಾದ್ರಾ ಹಾಗೂ ಅವೈವಾ ಬೇಗ್ ಎಂಗೇಜ್ ಮೆಂಟ್ ನಡೆದಿದೆ. ಯಾರು ಈ ಅವೈವಾ ಬೇಗ್?

author-image
Chandramohan
raihan vadra get engaged in delhi

ರೈಹಾನ್ ವಾದ್ರಾ ಮತ್ತು ಅವೈವಾ ಬೇಗ್ ಮದುವೆ ಎಂಗೇಜ್ ಮೆಂಟ್‌

Advertisment
  • ರೈಹಾನ್ ವಾದ್ರಾ ಮತ್ತು ಅವೈವಾ ಬೇಗ್ ಮದುವೆ ಎಂಗೇಜ್ ಮೆಂಟ್‌
  • 25 ರ ಹರೆಯದ ರೈಹಾನ್ ವಾದ್ರಾ ಮದುವೆಗೆ ಸಜ್ಜು
  • ಬಹುಕಾಲದ ಗೆಳತಿ ಅವೈವಾ ಬೇಗ್ ಜೊತೆ ರೈಹಾನ್ ವಾದ್ರಾಗೆ ಮದುವೆ

ಕಾಂಗ್ರೆಸ್‌ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಪುತ್ರ ರೈಹಾನ್‌ ವಾದ್ರಾಗೆ ಮದುವೆ ನಿಶ್ಚಯವಾಗಿದೆ.  25ರ ಹರೆಯದ ರೈಹಾನ್‌ ವಾದ್ರಾ, ತನ್ನ 7 ವರ್ಷಗಳ ಗೆಳತಿ ಅವೈವಾ ಬೇಗ್‌ ಜೊತೆ ಮದುವೆಯಾಗುತ್ತಿದ್ದು, ನಿನ್ನೆ ಕುಟುಂಬಸ್ಥರು ಪರಸ್ಪರ ಈ ಸಂಬಂಧ ಮಾತುಕತೆ ನಡೆಸಿ ಮದುವೆ ನಿಶ್ಚಯ ಮಾಡಿದ್ದಾರೆ. ಇದೇ ವೇಳೆ ಅವೈವಾ ಬೇಗ್‌, ರೈಹಾನ್‌ ಜೊತೆಗಿರುವ ಪೋಟೋವನ್ನ ತನ್ನ ಸ್ಟೇಟಸ್‌ನಲ್ಲಿ ಅಪ್‌ಲೋಡ್‌ ಮಾಡಿದ್ದಾಳೆ. ಅವೈವಾ ಬೇಗ್‌ ದೆಹಲಿ ಜರ್ನಲಿಸಂ ಮತ್ತು ಕಮ್ಯೂನಿಕೇಷನ್‌ ವಿದ್ಯಾರ್ಥಿಯಾಗಿದ್ದು ಫೋಟೋಗ್ರಫಿಯನ್ನು ವೃತ್ತಿಯಾಗಿ ಮಾಡಿಕೊಂಡಿದ್ದಾರೆ. ಕೆಲ ಮಾಧ್ಯಮ ಸಂಸ್ಥೆಗಳಲ್ಲೂ ಕೆಲಸ ಮಾಡಿರುವ ಅನುಭವವಿದೆ. ರಾಜಸ್ಥಾನದಲ್ಲಿ ನಾಳೆ ನಿಶ್ಚಿತಾರ್ಥ ನಡೆಯುತ್ತಿದ್ದು, ಮುಂದಿನ ಕೆಲ ತಿಂಗಳಲ್ಲೇ ಮದುವೆ ನಡೆಯಲಿದೆ. ಅವೈವಾ ಬೇಗ್‌ ಕುಟುಂಬ ದೆಹಲಿ ನಿವಾಸಿಗಳಾಗಿದ್ದು, ಈಕೆಯ ತಂದೆ ಇಮ್ರಾನ್‌ ಬೇಗ್‌ ಉದ್ಯಮಿಯಾಗಿದ್ದಾರೆ. ತಾಯಿ ನಂದಿತಾ ಬೇಗ್‌ ಇಂಟೀರಿಯರ್‌ ಡಿಸೈನರ್‌ ಆಗಿದ್ದು, ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ನಂದಿತಾ ಬಹಳ ಕಾಲದ ಗೆಳತಿಯರಾಗಿದ್ದಾರೆ. ದೆಹಲಿಯ ಕಾಂಗ್ರೆಸ್‌ ಕೇಂದ್ರ ಕಚೇರಿ ಇಂದಿರಾ ಭವನ್‌ನ ಇಂಟೀರಿಯರ್‌ ಡಿಸೈನ್‌ ಮಾಡುವುದಕ್ಕೂ ನಂದೀಗಾ ಬೇಗ್‌, ಪ್ರಿಯಾಂಕಾಗೆ ಸಹಾಯ ಮಾಡಿದ್ದಾರೆ.

raihan vadra get engaged in delhi (1)




ರೈಹಾನ್‌ ವಾದ್ರಾ ಕೂಡ ಫೋಟೋಗ್ರಫಿಯನ್ನ ವೃತ್ತಿ ಮಾಡಿಕೊಂಡಿದ್ದು ಹಲವು ಫೋಟೋಗ್ರಫಿ ಪ್ರದರ್ಶನಗಳಲ್ಲೂ ತನ್ನ ಛಾಯಾಚಿತ್ರಗಳನ್ನ ಪ್ರದರ್ಶನಕ್ಕಿಟ್ಟಿದ್ದರು. ರಾಜೀವ್‌ ಗಾಂಧಿ ಕೂಡ ಫೋಟೋಗ್ರಫಿಯಲ್ಲಿ ಪರಿಣತಿ ಹೊಂದಿದವರಾಗಿದ್ದು. ಅದರಂತೆಯೇ ರೈಹಾನ್ ಕೂಡಾ ಫೋಟೋಗ್ರಫಿಯತ್ತ ಹೆಚ್ಚು ಆಸಕ್ತರಾಗಿದ್ದಾರೆ. 

raihan vadra get engaged in delhi (2)





ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

raihan vadra wedding engagement raihan vadra
Advertisment