/newsfirstlive-kannada/media/post_attachments/wp-content/uploads/2025/02/RBI.jpg)
ಆರ್‌ಬಿಐ ನಿಂದ ಇಂದು 25 ಬೇಸಿಸ್ ಪಾಯಿಂಟ್ ರೆಪೋ ದರ ಇಳಿಕೆ!
ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ರೆಪೊ ದರವನ್ನು 5.5% ರಿಂದ 5.25% ಕ್ಕೆ ಇಳಿಸಿದೆ. ಇಂದು 25 ಬೇಸಿಸ್ ಪಾಯಿಂಟ್‌ಗಳಷ್ಟು ರೆಪೋ ದರ ಇಳಿಸಿದೆ ಎಂದು ಕೇಂದ್ರ ಬ್ಯಾಂಕಿನ ಗವರ್ನರ್ ಸಂಜಯ್ ಮಲ್ಹೋತ್ರಾ ಇಂದು ಬೆಳಿಗ್ಗೆ ಘೋಷಿಸಿದರು. ಬೆಳವಣಿಗೆಯನ್ನು ಹೆಚ್ಚಿಸುವ ಕ್ರಮಗಳ ಮೇಲೆ ಆರ್‌ಬಿಐ ಗಮನ ಕೇಂದ್ರೀಕರಿಸಿದೆ. ರೂಪಾಯಿ ಕುಸಿತದ ಬಗ್ಗೆ ಕಳವಳಗಳನ್ನು ದೂರ ಮಾಡಿದರು.
ನಿನ್ನೆ ಕನಿಷ್ಠ ಮಟ್ಟಕ್ಕೆ ತಲುಪಿದ ರೂಪಾಯಿ ಮೌಲ್ಯ ತಲುಪಿದೆ. ಇದರ ವಿರುದ್ಧ ದಾಖಲೆಯ ಕಡಿಮೆ ಹಣದುಬ್ಬರ ಕೂಡ ದೇಶದಲ್ಲಿ ದಾಖಲಾಗಿದೆ. ಕೇಂದ್ರ ಬ್ಯಾಂಕಿನ ಕಾರ್ಯತಂತ್ರವನ್ನು ನಿರ್ಧರಿಸಲು ಪ್ರತಿ ಎರಡು ತಿಂಗಳಿಗೊಮ್ಮೆ ನಡೆದ RBI ನ ಹಣಕಾಸು ನೀತಿ ಸಮಿತಿಯ (MPC) ಮೂರು ದಿನಗಳ ಸಭೆಯ ನಂತರ ಸರ್ವಾನುಮತದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಮೃದುವಾಗುತ್ತಿರುವ ಹಣದುಬ್ಬರವನ್ನು ಗಮನದಲ್ಲಿಟ್ಟುಕೊಂಡು MPC ಜೂನ್‌ನಲ್ಲಿ ಪ್ರಮುಖ ಸಾಲ ದರವನ್ನು 6% ರಿಂದ 5.5% ಕ್ಕೆ ಇಳಿಸಿತ್ತು. ರೆಪೊ ದರದಲ್ಲಿನ ಕಡಿತವು ಚಿಲ್ಲರೆ ಸಾಲಗಾರರಿಗೆ ಅಗ್ಗದ ವಸತಿ ಮತ್ತು ವಾಹನ ಸಾಲಗಳಾಗಿ ಪರಿವರ್ತಿಸುವ ನಿರೀಕ್ಷೆಯಿದೆ.
