/newsfirstlive-kannada/media/media_files/2025/08/26/railway-jobs-section-controller-2025-08-26-17-53-11.jpg)
ರೈಲ್ವೇಯಿಂದ ಸೆಕ್ಷನ್ ಕಂಟ್ರೋಲರ್ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ
ಸರ್ಕಾರಿ ಉದ್ಯೋಗ ಅಂದ್ರೆ ಯಾರಿಗಿಷ್ಟ ಇಲ್ಲ ಹೇಳಿ! ಪ್ರತಿಯೊಬ್ಬರಿಗೂ ಸರ್ಕಾರಿ ಉದ್ಯೋಗ ಪಡೆಯೋ ಆಸೆ ಇದ್ದೇ ಇರುತ್ತೆ. ಅದರಲ್ಲೂ ಸೈನ್ಸ್, ಕಾಮರ್ಸ್, ಆರ್ಟ್ಸ್ ಯಾವುದೇ ವಿಷಯ ಓದಿರಲಿ. ಎಲ್ಲರಿಗೂ ಸರ್ಕಾರಿ ಕೆಲಸ ಬೇಕೇ ಬೇಕು. ಅಷ್ಟರಮಟ್ಟಿಗೆ ಜನ ಸರ್ಕಾರಿ ಕೆಲಸದ ಹಿಂದೆ ಬಿದ್ದಿದ್ದಾರೆ. ಹಗಲು ರಾತ್ರಿ ನಿದ್ದೆಗೆಟ್ಟು ಓದುತ್ತಾರೆ. ಆರೋಗ್ಯ ಕೆಟ್ರೂ ಪರ್ವಾಗಿಲ್ಲ ಸರ್ಕಾರಿ ಕೆಲಸ ಬೇಕು ಅಂತ ಪಟ್ಟು ಹಿಡಿದು ಕೂತಿರ್ತಾರೆ. ಇದಕ್ಕೆ ಮುಖ್ಯ ಕಾರಣ ಸರ್ಕಾರಿ ಉದ್ಯೋಗದಲ್ಲಿ ಸಿಗೋ ಭದ್ರತೆ.
ಮಾಸ್ಟರ್ ಡಿಗ್ರಿ ಮುಗೀತಿದ್ದಂತೆ, ಅದೆಷ್ಟೋ ವಿದ್ಯಾರ್ಥಿಗಳು KSET, NET ಎರಡು ಎಕ್ಸಾಂ ಕ್ಲಿಯರ್ ಮಾಡಿಕೊಂಡಿದ್ದಾರೆ. ವರ್ಷಗಟ್ಟಲೇ ಕಷ್ಟಪಟ್ಟು ಓದಿ ಎಕ್ಸಾಂ ಕ್ಲಿಯರ್ ಮಾಡಿದ್ದಾರೆ. ಬ್ಯಾಚುಲರ್ ಡಿಗ್ರಿ ಮಾಡಿದವರು ಬೋಧಕೇತರ ಹುದ್ದೆಗಳ ಭರ್ತಿಗೆ ಕಾಯುತ್ತಿದ್ದಾರೆ. BA, BE, BSc, MA, MBA, BS, MS, MSW ಸೇರಿದಂತೆ PhD ವಿದ್ಯಾರ್ಥಿಗಳು ಸರ್ಕಾರಿ ಕೆಲಸಕ್ಕಾಗಿ ತಪಸ್ಸು ಮಾಡುತ್ತಿದ್ದಾರೆ. ಸರ್ಕಾರ ಯಾವಾಗ ನೇಮಕಾತಿ ಮಾಡಲಿದೆ? ಎಂದು ಎದುರು ನೋಡುತ್ತಿದ್ದಾರೆ.
