/newsfirstlive-kannada/media/media_files/2025/12/03/dollar-and-rupees-valuation-2025-12-03-11-41-44.jpg)
ಡಾಲರ್ ಎದುರು 90.13 ರೂಪಾಯಿಗೆ ಕುಸಿದ ರೂಪಾಯಿ ಮೌಲ್ಯ!
ಭಾರತದ ರೂಪಾಯಿ ಮೌಲ್ಯ ಬುಧವಾರ( ಡಿಸೆಂಬರ್, 3, 2025) ಮೊದಲ ಭಾರಿಗೆ ಡಾಲರ್ ಎದುರು 90 ರೂಪಾಯಿಗೆ ಕುಸಿದಿದೆ. ಅಮೆರಿಕಾದ ಡಾಲರ್ ಎದುರು ರೂಪಾಯಿ ಅಪಮೌಲ್ಯ ತೀವ್ರವಾಗಿದ್ದು, ಒಂದು ಡಾಲರ್‌ಗೆ ಭಾರತದ ರೂಪಾಯಿ ಮೌಲ್ಯ 90 ರೂಪಾಯಿ 13 ಪೈಸೆಗೆ ಕುಸಿದಿದೆ. ಇದು ಸಾರ್ವಕಾಲಿಕ ಕುಸಿತ. ದಾಖಲೆಯ ಕನಿಷ್ಠ ಮಟ್ಟಕ್ಕೆ ರೂಪಾಯಿ ಮೌಲ್ಯ ಕುಸಿದಿದೆ. ನಿನ್ನೆ ಡಾಲರ್ ಎದುರು ರೂಪಾಯಿ ಮೌಲ್ಯ 89.94 ರೂಪಾಯಿ ಇತ್ತು.
ಅಮೆರಿಕಾದ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣಗಳೇನು?
1- ಭಾರತ ಮತ್ತು ಅಮೆರಿಕಾದ ನಡುವಿನ ವ್ಯಾಪಾರ ಅನಿಶ್ಚಿತತೆ
2- ಬಂಡವಾಳದ ಹರಿವಿನಲ್ಲಿ ಕುಸಿತ
3- ಭಾರತದ ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಕುಸಿತ
4- ಭಾರತದಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ 17 ಬಿಲಿಯನ್ ಡಾಲರ್ ಬಂಡವಾಳ ಹಿಂತೆಗೆತ
5- ಮಧ್ಯಪ್ರವೇಶ ಮಾಡದ ಆರ್‌ಬಿಐ ಧೋರಣೆಯಿಂದ ರೂಪಾಯಿ ಮೌಲ್ಯ ಕುಸಿತ
6- ಬಲಿಷ್ಠ ಡಾಲರ್ ಮೌಲ್ಯ ಹಾಗೂ ಡಾಲರ್‌ಗೆ ಹೆಚ್ಚಾಗಿರುವ ಬೇಡಿಕೆ
ಈ ಎಲ್ಲ ರಣದಿಂದ ಡಾಲರ್ ಎದುರು ರೂಪಾಯಿ ಅಪಮೌಲ್ಯ ಕುಸಿದಿದೆ. ಕಳೆದ ಒಂದು ವರ್ಷದಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ಶೇ.6 ರಷ್ಟು ಕುಸಿದಿದೆ.
ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತವು ಭಾರತದ ಷೇರು ಮಾರುಕಟ್ಟೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ನಿಫ್ಟಿ ಸೂಚ್ಯಂಕ 26 ಸಾವಿರ ಪಾಯಿಂಟ್ ಗಿಂತ ಕೆಳಕ್ಕೆ ಕುಸಿದಿದೆ. ಇದು ಹೂಡಿಕೆದಾರರಲ್ಲಿ ಇರುವ ಎಚ್ಚರಿಕೆಯ ಭಾವನೆಯನ್ನು ಪ್ರತಿಬಿಂಬಿಸುತ್ತದೆ. ಇನ್ನೂ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 200 ಪಾಯಿಂಟ್ ಗಳ ಕುಸಿತ ದಾಖಲಿಸಿದೆ.
ಡಾಲರ್ ಎದುರು ರೂಪಾಯಿ ಕುಸಿತದಿಂದ ವಿದೇಶಗಳಿಂದ ಅಮದು ಮಾಡಿಕೊಳ್ಳುವ ಉತ್ಪನ್ನಗಳ ಬೆಲೆಯನ್ನು ದುಬಾರಿಯಾಗಿಸುತ್ತದೆ. ರಫ್ತು ಮಾಡಿದ ಉತ್ಪನ್ನಗಳಿಗೆ ಹೆಚ್ಚಿನ ಹಣ ಸಿಗುತ್ತೆ.