2025 ರಲ್ಲೇ ಜೂನ್ ವರೆಗಿನ ದ್ವೈಮಾಸಿಕ ಸಭೆಗಳಲ್ಲಿ 100 ಬೇಸಿಸ್ ಪಾಯಿಂಟ್ ರೆಪೋ ದರವನ್ನು ಆರ್‌ಬಿಐ ಕಡಿತ ಮಾಡಿದೆ. ಆಕ್ಟೋಬರ್ ನ ದ್ವೈಮಾಸಿಕ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ರೆಪೋ ದರ ಬದಲಾವಣೆ ಮಾಡಿರಲಿಲ್ಲ. ಈಗ ಡಿಸೆಂಬರ್‌ನ ದ್ವೈಮಾಸಿಕ ಹಣಕಾಸು ಸಮಿತಿ ಸಭೆಯಲ್ಲಿ 25 ಬೇಸಿಸ್ ಪಾಯಿಂಟ್ ನಷ್ಟು ರೆಪೋ ದರವನ್ನು ಕಡಿಮೆ ಮಾಡಲಾಗಿದೆ. ಇದರಿಂದ ರೆಪೋ ದರವು ಶೇ.5.25 ಕ್ಕೆ ಇಳಿದಿದೆ. 100 ಬೇಸಿಸ್ ಪಾಯಿಂಟ್ ರೆಪೋ ದರ ಕಡಿಮೆ ಮಾಡಿದಾಗ ಬ್ಯಾಂಕ್ ಗಳು ಶೇ.1 ರಷ್ಟು ಸಾಲದ ಮೇಲಿನ ಬಡ್ಡಿದರಗಳನ್ನು ಇಳಿಕೆ ಮಾಡಬೇಕು. ಆದರೇ, ಈ ವರ್ಷದ ಆರಂಭದಿಂದಲೂ ಇಲ್ಲಿಯವರೆಗೂ 125 ಬೇಸಿಸ್ ಪಾಯಿಂಟ್ ರೆಪೋ ದರ ಕಡಿತ ಮಾಡಲಾಗಿದೆ. ಇದರಿಂದ ಶೇ.1.25 ರಷ್ಟು ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲದ ಬಡ್ಡಿದರವನ್ನು ಬ್ಯಾಂಕ್ ಗಳು ಕಡಿಮೆ ಮಾಡಬೇಕಾಗಿತ್ತು.
ಆದರೇ, ವಾಣಿಜ್ಯ ಬ್ಯಾಂಕ್ ಗಳು, ರಾಷ್ಟ್ರೀಕೃತ ಬ್ಯಾಂಕ್ ಗಳು ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲದ ಬಡ್ಡಿದರ ಇಳಿಸುವ ಗೋಜಿಗೆ ಹೋಗಿಲ್ಲ.
ರೆಪೋ ದರ ಅಂದರೇ, ರಿಸರ್ವ್ ಬ್ಯಾಂಕ್, ವಾಣಿಜ್ಯ ಬ್ಯಾಂಕ್ ಗಳಿಗೆ ನೀಡುವ ಸಾಲದ ಮೇಲೆ ವಿಧಿಸುವ ಬಡ್ಡಿ ದರ. ಈಗ ರಿಸರ್ವ್ ಬ್ಯಾಂಕ್ ನಿಂದ ವಾಣಿಜ್ಯ ಬ್ಯಾಂಕ್ ಗಳಿಗೆ ಸಿಗುವ ಸಾಲದ ಮೇಲೆ ಶೇ.5.25 ರಷ್ಟು ಮಾತ್ರ ಬಡ್ಡಿ ವಿಧಿಸಲಾಗುತ್ತೆ. ವಾಣಿಜ್ಯ ಬ್ಯಾಂಕ್ ಗಳಿಗೆ ರಿಸರ್ವ್ ಬ್ಯಾಂಕ್ ನಿಂದ ಕಡಿಮೆ ಬಡ್ಡಿಗೆ ಸಾಲ ಸಿಗುವುದರಿಂದ ವಾಣಿಜ್ಯ ಬ್ಯಾಂಕ್ ಗಳಿಗೆ ಲಾಭವಾಗುತ್ತೆ. ಈ ಲಾಭವನ್ನು ವಾಣಿಜ್ಯ ಬ್ಯಾಂಕ್ ಗಳು, ಅಂತಿಮವಾಗಿ ತಮ್ಮಿಂದ ಸಾಲ ಪಡೆಯುವ ಜನ ಸಾಮಾನ್ಯರಿಗೆ, ಗ್ರಾಹಕರಿಗೆ ವರ್ಗಾಯಿಸಬೇಕು. ಆದರೇ, ಈ ವರ್ಷ ವಾಣಿಜ್ಯ ಬ್ಯಾಂಕ್ ಗಳು ಗೃಹ ಸಾಲ, ವೈಯಕ್ತಿಕ ಸಾಲ ಹಾಗೂ ವಾಹನ ಸಾಲದ ಬಡ್ಡಿ ದರಗಳನ್ನೇ ಕಡಿಮೆ ಮಾಡಿಲ್ಲ. ಹೀಗಾಗಿ ಆರ್‌ಬಿಐ , 100 ಬೇಸಿಸ್ ಪಾಯಿಂಟ್ ಗಿಂತ ಹೆಚ್ಚಿನ ರೆಪೋ ದರ ಕಡಿಮೆ ಮಾಡಿದರೂ, ಅಂತಿಮವಾಗಿ ಜನಸಾಮಾನ್ಯರಿಗೆ, ಗ್ರಾಹಕರಿಗೆ ಅದರ ಲಾಭ ಸಿಕ್ಕಿಲ್ಲ. ಆರ್‌ಬಿಐ ರೆಪೋ ದರ ಇಳಿಕೆಯಿಂದ ವಾಣಿಜ್ಯ ಬ್ಯಾಂಕ್ ಗಳ ಲಾಭದ ಮಟ್ಟ, ಪ್ರಮಾಣ ಮಾತ್ರ ಏರಿಕೆಯಾಗಿದೆ.
