/newsfirstlive-kannada/media/media_files/2025/11/06/unclaimed-amount-return-campaign-by-rbi-2025-11-06-16-17-58.jpg)
ಆನ್ ಕ್ಲೇಮ್ ಹಣವನ್ನು ಕ್ಲೇಮ್ ಮಾಡಲು ಆರ್‌ಬಿಐ ನಿಂದ ಅಭಿಯಾನ
ನಮ್ಮ ದೇಶದಲ್ಲಿ ಸಾವಿರಾರು ಕೋಟಿ ರೂಪಾಯಿ ಹಣ ವಾರಸುದಾರರಿಲ್ಲದೇ ಅನಾಥವಾಗಿ ಬ್ಯಾಂಕ್ ಗಳಲ್ಲಿ ಬಿದ್ದಿದೆ. ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಖಾತೆದಾರರು ವಾಪಸ್ ಪಡೆದಿಲ್ಲ. ಅವರ ಕುಟುಂಬದವರಿಗೂ ಆ ಬ್ಯಾಂಕ್ ಖಾತೆಯ ಬಗ್ಗೆ ಸರಿಯಾದ ಮಾಹಿತಿಯೂ ಇಲ್ಲ. ಇದರಿಂದಾಗಿ ಬ್ಯಾಂಕ್ ಖಾತೆಯಲ್ಲೇ ಹಣ ಉಳಿದುಕೊಂಡು ಬಿಟ್ಟಿದೆ. ಬ್ಯಾಂಕ್ ಖಾತೆಯು 10 ವರ್ಷಕ್ಕಿಂತ ಹೆಚ್ಚಿನ ವರ್ಷಗಳಿಂದ ನಿಷ್ಕ್ರಿಯವಾಗಿದ್ದು, ಹಣವನ್ನು ಖಾತೆಯ ವಾರಸುದಾರರು ಕೂಡ ಹಿಂಪಡೆಯದಿದ್ದರೇ, ಈಗ ಆ ಹಣವನ್ನು ವಾಪಸ್ ಪಡೆಯಲು ಖಾತೆದಾರರ ಕಾನೂನು ಬದ್ದ ಉತ್ತರಾಧಿಕಾರಿಗಳಿಗೆ ಆರ್‌ಬಿಐ ಅವಕಾಶ ನೀಡಿದೆ. ಕ್ಲೇಮ್ ಮಾಡದ ಠೇವಣಿ ಹಣವನ್ನು ವಾಪಸ್ ಪಡೆಯಲು ಆರ್‌ಬಿಐ ಉದಗಮ್ ವೆಬ್ ಸೈಟ್ ಆರಂಭಿಸಿದೆ. ಈ ವೆಬ್ ಸೈಟ್ ನಲ್ಲಿ ತಮ್ಮ ನಿಷ್ಕ್ರಿಯ ಬ್ಯಾಂಕ್ ಖಾತೆಯಲ್ಲಿ ಹಣ ಇದೆಯೇ ಎಂದು ಪರಿಶೀಲಿಸಬಹುದು.
ಇನ್ನೂ ನಮ್ಮ ದೇಶದಲ್ಲಿ ಸಾರ್ವಜನಿಕರು ಬ್ಯಾಂಕ್ ಖಾತೆಯಿಂದ ವಿತ್ ಡ್ರಾ ಮಾಡದೇ ಇರೋ ಹಣದ ಮೊತ್ತವೇ ಬರೋಬ್ಬರಿ 67 ಸಾವಿರ ಕೋಟಿ ರೂಪಾಯಿ. ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳಲ್ಲೇ 58 ಸಾವಿರ ಕೋಟಿ ರೂಪಾಯಿ ಹಣ ಅನಾಥವಾಗಿ ಬಿದ್ದಿದೆ. ಇನ್ನೂ ಖಾಸಗಿ ಬ್ಯಾಂಕ್ ಗಳಲ್ಲಿ 8,673 ಕೋಟಿ ರೂಪಾಯಿ ಹಣ ಅನಾಥವಾಗಿ ಬಿದ್ದಿದೆ.
ಇನ್ನೂ ಇನ್ಸೂರೆನ್ಸ್ ಹಣ, ಬ್ಯಾಂಕ್ ಠೇವಣಿ, ಷೇರುಗಳ ಹಣ ಸೇರಿದಂತೆ ಒಟ್ಟಾರೆ 1.84 ಲಕ್ಷ ಕೋಟಿ ರೂಪಾಯಿ ಹಣವನ್ನು ಯಾರೂ ಕ್ಲೇಮ್ ಮಾಡಿಲ್ಲ.
