/newsfirstlive-kannada/media/media_files/2025/09/19/indian-railway-2025-09-19-17-58-19.jpg)
ರೈಲ್ವೇ ಇಲಾಖೆಯಿಂದ ಟಿಕೆಟ್ ದರ ಏರಿಕೆ
ದೇಶದ ರೈಲ್ವೇ ಪ್ರಯಾಣಿಕರಿಗೆ ರೈಲ್ವೇ ಇಲಾಖೆ ಮತ್ತೊಮ್ಮೆ ಬೆಲೆ ಏರಿಕೆಯ ಶಾಕ್ ನೀಡಿದೆ. ದೇಶದಲ್ಲಿ ಕೇವಲ 6 ತಿಂಗಳ ಅಂತರದಲ್ಲೇ 2 ನೇ ಭಾರಿಗೆ ರೈಲ್ವೇ ಇಲಾಖೆ ಟಿಕೆಟ್ ದರ ಏರಿಸುವ ತೀರ್ಮಾನ ಕೈಗೊಂಡಿದೆ. ಆದರೇ, ಭಾರಿ ಪ್ರಮಾಣದಲ್ಲಿ ರೈಲ್ವೇ ಟಿಕೆಟ್ ದರ ಏರಿಸುತ್ತಿಲ್ಲ. ಪೈಸೆಗಳ ಲೆಕ್ಕದಲ್ಲಿ ಟಿಕೆಟ್ ದರ ಏರಿಸುವ ತೀರ್ಮಾನ ಕೈಗೊಂಡಿದೆ. ಕಳೆದ ಜುಲೈನಲ್ಲಿ ಪ್ರಯಾಣ ದರವನ್ನು ರೈಲ್ವೇ ಇಲಾಖೆ ಹೆಚ್ಚಿಸಿತ್ತು.
ಇದೀಗ ಮತ್ತೊಮ್ಮೆ ರೈಲ್ವೇ ಇಲಾಖೆ ರೈಲ್ವೇ ಟಿಕೆಟ್ ದರವನ್ನು ಏರಿಕೆ ಮಾಡಿದೆ. ಇದೇ ಡಿಸೆಂಬರ್ 26 ರಿಂದ ಅನ್ವಯ ಆಗುವಂತೆ ಟಿಕೆಟ್ ದರವನ್ನು ಏರಿಕೆ ಮಾಡಿದೆ. 215 ಕಿ.ಮೀ ಗಿಂತಲೂ ಹಾಗು ಹೆಚ್ಚಿನ ದೂರದ ಪ್ರಯಾಣಕ್ಕೆ ಸಾಮಾನ್ಯ ದರ್ಜೆಯ ಟಿಕೆಟ್ ದರ ಪ್ರತಿ.ಕಿ.ಮೀಗೆ 1 ಪೈಸೆ ಏರಿಕೆ ಮಾಡಲಾಗಿದೆ.
ಎಕ್ಸ್ ಪ್ರೆಸ್ ನಾನ್ ಎ.ಸಿ. ಹಾಗೂ ಎ.ಸಿ ರೈಲುಗಳ ಪ್ರಯಾಣದಲ್ಲಿ ಪ್ರತಿ ಕಿ.ಮೀ ಗೆ 2 ಪೈಸೆ ಏರಿಕೆ ಮಾಡಲಾಗಿದೆ. ನಾನ್ ಎ.ಸಿ ಬೋಗಿಯಲ್ಲಿ 500 ಕಿ.ಮೀ ದೂರದವರೆಗೆ ಪ್ರಯಾಣಿಸುವವರು ಹಾಲಿ ದರಕ್ಕಿಂದ 10 ರೂ. ಹೆಚ್ಚುವರಿ ಪಾವತಿಸಬೇಕು. ಉಪನಗರಗಳ ಪ್ರಯಾಣ, ಮಾಸಿಕ ವಾಸುಗಳ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ರೈಲ್ವೇ ಇಲಾಖೆ ಹೇಳಿದೆ. ಈ ಟಿಕೆಟ್ ದರ ಏರಿಕೆಯಿಂದ ರೈಲ್ವೇ ಇಲಾಖೆಗೆ ವರ್ಷಕ್ಕೆ 600 ಕೋಟಿ ರೂಪಾಯಿ ಹೆಚ್ಚುವರಿ ಆದಾಯ ಬರಲಿದೆ.
