/newsfirstlive-kannada/media/media_files/2025/12/02/loka-bhavan-2025-12-02-18-41-43.jpg)
ರಾಜ ಭವನ ಹೆಸರು ಲೋಕ ಭವನ ಎಂದು ಮರು ನಾಮಕರಣ!
ದೇಶದಲ್ಲಿರುವ ರಾಜ್ಯಪಾಲರ ನಿವಾಸಗಳಾದ ರಾಜ ಭವನಗಳ ಹೆಸರು ಅನ್ನು ಬದಲಾಯಿಸಿ, ಲೋಕ ಭವನ್ ಎಂದು ಹೊಸ ನಾಮಕರಣ ಮಾಡಲು ಕೇಂದ್ರ ಸರ್ಕಾರ ನಿರ್ದೇಶ ನೀಡಿದೆ. ಕೇಂದ್ರ ಸರ್ಕಾರದ ನಿರ್ದೇಶನದ ಬೆನ್ನಲ್ಲೇ, ಲೋಕ ಭವನ ಎಂದು ಕೆಲವು ರಾಜ್ಯಗಳ ರಾಜ ಭವನ್ ಗಳಿಗೆ ಹೊಸ ನಾಮಕರಣ ಮಾಡಲಾಗಿದೆ. ತೆಲಂಗಾಣ, ತಮಿಳುನಾಡು, ರಾಜಸ್ಥಾನ, ಪಶ್ಚಿಮ ಬಂಗಾಳ, ಉತ್ತರಾಖಂಡ್, ತ್ರಿಪುರ, ಕೇರಳ ರಾಜ ಭವನದ ಹೆಸರು ಅನ್ನು ಲೋಕಭವನ ಎಂದು ನಾಮಕರಣ ಮಾಡಲಾಗಿದೆ.
ಹೀಗೆ ಕೆಲ ರಾಜ್ಯಗಳ ರಾಜಭವನ ಹೆಸರುಗಳನ್ನು ನಿನ್ನೆ ಮತ್ತು ಇಂದು ಬದಲಾಯಿಸಲಾಗಿದೆ. ಬ್ರಿಟಿಷ್ ಕಾಲದ ರಾಜ ಭವನದ ಹೆಸರು ಅನ್ನು ಬದಲಾಯಿಸಿ, ಲೋಕ ಭವನ್ ಎಂದು ನಾಮಕರಣ ಮಾಡಲಾಗುತ್ತಿದೆ.
/filters:format(webp)/newsfirstlive-kannada/media/media_files/2025/12/02/loka-bhavan-02-2025-12-02-18-43-30.jpg)
ಇನ್ನೂ ದೆಹಲಿಯ ಪಾರ್ಲಿಮೆಂಟ್ ಸಮೀಪದಲ್ಲೇ ಇರುವ ಸೆಂಟ್ರಲ್ ಸೆಕ್ರೇಟೇರಿಯೇಟ್ ಬಿಲ್ಡಿಂಗ್ ಹೆಸರು ಅನ್ನು ಬದಲಾಯಿಸಿ, ಕರ್ತವ್ಯ ಭವನ್ ಎಂದು ಹೊಸ ನಾಮಕರಣ ಮಾಡಲು ಕೂಡ ಕೇಂದ್ರ ಸರ್ಕಾರ ಆದೇಶಿಸಿದೆ. ದೆಹಲಿಯ ರಾಜೇಂದ್ರ ಪ್ರಸಾದ್ ರಸ್ತೆಯಲ್ಲಿ ಸೆಂಟ್ರಲ್ ಸೆಕ್ರೇಟೇರಿಯೇಟ್ ಬಿಲ್ಡಿಂಗ್ ಇದೆ. ಈ ಬಿಲ್ಡಿಂಗ್ ನಲ್ಲಿ ವಿವಿಧ ಕೇಂದ್ರ ಸಚಿವರ ಕಚೇರಿಗಳಿವೆ. ಕೇಂದ್ರದ ಇಂಧನ, ಶಿಕ್ಷಣ, ಸ್ಟೀಲ್, ಕೃಷಿ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವರು ಸೇರಿದಂತೆ ವಿವಿಧ ಕ್ಯಾಬಿನೆಟ್ ಸಚಿವರುಗಳ ಕಚೇರಿಗಳಿವೆ. ಇಂಥ ಬಿಲ್ಡಿಂಗ್ ಹೆಸರು ಅನ್ನು ಕರ್ತವ್ಯ ಭವನ್ ಎಂದು ಹೊಸದಾಗಿ ನಾಮಕರಣ ಮಾಡಲಾಗುತ್ತಿದೆ.
ಇನ್ನೂ ದೆಹಲಿಯ ಪಾರ್ಲಿಮೆಂಟ್ ಪಕ್ಕದಲ್ಲೇ ಹೊಸದಾಗಿ ಪ್ರಧಾನಿ ಕಚೇರಿ ಕಾಂಪ್ಲೆಕ್ಸ್ ನಿರ್ಮಾಣ ಮಾಡಲಾಗುತ್ತಿದೆ. ಪ್ರಧಾನಿ ಕಚೇರಿಯ ಕಾಂಪ್ಲೆಕ್ಸ್ ಗೆ ಸೇವಾ ತೀರ್ಥ ಎಂದು ಹೆಸರಿಡಲು ಕೇಂದ್ರ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ.
ಈ ಹಿಂದೆ ದೆಹಲಿಯ ರಾಷ್ಟ್ರಪತಿ ಭವನದ ಎದುರಿನ ರಾಜಪಥ ರಸ್ತೆಯ ಹೆಸರು ಅನ್ನು ಕರ್ತವ್ಯ ಪಥ ಎಂದು ಕೇಂದ್ರ ಸರ್ಕಾರ ಬದಲಾಯಿಸಿತ್ತು.
ಈ ಹಿಂದೆ ದೆಹಲಿಯ ರೇಸ್ ಕೋರ್ಸ್ ರಸ್ತೆಯನ್ನು ಲೋಕ ಕಲ್ಯಾಣ್ ಮಾರ್ಗ್ ಎಂದು ಬದಲಾವಣೆ ಮಾಡಲಾಗಿತ್ತು. ದೆಹಲಿಯಲ್ಲಿ ಪ್ರಧಾನಿ ನಿವಾಸದ ರಸ್ತೆಯಾದ ರೇಸ್ ಕೋರ್ಸ್ ರಸ್ತೆಯನ್ನು ಲೋಕ ಕಲ್ಯಾಣ್ ಮಾರ್ಗ್ ಎಂದು ಬದಲಾವಣೆ ಮಾಡಲಾಗಿತ್ತು. ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಎನ್‌ಎಂಡಿಸಿ ( ನ್ಯೂ ಡೆಲ್ಲಿ ಮುನ್ಸಿಪಲ್ ಕಾರ್ಪೋರೇಷನ್) ಯಿಂದ ರಸ್ತೆಯ ಹೆಸರು ಬದಲಾವಣೆಯನ್ನು 2016 ರಲ್ಲೇ ಮಾಡಲಾಗಿತ್ತು. ಈಗ ರಾಜ ಭವನ್ ಗಳ ಹೆಸರು ಅನ್ನು ಲೋಕ ಭವನ ಎಂದು ನಾಮಕರಣ ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us