/filters:format(webp)/newsfirstlive-kannada/media/media_files/2025/12/03/dollar-and-rupees-valuation02-2025-12-03-11-42-29.jpg)
ಇನ್ನೂ ಬ್ಲೂಮ್ ಬರ್ಗ್ ಪ್ರಕಾರ, ಏಷ್ಯಾದ ಕಳಪೆ ಸಾಧನೆಯ ಕರೆನ್ಸಿ ಅಂದರೇ, ಭಾರತದ ರೂಪಾಯಿ.
ಜನಸಾಮಾನ್ಯರಿಗೇನು ತೊಂದರೆ?
ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತದಿಂದ ವಿದೇಶದಿಂದ ಅಮದು ಆಗುವ ಎಲ್ಲ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ನೀಡಬೇಕಾಗುತ್ತೆ.
ವಿದೇಶದಿಂದ ಭಾರತಕ್ಕೆ ಅಮದು ಆಗುವ ಐಪೋನ್ , ಪ್ರಿಡ್ಜ್, ಕಾರ್ ಸೇರಿದಂತೆ ಎಲ್ಲವೂ ದುಬಾರಿಯಾಗುತ್ತಾವೆ.
ಭಾರತದ ವಿದ್ಯಾರ್ಥಿಗಳು ವಿದೇಶಗಳಿಗೆ ಹೋಗಿ ವಿದ್ಯಾಭ್ಯಾಸ ಮಾಡಲು ಹೆಚ್ಚಿನ ಹಣ ಖರ್ಚು ಮಾಡಬೇಕಾಗುತ್ತೆ.
ಇನ್ನೂ 2022 ರಲ್ಲೂ ಡಾಲರ್ ಮೌಲ್ಯ ಪ್ರಬಲವಾಗಿತ್ತು. ಜಾಗತಿಕನಾದ್ಯಂತ ಬೇರೆ ದೇಶಗಳ ಕರೆನ್ಸಿ ಮೌಲ್ಯ ದುರ್ಬಲವಾಗಿತ್ತು. 2025ರ ಅಂತ್ಯದಲ್ಲಿ ಭಾರತದ ರೂಪಾಯಿ ಮೌಲ್ಯ ಮತ್ತಷ್ಟು ದುರ್ಬಲವಾಗಿದೆ.
ಆದರೇ, ಭಾರತದ ವಿದೇಶಿ ವಿನಿಮಯ ಖಜಾನೆಯಲ್ಲಿ ಈಗ ಬರೋಬ್ಬರಿ 690 ಬಿಲಿಯನ್ ಡಾಲರ್ ಇದೆ. ಆರ್‌ಬಿಐ ಈಗ ರೂಪಾಯಿ ಮೌಲ್ಯ ಕುಸಿಯದಂತೆ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಬದಲಾಗಿ ರೂಪಾಯಿ ಮೌಲ್ಯ ಕುಸಿಯಲು ಬಿಟ್ಟು ಭಾರತದಿಂದ ರಫ್ತು ಆಗುವ ಉತ್ಪನ್ನಗಳು ಅಮೆರಿಕಾದ ತೆರಿಗೆಯ ಹಿನ್ನಲೆಯಲ್ಲಿ ಹೆಚ್ಚು ಸ್ಪರ್ಧಾತ್ಮಕವಾಗುವಂತೆ ಮಾಡುವ ಪ್ಲ್ಯಾನ್ ಮಾಡಿದೆ.
ಯಾವ್ಯಾವುದು ದುಬಾರಿಯಾಗುತ್ತೆ ಗೊತ್ತಾ?
ಕಚ್ಚಾತೈಲ, ಖಾದ್ಯ ತೈಲ- ಭಾರತವು ಶೇ.90 ರಷ್ಟು ಕಚ್ಚಾತೈಲವನ್ನು ಅಮದು ಮಾಡಿಕೊಳ್ಳುತ್ತಿದೆ. ಅಡುಗೆಯ ಖಾದ್ಯ ತೈಲದ ಪೈಕಿ ಶೇ.60 ರಷ್ಟು ಅನ್ನು ಅಮದು ಮಾಡಿಕೊಳ್ಳುತ್ತಿದೆ. ದುರ್ಬಲ ರೂಪಾಯಿ ಮೌಲ್ಯದಿಂದ ಕಚ್ಚಾತೈಲ, ಖಾದ್ಯ ತೈಲ ದುಬಾರಿಯಾಗುತ್ತಾವೆ.
