/newsfirstlive-kannada/media/media_files/2025/08/12/inflation-down033-2025-08-12-18-35-07.jpg)
ದೇಶದಲ್ಲಿ ಚಿಲ್ಲರೆ ಹಣದುಬ್ಬರವು ಜುಲೈ 2025 ರಲ್ಲಿ ಶೇ.155 ಕ್ಕೆ ಕುಸಿದಿದೆ. 2017ರ ಜುಲೈ ನಂತರ ಈಗ ತೀರಾ ಕೆಳಮಟ್ಟಕ್ಕೆ ಚಿಲ್ಲರೆ ಹಣದುಬ್ಬರ ಕಳೆದ ಜುಲೈ ತಿಂಗಳಲ್ಲಿ ಕುಸಿದಿದೆ. 2025ರ ಜೂನ್ ನಲ್ಲಿ ಚಿಲ್ಲರೆ ಹಣದುಬ್ಬರವು ದೇಶದಲ್ಲಿ ಶೇ.2.10 ರಷ್ಟು ದಾಖಲಾಗಿತ್ತು. ಈಗ ಜುಲೈ ತಿಂಗಳಲ್ಲಿ 55 ಬೇಸಿಸ್ ಪಾಯಿಂಟ್ ನಷ್ಟು ಹಣದುಬ್ಬರ ಕುಸಿದಿದೆ ಎಂದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ತಾತ್ಕಾಲಿಕ ಅಂಕಿಅಂಶಗಳು ಹೇಳಿವೆ.
ದೇಶದಲ್ಲಿ 2025ರ ಜುಲೈ ತಿಂಗಳಲ್ಲಿ ಆಹಾರ ಹಣದುಬ್ಬರವು -ಶೇ.1.76 ರಕ್ಕೆ ಕುಸಿದಿದೆ. 2019ರ ಜನವರಿಗಿಂತ ಈಗ ಕೆಳಮಟ್ಟಕ್ಕೆ ಆಹಾರ ಹಣದುಬ್ಬರ ಕುಸಿದಿದೆ. ಗ್ರಾಮೀಣಾ ಮತ್ತು ನಗರ ಪ್ರದೇಶಗಳಲ್ಲಿ ಆಹಾರ ಹಣದುಬ್ಬರವು ಕುಸಿದಿದೆ. ಗ್ರಾಮೀಣಾ ಪ್ರದೇಶದಲ್ಲಿ -ಶೇ.1.74 ಮತ್ತು ನಗರ ಪ್ರದೇಶದಲ್ಲಿ -ಶೇ.1.90 ಕ್ಕೆ ಆಹಾರ ಹಣದುಬ್ಬರ ಕುಸಿದಿದೆ. ದೇಶದಲ್ಲಿ ದವಸ ಧಾನ್ಯಗಳು, ತರಕಾರಿಗಳು, ಬೇಳೆಕಾಳು, ಸಾರಿಗೆ ಮತ್ತು ಕಮ್ಯೂನಿಕೇಷನ್, ಶಿಕ್ಷಣ, ಮೊಟ್ಟೆ, ಸಕ್ಕರೆ ಸೇರಿದಂತೆ ಅಗತ್ಯ ಸಾಮಗ್ರಿಗಳ ಬೆಲೆ ಕುಸಿತವಾಗಿದೆ ಎಂದು ಕೇಂದ್ರ ಸರ್ಕಾರದ ಅಂಕಿಅಂಶಗಳು ಹೇಳಿವೆ.
ಹಣದುಬ್ಬರ ಕುಸಿತದ ಬೆಳವಣಿಗೆ ಜನರಿಗೆ ಅಚ್ಚರಿ ತಂದಿದೆ. ಎಲ್ಲ ಬೆಲೆಗಳು ಏರುತ್ತಿರುವಾಗ ಕೇಂದ್ರ ಸರ್ಕಾರದ ಅಂಕಿಅಂಶಗಳಲ್ಲಿ ಮಾತ್ರ ಆಹಾರ ಹಣದುಬ್ಬರ ಕುಸಿಯುತ್ತಿದೆ.
ಇನ್ನೂ ದೇಶದಲ್ಲಿ ಹೌಸಿಂಗ್ ಹಣದುಬ್ಬರ ಸ್ಥಿರವಾಗಿದ್ದು, ಶೇ.3.17 ರಷ್ಟು ದಾಖಲಾಗಿದೆ. ಶಿಕ್ಷಣ ಹಣದುಬ್ಬರ ಶೇ.4 ರಷ್ಟು ದಾಖಲಾಗಿದೆ. ಹೆಲ್ತ್ ಹಣದುಬ್ಬರ ಸ್ಪಲ್ಪ ಏರಿಕೆಯಾಗಿದ್ದು, ಶೇ.4.57 ರಷ್ಟು ದಾಖಲಾಗಿದೆ.
ಹಣದುಬ್ಬರ ಇಳಿಕೆಯು ಅಗತ್ಯ ಸರಕುಗಳು, ಆಹಾರ ಪದಾರ್ಥಗಳ ಬೆಲೆಗಳು ಇಳಿದಿರುವುದರ ಸೂಚಕ. ಹಣದುಬ್ಬರ ಇಳಿಕೆಯಾದರೇ, ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಮತ್ತಷ್ಟು ಇಳಿಕೆ ಮಾಡುವ ತೀರ್ಮಾನ ಕೈಗೊಳ್ಳುತ್ತೆ. ಹೀಗಾಗಿ 2 ತಿಂಗಳ ನಂತರ ನಡೆಯುವ ರಿಸರ್ವ್ ಬ್ಯಾಂಕ್‌ನ ದ್ವೈಮಾಸಿಕ ಹಣಕಾಸು ನೀತಿ ಸಮಿತಿಯ ಸಭೆಯಲ್ಲಿ ಯಾವ ತೀರ್ಮಾನ ಕೈಗೊಳ್ಳಲಾಗುತ್ತೆ ಎಂಬ ಕುತೂಹಲ ಸೃಷ್ಟಿಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.