ಎಸ್‌ಬಿಐ ಬ್ಯಾಂಕ್ ನಲ್ಲಿ 19,329 ಕೋಟಿ ರೂಪಾಯಿ ಆನ್ ಕ್ಲೇಮ್ ಹಣ ಇದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ 6,910 ಕೋಟಿ ರೂಪಾಯಿ ಹಣ ಇದೆ. ಕೆನರಾ ಬ್ಯಾಂಕ್ ನಲ್ಲಿ 6,278 ಕೋಟಿ ರೂಪಾಯಿ ಹಣ ಅನಾಥವಾಗಿ ಬಿದ್ದಿದೆ ಎಂದು ಕೇಂದ್ರದ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಈ ವರ್ಷದ ಜುಲೈನಲ್ಲಿ ಲೋಕಸಭೆಗೆ ಮಾಹಿತಿ ನೀಡಿದ್ದಾರೆ.
/filters:format(webp)/newsfirstlive-kannada/media/media_files/2025/11/06/unclaimed-amount-return-campaign-by-rbi02-2025-11-06-16-21-45.jpg)
ಒಂದು ವೇಳೆ ನಿಮ್ಮ ಕುಟುಂಬದವರು ಯಾರಾದರೂ ಮರಣ ಹೊಂದಿದ್ದು, ಅವರ ಬ್ಯಾಂಕ್ ಖಾತೆಯಲ್ಲಿ ಹಣ ಇದ್ದರೇ, ಅದನ್ನು ಈಗ ಸೂಕ್ತ ದಾಖಲೆ ನೀಡಿ ಬ್ಯಾಂಕ್ ಖಾತೆಯಿಂದ ವಿತ್ ಡ್ರಾ ಮಾಡಲು ಕೂಡ ಅವಕಾಶ ಇದೆ. ನಿಮ್ಮ ಕೆವೈಸಿ ದಾಖಲೆ ಸಲ್ಲಿಸಿ ಬ್ಯಾಂಕ್ ಖಾತೆಯಿಂದ ಹಣವನ್ನು ವಿತ್ ಡ್ರಾ ಮಾಡಬಹುದು. ದೇಶಾದ್ಯಂತ ಆರ್ ಬಿಐ ನಿಷ್ಕ್ರಿಯ ಬ್ಯಾಂಕ್ ಖಾತೆಗಳಲ್ಲಿರುವ ಹಣವನ್ನು ಅದರ ಕಾನೂನು ಬದ್ದ ಉತ್ತರಾಧಿಕಾರಿಗಳು, ವಾರಸುದಾರರಿಗೆ ನೀಡಲು ಅಭಿಯಾನವನ್ನೇ ನಡೆಸುತ್ತಿದೆ. ಸಾಮಾನ್ಯ ಗ್ರಾಹಕರು, ಜನ ಸಾಮಾನ್ಯರಿಗೂ ಮೊಬೈಲ್ ವಾಟ್ಸಾಫ್ ಮೇಸೇಜ್ ಗಳು ಆರ್‌ಬಿಐ ನಿಂದ ಬರುತ್ತಿವೆ.
ಆರ್‌ಬಿಐ ನಿಂದ ಬರುತ್ತಿರುವ ಮೇಸೇಜ್ ನಲ್ಲೇನಿದೆ ? ಅದರ ವಿವರ ಇಲ್ಲಿದೆ ಓದಿ.
ಹಳೆಯ ಬ್ಯಾಂಕ್ ಖಾತೆಗಳಲ್ಲಿ ಹಣವನ್ನು ಮರೆತಿದ್ದೀರಾ? ಅದನ್ನು ಹಿಂಪಡೆಯಲು RBI ನಿಮಗೆ ಸಹಾಯ ಮಾಡುತ್ತದೆ!
ನಿಮ್ಮ ಅಥವಾ ನಿಮ್ಮ ಕುಟುಂಬದವರ ಖಾತೆಯು 10+ ವರ್ಷಗಳಿಂದ ನಿಷ್ಕ್ರಿಯವಾಗಿದ್ದರೆ, ಆ ಹಣವು RBI ಯ ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ (DEA) ನಿಧಿಯಲ್ಲಿರಬಹುದು — ಆದರೆ ನೀವು ಈಗಲೂ ಅದನ್ನು ಕ್ಲೇಮ್ ಮಾಡಬಹುದು.
