/newsfirstlive-kannada/media/media_files/2025/09/21/tirupati-2025-09-21-20-46-29.jpg)
ಅಮರಾವತಿ: ವಿಶ್ವ ವಿಖ್ಯಾತ ಹಾಗೂ ಅತ್ಯಂತ ಶ್ರೀಮಂತ ದೇವರು ಎಂದು ಹೆಗ್ಗಳಿಕೆ ಪಡೆದಿರುವ ತಿರುಪತಿ ತಿಮ್ಮಪ್ಪನ ಕಾಣಿಕೆ ಹುಂಡಿಯಿಂದ 100 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಮಾಜಿ ಸಿಎಂ ವೈ.ಎಸ್​ ಜಗನ್​ ಮೋಹನ್ ರೆಡ್ಡಿ ಅವರ ಸರ್ಕಾರದಲ್ಲಿ ಕಳ್ಳತನ ಮಾಡಲಾಗಿದೆ ಎಂದು ಬಿಜೆಪಿ ಮುಖಂಡರೊಬ್ಬರು ಆರೋಪಿಸಿದ್ದಾರೆ.
ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಅವರ ಸರ್ಕಾರದ ಅವಧಿ 2019 ರಿಂದ 2024ರಲ್ಲಿ ತಿರುಪತಿ ತಿಮ್ಮಪ್ಪನ ಡೊನೆಷನ್ ಬಾಕ್ಸ್​ನಿಂದ 100 ಕೋಟಿ ರೂಪಾಯಿಗೂ ಅಧಿಕ ಹಣ ಕಳ್ಳತನ ಮಾಡಲಾಗಿದೆ. ಈ ಹಣವನ್ನು ಜಗನ್ ಮೋಹನ್ ರೆಡ್ಡಿ ಅವರ ತಾಡೆಪಲ್ಲಿಯಲ್ಲಿರುವ ನಿವಾಸ ಹಾಗೂ ವೈಎಸ್​ಆರ್ ಕಾಂಗ್ರೆಸ್​ ಸದಸ್ಯರು ಬೇರೆ ಬೇರೆ ಕಡೆ ಹೂಡಿಕೆ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡ ಭಾನು ಪ್ರಕಾಶ್ ರೆಡ್ಡಿ ಅವರು ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ಪಂದ್ಯದ ಆರಂಭದಲ್ಲೇ ಸೂರ್ಯಗೆ ಗುಡ್ ಲಕ್.. ಪಾಕ್​ ವಿರುದ್ಧ ಭಾರತದ ಪ್ಲೇಯಿಂಗ್- 11 ಹೇಗಿದೆ?
ತಿಮ್ಮಪ್ಪನ ಹುಂಡಿಯಿಂದ ಕದ್ದಂತಹ ಕೋಟಿ ಕೋಟಿ ಹಣವನ್ನು ರಿಯಲ್ ಎಸ್ಟೇಟ್​​ನಲ್ಲಿ ಹೂಡಿಕೆ ಮಾಡಲಾಗಿದೆ. ಅಲ್ಲದೇ ಜಗನ್​ ನಿವಾಸಕ್ಕೂ ಕಳುಹಿಸಲಾಗಿದೆ. ಟಿಟಿಡಿ ಇತಿಹಾಸಲ್ಲಿ ವೈಎಸ್​ಆರ್​ಸಿಪಿ ಕಾಂಗ್ರೆಸ್​ ಕಳ್ಳತನ ಮಾಡಿದಂತ ಅತ್ಯಂತ ದೊಡ್ಡ ಲೂಟಿ ಇದು. ತಿರುಪತಿ ದೇವಾಲಯದ ಅಧಿಕಾರಿ ರವಿಕುಮಾರ್ ಅವರು ಕಾಣಿಕೆ ಹುಂಡಿಯಿಂದ ಹಣ ಕಳ್ಳತನ ಮಾಡುತ್ತಿರುವ ಫೋಟೋ ಕೂಡ ಬಿಜೆಪಿ ಮುಖಂಡ ಭಾನು ಪ್ರಕಾಶ್ ರೆಡ್ಡಿ ಸಾಕ್ಷಿಯಾಗಿ ಬಿಡುಗಡೆ ಮಾಡಿದ್ದಾರೆ.
ಭಕ್ತರು ಕಾಣಿಕೆ ಹುಂಡಿಗೆ ಹಾಕಿದಂತಹ ಹಣವನ್ನೇ ಲೂಟಿ ಮಾಡಲಾಗಿದೆ. ಈ ಸಂಬಂಧ ಹೈಕೋರ್ಟ್​ನಲ್ಲಿ ವಿಚಾರಣೆ ನಡೆಯುತ್ತಿದ್ದು ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ಅಲ್ಲದೇ ಒಂದು ತಿಂಗಳ ಒಳಗೆ ಎಲ್ಲ ತನಿಖೆ ಮಾಡಬೇಕು. ಜೊತೆಗೆ ಮುಚ್ಚಿದ ಕವರ್​ನಲ್ಲಿ ವರದಿ ಒಪ್ಪಿಸಬೇಕು ಎಂದು ತಿಳಿಸಿದೆ. ಹುಂಡಿಯಿಂದ ಹಣ ತೆಗೆಯುತ್ತಿರುವುದನ್ನು ಎನ್​ಡಿಎ ಮೈತ್ರಿಯ ಟಿಡಿಪಿ ನಾಯಕ ನಾರಾ ಲೋಕೇಶ್ ಅವರು ತಮ್ಮ ಎಕ್ಸ್​ ಖಾತೆಯಲ್ಲಿ ಶೇರ್ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