/newsfirstlive-kannada/media/media_files/2025/09/21/modi-7-2025-09-21-17-14-40.jpg)
ಕೇಂದ್ರ ಸರ್ಕಾರವು ನೀಡುವ 6000 ರೂ. ಕಿಸಾನ್ ನಿಧಿ ಯೋಜನೆಯ ಹಣಕ್ಕೆ ಬಿಹಾರ ಸರ್ಕಾರ ಹೆಚ್ಚುವರಿಯಾಗಿ 3000 ರೂಪಾಯಿಗಳನ್ನು ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇದರಿಂದ ಒಟ್ಟು 9000 ರೂಪಾಯಿಗಳು ಬಿಹಾರದ ರೈತರಿಗೆ ಸಿಗಲಿದೆ. ಬಿಹಾರವು ಇತರ ರಾಜ್ಯಗಳಿಂದ ಮೀನುಗಳನ್ನು ಆಮದು ಮಾಡಿಕೊಳ್ತಿತ್ತು. ಈಗ ಬಿಹಾರವು ಇತರ ರಾಜ್ಯಗಳಿಗೆ ಮೀನುಗಳನ್ನು ಮಾರಾಟ ಮಾಡ್ತಿದೆ ಎಂದರು. ಎನ್‌ಡಿಎ ಸರ್ಕಾರದ ನೀತಿಗಳ ಪರಿಣಾಮವಾಗಿ ಇದು ಸಂಭವಿಸಿದೆ ಎಂದು ಮೋದಿ ಹೇಳಿದರು.
ನಮ್ಮ ಸರ್ಕಾರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಸಣ್ಣ ರೈತರಿಗೆ ವಾರ್ಷಿಕವಾಗಿ 6,000 ರೂಪಾಯಿಗಳನ್ನು ನೀಡುತ್ತದೆ. ಬಿಹಾರದ ಹೊಸ ಎನ್‌ಡಿಎ ಸರ್ಕಾರವು ಇದನ್ನು 3,000 ರೂ.ಗಳಷ್ಟು ಹೆಚ್ಚಿಸಲಿದೆ. ಬಿಹಾರದಲ್ಲಿ ಜಾನುವಾರು ಸಾಕಣೆದಾರರ ಆದಾಯ ಹೆಚ್ಚಿಸಲು ‘ಬಿಹಾರ ಡೈರಿ ಮಿಷನ್’ ಸ್ಥಾಪಿಸಲಾಗುವುದು ಎಂದು ಮೋದಿ ಹೇಳಿದರು. ಬಿಹಾರದಲ್ಲಿ 243 ಸ್ಥಾನಗಳ ವಿಧಾನಸಭೆಗೆ ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮತ ಎಣಿಕೆ ನವೆಂಬರ್ 14 ರಂದು ನಡೆಯಲಿದೆ.
ಇದನ್ನೂ ಓದಿ: ಲವ್ ಬೇಡ ಮದ್ವೆ ಆಗೋಣ ಅಂದಿದ್ದಕ್ಕೆ 8 ಬಾರಿ ಚುಚ್ಚಿ ಕೊಲೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us