👉 ಕ್ಲೇಮ್ ಮಾಡದ ಠೇವಣಿಗಳನ್ನು ಪರಿಶೀಲಿಸಿ: https://udgam.rbi.org.in
✅ ನಿಮ್ಮ ಬ್ಯಾಂಕಿನ ಯಾವುದೇ ಶಾಖೆಗೆ ಭೇಟಿ ನೀಡಿ
✅ KYC ಸಲ್ಲಿಸಿ (ಆಧಾರ್, ಪಾಸ್‌ಪೋರ್ಟ್, ಮತದಾರರ ಗುರುತಿನ ಚೀಟಿ, ಅಥವಾ DL)
✅ ನಿಮ್ಮ ಹಣವನ್ನು ಹಿಂಪಡೆಯಿರಿ (ಬಡ್ಡಿಯೊಂದಿಗೆ, ಅನ್ವಯವಾದರೆ)
🏦 ಕ್ಲೇಮ್ ಮಾಡದ ಠೇವಣಿಗಳ ಕುರಿತು ವಿಶೇಷ ಶಿಬಿರಗಳು: ಅಕ್ಟೋಬರ್ – ಡಿಸೆಂಬರ್ 2025
🔒 RBI ಹೇಳುತ್ತದೆ – ಜಾಣರಾಗಿರಿ, ಜಾಗರೂಕರಾಗಿರಿ!
ಹೀಗೆ ಜನ ಸಾಮಾನ್ಯರ ವಾಟ್ಸಾಫ್ ಗೆ ಆರ್‌ಬಿಐ ಮೇಸೇಜ್ ಕಳಿಸುತ್ತಿದೆ . ಕ್ಲೇಮ್ ಮಾಡದ ಠೇವಣಿಗಳ ಕುರಿತು ಬ್ಯಾಂಕ್ ಗಳು ವಿಶೇಷ ಶಿಬಿರಗಳನ್ನು ಆಯೋಜಿಸಲು ಕೂಡ ಆರ್‌ಬಿಐ ನಿರ್ದೇಶನ ನೀಡಿದೆ. ಕೆಲ ಬ್ಯಾಂಕ್ ಶಾಖೆಗಳು ತಮ್ಮ ಬ್ಯಾಂಕ್ ನಲ್ಲಿ ನಿಷ್ಕ್ರಿಯವಾಗಿರುವ ಬ್ಯಾಂಕ್ ಖಾತೆಗಳ ವಾರಸುದಾರರು ಮತ್ತು ಕಾನೂನು ಬದ್ದ ಉತ್ತರಾಧಿಕಾರಿಗಳನ್ನು ಹುಡುಕಿ ಅವರ ಕುಟುಂಬದ ಹಣವನ್ನು ಅವರಿಗೆ ನೀಡುತ್ತಿವೆ.
ಬ್ಯಾಂಕ್ ನಿಂದ ಕ್ಲೇಮ್ ಮಾಡದ, ವಿತ್ ಡ್ರಾ ಮಾಡದೇ, ಬ್ಯಾಂಕ್ ಖಾತೆಯಲ್ಲಿ ಹಣ ಉಳಿದುಕೊಂಡಿದ್ದರೇ, ಅದನ್ನು ವಾಪಸ್ ಪಡೆಯಲು ಮೂರು ಹೆಜ್ಜೆ ಅನುಸರಿಸಬೇಕು.
1- ನಿಮ್ಮ ಬ್ಯಾಂಕ್ ನ ಯಾವುದೇ ಶಾಖೆಗೆ ಭೇಟಿ ನೀಡಿ. ಒಂದು ವೇಳೆ ಅದು ನಿಮ್ಮ ಹೋಮ್ ಬ್ರಾಂಚ್ ಅಲ್ಲದೇ ಇದ್ದರೂ ಭೇಟಿ ನೀಡಿ.
2- ನಿಮ್ಮ ಕೆವೈಸಿ ದಾಖಲೆಗಳನ್ನು ಸಲ್ಲಿಸಬೇಕು.
3- ಪರಿಶೀಲನೆ ಬಳಿಕ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹಣ ಇದ್ದರೇ, ಬಡ್ಡಿಯ ಸಮೇತ ವಾಪಸ್ ಪಡೆಯಬಹುದು.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us