/newsfirstlive-kannada/media/media_files/2025/08/27/rahul-gandhi-priyanka-gandhi-2025-08-27-16-09-55.jpg)
ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ
/newsfirstlive-kannada/media/media_files/2025/08/27/rahul-gandhi-priyanka-gandhi-1-2025-08-27-16-10-16.jpg)
ಬಿಹಾರ್ ವೋಟ್ ಅಧಿಕಾರ್ ರ್ಯಾಲಿಯಲ್ಲಿ (Voter Adhikar Yatra) ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ತೇಜಸ್ವಿ ಯಾದವ್ ಬೈಕ್ಗಳಲ್ಲಿ ಕಾಣಿಸಿಕೊಂಡರು. ಈ ಬಾರಿ ಅಣ್ಣ-ತಂಗಿ ಜೋಡಿ ಡಿಫ್ರೆಂಟ್ ಆಗಿ ಕಾಣಿಸಿಕೊಂಡಿದೆ. ರಾಹುಲ್ ಗಾಂಧಿ, ತಮ್ಮ ಸಹೋದರಿ ಪ್ರಿಯಾಂಕ ಗಾಂಧಿಯನ್ನ ಬುಲೆಟ್ನಲ್ಲಿ ಕೂರಿಸಿಕೊಂಡು ಪ್ರತಿಭಟನಾ ಱಲಿ ನಡೆಸಿದ್ದಾರೆ.
/newsfirstlive-kannada/media/media_files/2025/08/27/rahul-gandhi-priyanka-gandhi-2-2025-08-27-16-10-40.jpg)
ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ಮತಗಳ್ಳತನ ಆರೋಪ ಮಾಡಿದ್ದಾರೆ. ಚುನಾವಣಾ ಆಯೋಗದ ವಿರುದ್ಧವೂ ಗಂಭೀರ ಆರೋಪ ಮಾಡಿರುವ ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆಗಳನ್ನು ಹಮ್ಮಿಕೊಳ್ತಿದೆ. ಅದರ ಮುಂದುವರಿದ ಭಾಗವಾಗಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಬಿಹಾರ ಮತದಾನ ಹಕ್ಕುಗಳ ಱಲಿಗಾಗಿ ಮುಜಫರ್ಪುರದಲ್ಲಿದ್ದಾರೆ. ಆಗಸ್ಟ್ 26 ರಂದು ಸುಪೌಲ್ನಲ್ಲಿ ನಡೆದ ಱಲಿಯಲ್ಲಿ ಭಾಗವಹಿಸಿದ್ದರು.
/newsfirstlive-kannada/media/media_files/2025/08/27/rahul-gandhi-priyanka-gandhi-4-2025-08-27-16-10-59.jpg)
ಮತದಾರರ ಪಟ್ಟಿಯಿಂದ 65 ಲಕ್ಷ ಹೆಸರುಗಳನ್ನು ತೆಗೆದುಹಾಕಿರುವ ಬಗ್ಗೆ ಉತ್ತರ ನೀಡುವಂತೆ ರಾಹುಲ್ ಗಾಂಧಿ ಚುನಾವಣಾ ಆಯೋಗಕ್ಕೆ ಆಗ್ರಹಿಸಿದ್ದಾರೆ. ಕಳೆದ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಮತಗಳನ್ನು ಹೇಗೆ ಕಳ್ಳತನ ಮಾಡಲಾಗಿದೆ ಅಂತಾ ದಾಖಲೆ ಸಹಿತ ಬಿಚ್ಚಿಡುತ್ತಿದ್ದೇವೆ ಎಂದು ಗುಡುಗಿದ್ದಾರೆ.
/newsfirstlive-kannada/media/media_files/2025/08/27/rahul-gandhi-priyanka-gandhi-5-2025-08-27-16-11-17.jpg)
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಇವತ್ತಿನಿಂದ ಈ ಱಲಿಯಲ್ಲಿ ಭಾಗಿಯಾಗಿದ್ದಾರೆ. ಕಾಂಗ್ರೆಸ್ನ ‘ಮತದಾರರ ಹಕ್ಕುಗಳ ಯಾತ್ರೆ’ಯಲ್ಲಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸಂಸದೆ ಕನಿಮೋಳಿ ಕೂಡ ಸಾಥ್ ನೀಡಿದ್ದಾರೆ.
/newsfirstlive-kannada/media/media_files/2025/08/27/rahul-gandhi-priyanka-gandhi-6-2025-08-27-16-11-30.jpg)
ಒಟ್ಟು 1,300 ಕಿ.ಮೀ ದೂರದ ಱಲಿ ಇದಾಗಿದೆ. ಆಗಸ್ಟ್ 17 ರಂದು ಸಸಾರಾಮ್ನಿಂದ ಶುರುವಾಗಿದ್ದು, ಸೆಪ್ಟೆಂಬರ್ 1 ರಂದು ಮುಕ್ತಾಯಗೊಳ್ಳಲಿದೆ. ಸೆಪ್ಟೆಂಬರ್ 1 ರಂದು ಪಾಟ್ನಾದಲ್ಲಿ ಬೃಹತ್ ಱಲಿ ನಡೆಯಲಿದೆ.