ಭಾರತೀಯರಲ್ಲಿ ಸರ್ಕಾರಿ ಕೆಲಸದ ಮೇಲೆ ವ್ಯಾಮೋಹಕ್ಕೆ ಕಾರಣವೂ ಇದೆ. ಜಾಬ್ ಸೆಕ್ಯೂರಿಟಿ ಒಂದು ದೊಡ್ಡ ಅಂಶವಾದರೆ, ಉದ್ಯೋಗದಿಂದ ಸಿಗೋ ಇತರೆ ಸೌಲಭ್ಯಗಳೂ ಜನರನ್ನ ಆಕರ್ಷಿಸುತ್ತವೆ. ಅದರಲ್ಲೂ ರೇಲ್ವೆ ಇಲಾಖೆಯಲ್ಲಿ ಕೆಲಸ ಆದ್ರೆ ಲೈಫ್ ಸೆಟಲ್ ಅನ್ನೋದು ಎಲ್ಲರ ನಂಬಿಕೆ. ಇಂಥವರಿಗೆ ಗುಡ್ನ್ಯೂಸ್ ಒಂದಿದೆ.
ಹೌದು ಸ್ವಾಮಿ, ರೈಲ್ವೆಯಲ್ಲಿ ಕೆಲಸಕ್ಕಾಗಿ ತಯಾರಿ ನಡೆಸುವವರಿಗೆ ಶುಭ ಸುದ್ದಿ ಇಲ್ಲಿದೆ. ರೈಲ್ವೆ ನೇಮಕಾತಿ ಮಂಡಳಿ 368 ಸೆಕ್ಷನ್ ಕಂಟ್ರೋಲರ್ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ. ಈ ನೇಮಕಾತಿಗೆ ಆನ್‌ಲೈನ್ ಅರ್ಜಿ ಪ್ರಕ್ರಿಯೆಯು ಸೆಪ್ಟೆಂಬರ್ 15 ರಿಂದ ಪ್ರಾರಂಭವಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ rrbcdg.gov.in ಗೆ ಭೇಟಿ ನೀಡಿ ಅಪ್ಲೈ ಮಾಡಬಹುದು.
ಇನ್ನೂ ಅರ್ಜಿ ಸಲ್ಲಿಸಲು ಅರ್ಹತೆ ಮತ್ತು ಮಾನದಂಡಗಳು ಏನು? ಅಂತಾ ನೋಡೋದಾದ್ರೆ..!
ಅಭ್ಯರ್ಥಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಇವ್ರ ಕನಿಷ್ಠ ವಯಸ್ಸು 20 ಆಗಿರಬೇಕು. ಗರಿಷ್ಠ ವಯಸ್ಸು 33 ವರ್ಷಗಳಿಗಿಂತ ಹೆಚ್ಚಿರಬಾರದು. ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ನಿಯಮಗಳ ಪ್ರಕಾರ ಗರಿಷ್ಠ ವಯಸ್ಸಿನಲ್ಲಿ ಸಡಿಲಿಕೆ ನೀಡಲಾಗುತ್ತದೆ.
ವಲಯವಾರು ನೇಮಕಾತಿ ವಿವರ ನೋಡೋದಾದ್ರೆ..!
ಒಟ್ಟು 368 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುವುದು. ಅಭ್ಯರ್ಥಿಗಳು ಮೊದಲು rrbapply.gov.inಗೆ ಭೇಟಿ ನೀಡಬೇಕು. ಖಾತೆ ರಚಿಸಿ, ಮೇಲೆ ಕ್ಲಿಕ್ ಮಾಡುವ ಮೂಲಕ ನೋಂದಾಯಿಸಿಕೊಳ್ಳಬೇಕು. ಬಳಿಕ ಲಾಗಿನ್ ಮಾಡಿ ಅಗತ್ಯ ವಿವರಗಳನ್ನು ಭರ್ತಿ ಮಾಡಬೇಕು.
ಫಾರ್ಮ್ ಭರ್ತಿ ಮಾಡುವುದರ ಜೊತೆಗೆ ನಿಗದಿತ ಶುಲ್ಕ ಕಡ್ಡಾಯವಾಗಿ ಪಾವತಿಸಬೇಕಾಗುತ್ತದೆ. ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ ವರ್ಗದ ಅಭ್ಯರ್ಥಿಗಳು 500 ರೂ. ಶುಲ್ಕ ಮತ್ತು ಎಸ್‌ಸಿ ಎಸ್‌ಟಿ ಅಭ್ಯರ್ಥಿಗಳು 250 ರೂ. ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.