ರೆಪೋ ದರ ಕಡಿತದಿಂದ ಗೃಹ ಸಾಲದ ಬಡ್ಡಿ ದರ ಕಡಿಮೆಯಾದರೇ, ಮಧ್ಯಮ ವರ್ಗದ ಜನರು ಮನೆ ಖರೀದಿಸಲು , ಮನೆ ನಿರ್ಮಿಸಲು ಗೃಹ ಸಾಲ ಪಡೆಯುತ್ತಾರೆ. ಇದರಿಂದ ಕಬ್ಬಿಣ, ಸಿಮೆಂಟ್ , ಸ್ಟೀಲ್ ಗೆ ಬೇಡಿಕೆ ಸೃಷ್ಟಿಯಾಗುತ್ತೆ. ಕಾರ್ಮಿಕರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಾವೆ. ಆರ್ಥಿಕತೆಯೂ ಬೆಳವಣಿಗೆಯಾಗುತ್ತೆ. ಈ ಕಾರಣದಿಂದಲೇ ಒಂದಕ್ಕೊಂದು ಲಿಂಕ್ ಹೊಂದಿರುವುದರಿಂದ ರೆಪೋ ದರವನ್ನು ಕಡಿಮೆ ಮಾಡಲಾಗುತ್ತೆ.
ಆದರೇ, ಗೃಹ ಸಾಲದ ಬಡ್ಡಿ ದರ ಇಳಿಕೆಯ ಮೂಲಕ ಅದರ ಲಾಭವನ್ನು ಬ್ಯಾಂಕ್ ಗಳು ತಮ್ಮ ಗ್ರಾಹಕರಿಗೆ, ಜನ ಸಾಮಾನ್ಯರಿಗೆ ವರ್ಗಾಯಿಸುವ ಕೆಲಸ ಮಾಡುತ್ತಿಲ್ಲ.
ರಿಸರ್ವ್ ಬ್ಯಾಂಕ್ ಹಾಗೂ ಕೇಂದ್ರದ ಹಣಕಾಸು ಇಲಾಖೆಯೂ ಬ್ಯಾಂಕ್ ಗಳ ಸಾಲದ ಮೇಲಿನ ಬಡ್ಡಿದರಗಳನ್ನು ನಿಗಾ ವಹಿಸುತ್ತೇವೆ ಎಂದು ಹೇಳುತ್ತೇವೆ. ರೆಪೋ ದರ ಇಳಿಕೆಯ ಲಾಭವನ್ನು ಅಂತಿಮವಾಗಿ ಗ್ರಾಹಕರಿಗೆ ವರ್ಗಾಯಿಸುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ರಿಸರ್ವ್ ಬ್ಯಾಂಕ್ ಹಾಗೂ ಕೇಂದ್ರದ ಹಣಕಾಸು ಇಲಾಖೆಯ ಮೇಲಿದೆ.
/filters:format(webp)/newsfirstlive-kannada/media/media_files/2025/10/01/rbi-repo-rate-unchaged-2025-10-01-20-44-47.jpg)
ಹಣದುಬ್ಬರ ಮತ್ತು ಬೆಳವಣಿಗೆ
RBI ಚಿಲ್ಲರೆ ಹಣದುಬ್ಬರವು ಅದರ ಹಿಂದಿನ ಮುನ್ಸೂಚನೆಗಿಂತ ಮೃದುವಾಗಿರುತ್ತದೆ ಎಂದು ನಿರೀಕ್ಷಿಸುತ್ತದೆ. ಆಧಾರವಾಗಿರುವ ಹಣದುಬ್ಬರದ ಒತ್ತಡಗಳು ಮುಖ್ಯ ಅಂದಾಜುಗಳಿಗಿಂತ ಕಡಿಮೆಯಿರುತ್ತವೆ. 2025-26ನೇ ಹಣಕಾಸು ವರ್ಷದಲ್ಲಿ ಗ್ರಾಹಕ ಬೆಲೆ ಸೂಚ್ಯಂಕ (CPI) ಹಣದುಬ್ಬರ ಅಥವಾ ಚಿಲ್ಲರೆ ಹಣದುಬ್ಬರವು 2% ರಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ.
/filters:format(webp)/newsfirstlive-kannada/media/post_attachments/wp-content/uploads/2023/12/RBI-Mumbai.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us