ರೈಲ್ವೇ ನೆಟ್ ವರ್ಕ್ ವಿಸ್ತರಣೆ, ರೈಲ್ವೇ ಅಪರೇಷನ್ ವೆಚ್ಚ ಹೆಚ್ಚಳ, ರೈಲ್ವೇ ಸುರಕ್ಷತೆ, ದಕ್ಷತೆಯ ಹೆಚ್ಚಳದ ಕಾರಣದಿಂದ ರೈಲ್ವೇ ಟಿಕೆಟ್ ದರವನ್ನು ಪೈಸೆಗಳ ಲೆಕ್ಕದಲ್ಲಿ ಏರಿಸುವ ತೀರ್ಮಾನ ಕೈಗೊಳ್ಳಲಾಗಿದೆ. ರೈಲ್ವೇ ಸುರಕ್ಷತೆ, ದಕ್ಷತೆಯ ಹೆಚ್ಚಳಕ್ಕಾಗಿ ಹೆಚ್ಚಿನ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಹೀಗಾಗಿ ರೈಲ್ವೇ ಟಿಕೆಟ್ ದರವನ್ನು ಏರಿಸಲಾಗಿದೆ ಎಂದು ರೈಲ್ವೇ ಇಲಾಖೆ ಹೇಳಿದೆ.
ರೈಲ್ವೇ ಇಲಾಖೆಯ ಅಧಿಕಾರಿ, ಸಿಬ್ಬಂದಿಯ ವೇತನವೂ 1.15 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ. ನಿವೃತ್ತ ಸಿಬ್ಬಂದಿ, ಅಧಿಕಾರಿಗಳ ಪಿಂಚಣಿಗಾಗಿ 60, 000 ಕೋಟಿ ರೂಪಾಯಿ ನೀಡಬೇಕಾಗಿದೆ. ರೈಲ್ವೇ ನಿರ್ವಹಣಾ ವೆಚ್ಚವು 2024-25 ರಲ್ಲಿ 2.63 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ.
ಏರಿಕೆಯಾಗುತ್ತಿರುವ ವೆಚ್ಚ ಭರಿಸಲು ಮತ್ತು ರೈಲ್ವೇ ಸುರಕ್ಷತೆ, ದಕ್ಷತೆಗೂ ಒತ್ತು ನೀಡಬೇಕಾಗಿರುವುದರಿಂದ ರೈಲ್ವೇ ಟಿಕೆಟ್ ದರವನ್ನು ಅಲ್ಪ ಪ್ರಮಾಣದಲ್ಲಿ ಏರಿಸುವುದು ಅನಿವಾರ್ಯವಾಗಿತ್ತು. ವಿಶ್ವದ ರೈಲು ವ್ಯವಸ್ಥೆಯಲ್ಲಿ ಭಾರತವು ಎರಡನೇ ಅತಿ ದೊಡ್ಡ ಕಾರ್ಗೋ ಸಾಗಣೆಯ ರೈಲು ವ್ಯವಸ್ಥೆಯಾಗಿದೆ.
ಇತ್ತೀಚಿನ ಹಬ್ಬದ ಸೀಸನ್ ನಲ್ಲಿ ರೈಲ್ವೇ ಇಲಾಖೆ ಯಶಸ್ವಿಯಾಗಿ 12,000 ಟ್ರೇನ್ ಗಳನ್ನು ಓಡಿಸಿದೆ. ಇದು ರೈಲ್ವೇ ಇಲಾಖೆಯ ಅಪರೇಷನ್ ದಕ್ಷತೆಗೆ ಉದಾಹರಣೆಯಾಗಿದೆ. ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸುತ್ತಾ, ರೈಲ್ವೇ ದಕ್ಷತೆಯನ್ನು ಕಾಪಾಡಿಕೊಳ್ಳಲು ಈಗ ಅಲ್ಪ ಪ್ರಮಾಣದಲ್ಲಿ ಟಿಕೆಟ್ ದರ ಏರಿಕೆಗೆ ರೈಲ್ವೇ ಇಲಾಖೆ ತೀರ್ಮಾನ ಕೈಗೊಂಡಿದೆ.
/filters:format(webp)/newsfirstlive-kannada/media/post_attachments/wp-content/uploads/2025/03/unique-railway-station.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us