/newsfirstlive-kannada/media/media_files/2025/10/01/rbi-repo-rate-unchaged-2025-10-01-20-44-47.jpg)
ಆರ್‌ಬಿಐ ನಿಂದ ದ್ವೈಮಾಸಿಕ ಹಣಕಾಸು ನೀತಿ ಸಮಿತಿಯ ಸಭೆ
ರಿಸರ್ವ್ ಬ್ಯಾಂಕ್ ಇಂಡಿಯಾ ಇಂದು ತನ್ನ ದ್ವೈಮಾಸಿಕ ಹಣಕಾಸು ನೀತಿ ಸಮಿತಿಯ ಸಭೆಯ ತೀರ್ಮಾನಗಳನ್ನು ಪ್ರಕಟಿಸಿದೆ. ಆದರೇ, ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ರೆಪೋ ದರದಲ್ಲಿ ಯಥಾಸ್ಥಿತಿ ಕಾಪಾಡಿಕೊಂಡಿದೆ. ಸಂಜಯ ಮಲ್ಹೋತ್ರಾ ಆರ್‌ಬಿಐ ಗರ್ವನರ್ ಆದ ಬಳಿಕ ರೆಪೋ ದರ ಇಳಿಕೆಯನ್ನು ಮಾಡಿದ್ದರು. ಆದರೇ, ಇದೇ ಮೊದಲ ಭಾರಿಗೆ ರೆಪೋ ದರವನ್ನು ಸಂಜಯ್ ಮಲ್ಹೋತ್ರಾ ಅವರು ಇಳಿಕೆ ಮಾಡಿಲ್ಲ. ರೆಪೋ ದರವನ್ನು ಶೇ.5.5 ರಲ್ಲೇ ಮುಂದುವರಿಸಲಾಗಿದೆ.
ರೆಪೋ ದರ ಅಂದರೇ, ರಿಸರ್ವ್ ಬ್ಯಾಂಕ್ , ದೇಶದ ವಾಣಿಜ್ಯ ಬ್ಯಾಂಕ್ ಗಳಿಗೆ ನೀಡುವ ಸಾಲದ ಮೇಲೆ ವಿಧಿಸುವ ಬಡ್ಡಿ ದರ. ಹೀಗಾಗಿ ವಾಣಿಜ್ಯ ಬ್ಯಾಂಕ್ ಗಳಿಗೆ ಸಿಗುವ ಸಾಲದ ಬಡ್ಡಿದರ ಕಡಿಮೆಯಾದರೇ, ವಾಣಿಜ್ಯ ಬ್ಯಾಂಕ್ ಗಳಿಗೆ ಜನಸಾಮಾನ್ಯರಿಗೆ, ಗ್ರಾಹಕರಿಗೆ ನೀಡುವ ಸಾಲದ ಬಡ್ಡಿದರವನ್ನು ಕಡಿಮೆ ಮಾಡುತ್ತಾವೆ. ಹಾಗಾಗಿ ರೆಪೋ ದರ ಇಳಿಸಿದ ಬಳಿಕ ಅದರ ಲಾಭವನ್ನ ವಾಣಿಜ್ಯ ಬ್ಯಾಂಕ್ ಗಳು ಗ್ರಾಹಕರಿಗೆ ವರ್ಗಾಯಿಸುವ ಉದ್ದೇಶದಿಂದ ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲದ ಬಡ್ಡಿದರವನ್ನು ಇಳಿಕೆ ಮಾಡಬೇಕು. ಆದರೇ, ಕೆಲವೊಮ್ಮೆ ತಕ್ಷಣವೇ ಬ್ಯಾಂಕ್ ಗಳು ಗೃಹ ಸಾಲದ ಬಡ್ಡಿ ದರ ಇಳಿಕೆ ಮಾಡಲ್ಲ. ಹೀಗಾಗಿ ಇಂಥ ಬ್ಯಾಂಕ್ ಗಳ ಮೇಲೆ ರಿಸರ್ವ್ ಬ್ಯಾಂಕ್ ಕಣ್ಣಿಟ್ಟಿರುತ್ತೆ. ರೆಪೋ ದರ ಇಳಿಕೆಯ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವಂತೆ ರಿಸರ್ವ್ ಬ್ಯಾಂಕ್ , ವಾಣಿಜ್ಯ ಬ್ಯಾಂಕ್ ಗಳಿಗೆ ಸೂಚಿಸುತ್ತೆ.
ಇನ್ನೂ ದೇಶದ ಜಿಡಿಪಿಯು 2025-26ರ ಹಣಕಾಸು ವರ್ಷದಲ್ಲಿ ಶೇ.6.8 ರಷ್ಟು ಬೆಳವಣಿಗೆ ಆಗಬಹುದು ಎಂದು ಆರ್‌ಬಿಐ ಅಂದಾಜು ಮಾಡಿದೆ. ಈ ಮೊದಲು ಶೇ.6.5 ರಷ್ಟು ಬೆಳವಣಿಗೆ ಆಗಬಹುದು ಎಂದು ಅಂದಾಜಿಸಿತ್ತು. ಇನ್ನೂ 2025-26 ರಲ್ಲಿ ದೇಶದಲ್ಲಿ ಹಣದುಬ್ಬರವು ಶೇ.2.6 ಕ್ಕೆ ಇಳಿಯಬಹುದು ಎಂದು ಆರ್‌ಬಿಐ ಅಂದಾಜಿಸಿದೆ.
ದೇಶದಲ್ಲಿ ಜಿಎಸ್‌ಟಿ ಸುಧಾರಣೆಯ ಕಾರಣದಿಂದಾಗಿ ಹಣದುಬ್ಬರ ಹಾಗೂ ಆರ್ಥಿಕ ಬೆಳವಣಿಗೆ ಎರಡೂ ಕೂಡ ಉತ್ತಮವಾಗಿರಲಿವೆ ಎಂದಿದೆ. ಸೇವೆಯ ರಫ್ತು ಮತ್ತು ವಿದೇಶಿ ರಿಮಿಟೆನ್ಸ್ ಕಾರಣದಿಂದ ಚಾಲ್ತಿ ಖಾತೆಯ ಕೊರತೆಯು ಸ್ಥಿರವಾಗಿರಲಿದೆ ಎಂದು ಆರ್‌ಬಿಐ ಹೇಳಿದೆ. ಇನ್ನೂ ದೇಶದಲ್ಲಿ ಈಗ 700.2 ಬಿಲಿಯನ್ ಡಾಲರ್ ವಿದೇಶಿ ವಿನಿಮಯ ಮೀಸಲು ಹಣ ಇದ್ದು, 11 ತಿಂಗಳಿಗೆ ಆಗುವ ರಫ್ತು ಅನ್ನು ಮಾಡಿಕೊಳ್ಳುವ ಶಕ್ತಿ ಸಾಮರ್ಥ್ಯ ಇದೆ. ಡಾಲರ್ ಎದುರು ರೂಪಾಯಿ ಮೌಲ್ಯವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾನಿಟರ್ ಮಾಡುತ್ತಿದ್ದು, ಅಗತ್ಯ ಬಿದ್ದಾಗ ಮಧ್ಯಪ್ರವೇಶ ಮಾಡಲಿದೆ. ದೇಶದಲ್ಲಿ ಸಾಲ ನೀಡಿಕೆಯು ಆರ್ಥಿಕ ಚಟುವಟಿಕೆಯ ಬೆಳವಣಿಗೆಗೆ ಬೆಂಬಲವಾಗಿ ಇದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.