ಎಲೆಕ್ಟ್ರಾನಿಕ್ಸ್ ಮತ್ತು ಅಪ್ಲೆಯನ್ಸಸ್ - ವಿದೇಶದಿಂದ ಅಮದು ಮಾಡಿಕೊಳ್ಳುವ ಲ್ಯಾಪ್ ಟಾಪ್, ಪ್ರಿಡ್ಜ್, ಸ್ಮಾರ್ಟ್ ಪೋನ್ ಬೆಲೆಗಳು ಹೆಚ್ಚಾಗುತ್ತಾವೆ.
ನಿತ್ಯ ಬಳಕೆಯ ವಸ್ತುಗಳು ದುಬಾರಿ-- ಅಡುಗೆ ಎಣ್ಣೆ, ಎಲ್‌ಪಿಜಿ, ಪೆಟ್ರೋಲ್ ಸೇಿರಿದಂತೆ ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ದುಬಾರಿಯಾಗುತ್ತೆ. ಮಧ್ಯಮ ವರ್ಗ, ಕೆಳ ವರ್ಗಕ್ಕೂ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತದಿಂದ ಹೊಡೆತ ಬೀಳುತ್ತೆ.
ವಿದೇಶ ಪ್ರವಾಸ ದುಬಾರಿ-- ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿರುವುದಿರಂದ ವಿದೇಶ ಪ್ರವಾಸ ದುಬಾರಿಯಾಗುತ್ತೆ. ವಿದೇಶಕ್ಕೆ ಕುಟುಂಬ ಸಮೇತ ಪ್ರವಾಸ ಹೋದಾಗ, ಹೆಚ್ಚಿನ ರೂಪಾಯಿ ನೀಡಿ ಡಾಲರ್ ಖರೀದಿಸಬೇಕಾಗುತ್ತೆ.
ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತದಿಂದ ಯಾರಿಗೆ ಲಾಭ?
ರಫ್ತುದಾರರಿಗೆ ಭರ್ಜರಿ ಲಾಭ- ಭಾರತದಿಂದ ವಿದೇಶಗಳಿಗೆ ರಫ್ತು ಮಾಡುವವರಿಗೆ ಹೆಚ್ಚಿನ ರೂಪಾಯಿ ಸಿಗುತ್ತೆ. ಈ ಮೊದಲು 1 ಡಾಲರ್ ಗೆ 85 ರೂಪಾಯಿ ಸಿಗುತ್ತಿದ್ದವರಿಗೆ ಈಗ 90 ರೂಪಾಯಿ ಸಿಗುತ್ತೆ. ಇದರಿಂದ 5 ರೂಪಾಯಿ ಜಾಸ್ತಿ ಸಿಕ್ಕಂತೆ ಆಗುತ್ತೆ. ಭಾರತದಿಂದ ವಿದೇಶಗಳಿಗೆ ಐ.ಟಿ. ಸೇವೆ ರಫ್ತು ಮಾಡಲಾಗುತ್ತೆ. ಹೀಗಾಗಿ ಐ.ಟಿ. ವಲಯಕ್ಕೆ ಭರ್ಜರಿ ಲಾಭವಾಗುತ್ತೆ.
ಫಾರ್ಮಾ ವಲಯಕ್ಕೂ ಲಾಭ- ಭಾರತದ ಫಾರ್ಮಾ ಕಂಪನಿಗಳು ತಮ್ಮ ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡುತ್ತಾವೆ. ಈ ಫಾರ್ಮಾ ಕಂಪನಿಗಳಿಗೂ ರೂಪಾಯಿ ಮೌಲ್ಯ ಕುಸಿತದಿಂದ ಲಾಭವಾಗುತ್ತೆ.
ಕೃಷಿ ಉತ್ಪನ್ನ ರಫ್ತುನಿಂದಲೂ ಲಾಭ- ಭಾರತದ ಕೃಷಿ ಉತ್ಪನ್ನಗಳನ್ನು ವಿದೇಶಕ್ಕೆ ರಫ್ತು ಮಾಡುವವರಿಗೂ ಭರ್ಜರಿ ಲಾಭ ಆಗಲಿದೆ. ರಫ್ತುದಾರರಿಗೆ ಹೆಚ್ಚಿನ ಹಣ ರೂಪಾಯಿ ಮೌಲ್ಯ ಕುಸಿತದಿಂದ ಸಿಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us