/newsfirstlive-kannada/media/media_files/2025/11/20/5th-generation-fighter-jet-technology-2025-11-20-15-27-37.jpg)
5ನೇ ತಲೆಮಾರಿನ ಫೈಟರ್ ಜೆಟ್ ತಂತ್ರಜ್ಞಾನ ನೀಡಲು ರಷ್ಯಾ ರೆಡಿ!
ಭಾರತದ ಸಾರ್ವಕಾಲಿಕ ಸ್ನೇಹಿ ರಾಷ್ಟ್ರ ರಷ್ಯಾ ಭಾರತಕ್ಕೆ ಈಗ ದೊಡ್ಡ ಆಫರ್ ನೀಡಿದೆ. ಭಾರತಕ್ಕೆ 5ನೇ ತಲೆಮಾರಿನ ಫೈಟರ್ ಜೆಟ್ ಹೊಂದಬೇಕೆಂಬ ಆಸೆ, ಕನಸು, ಗುರಿ ಇದೆ. ಇದನ್ನು ಸ್ವದೇಶಿಯಾಗಿ ಹೊಂದುವ, ಅಭಿವೃದ್ದಿಪಡಿಸುವ ಕೆಲಸ ಕೂಡ ನಡೆಯುತ್ತಿದೆ. ಇದರ ಮಧ್ಯೆ ರಷ್ಯಾ ದೇಶವು 5ನೇ ಜನರೇಷನ್ ಫೈಟರ್ ಜೆಟ್ ತಂತ್ರಜ್ಞಾನವನ್ನು ಭಾರತಕ್ಕೆ ಅನಿರ್ಬಂಧಿತವಾಗಿ ನೀಡುವ ಆಫರ್ ನೀಡಿದೆ. ಸುಖೋಯ್-57 ಫೈಟರ್ ಜೆಟ್ ಐದನೇ ಜನರೇಷನ್ ಫೈಟರ್ ಜೆಟ್ ಆಗಿದೆ. ಇದನ್ನು ರಷ್ಯಾ ಈಗಾಗಲೇ ಉತ್ಪಾದಿಸಿದೆ. ಅದರ ತಂತ್ರಜ್ಞಾನವನ್ನು ಅನಿರ್ಬಂಧಿತವಾಗಿ ಭಾರತಕ್ಕೆ ನೀಡುವ ಮಿಲಿಟರಿ ಪ್ರಸ್ತಾವವನ್ನು ರಷ್ಯಾ, ಭಾರತದ ಮುಂದೆ ಇರಿಸಿದೆ. ಮುಂದಿನ ತಿಂಗಳು ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಅದಕ್ಕೂ ಮುನ್ನ ರಷ್ಯಾ, ಭಾರತಕ್ಕೆ ಈ ಆಫರ್ ನೀಡಿದೆ,
ರಷ್ಯಾದ ಮಿಲಿಟರಿ ಪ್ರಸ್ತಾವದ ಪ್ರಕಾರ, ಪ್ರಾರಂಭಿಕ ಹಂತದಲ್ಲಿ ರಷ್ಯಾ ದೇಶವು ಸುಖೋಯ್-57 ಫೈಟರ್ ಜೆಟ್ ಗಳನ್ನು ರಷ್ಯಾದಲ್ಲಿ ಉತ್ಪಾದಿಸಿ, ಭಾರತಕ್ಕೆ ಪೂರೈಸುತ್ತೆ. ಅದೇ ವೇಳೆ ಹಂತ ಹಂತವಾಗಿ ಭಾರತಕ್ಕೆ 5ನೇ ತಲೆಮಾರಿನ ಫೈಟರ್ ದೆಟ್ ತಂತ್ರಜ್ಞಾನವನ್ನು ವರ್ಗಾಯಿಸಿ ಭಾರತದಲ್ಲೇ ಉತ್ಪಾದನೆಯಾಗುವಂತೆ ಮಾಡಲಾಗುತ್ತೆ.
ಇಷ್ಟೇ ಅಲ್ಲ, ರಷ್ಯಾ ದೇಶವು ಭಾರತಕ್ಕೆ ತನ್ನ ಬಳಿ ಇರುವ ಸಿಂಗಲ್ ಇಂಜಿನ್ ಸ್ಟೀಲ್ತ್ ಫೈಟರ್ ಏರ್ ಕ್ರಾಫ್ಟ್ ಅನ್ನು ನೀಡಲು ಸಿದ್ದವಾಗಿದೆ. ಭಾರತ, ಈಗ ಖರೀದಿಗೆ ಸಿದ್ದವಾಗಬೇಕು.
ರಷ್ಯಾ ದೇಶವು ಭಾರತ ಹೊರತುಪಡಿಸಿ ಬೇರೆ ಯಾವ ದೇಶಕ್ಕೂ ಈ ಮಟ್ಟಿಗೆ ತನ್ನ ಡಿಫೆನ್ಸ್ ತಂತ್ರಜ್ಞಾನವನ್ನು ವರ್ಗಾಯಿಸಿಲ್ಲ. ಒಂದು ವೇಳೆ ಭಾರತವು, ರಷ್ಯಾದ ಪ್ರಸ್ತಾವವನ್ನು ಒಪ್ಪಿಕೊಂಡರೇ, ಪಾಶ್ಚಿಮಾತ್ಯ ರಾಷ್ಟ್ರಗಳ ಬಳಿ ಇರುವ ಮಿಲಿಟರಿ ಶಕ್ತಿ ಸಾಮರ್ಥ್ಯವನ್ನು ಭಾರತವು ಹೊಂದಿದಂತೆ ಆಗುತ್ತೆ. ಪಾಶ್ಚಿಮಾತ್ಯ ರಾಷ್ಟ್ರಗಳು 5ನೇ ತಲೆಮಾರಿನ ಫೈಟರ್ ಜೆಟ್ ತಂತ್ರಜ್ಞಾನವನ್ನು ಭಾರತಕ್ಕೆ ನೀಡಲು ಯಾವಾಗಲೂ ನಿರಾಕರಿಸುತ್ತಿವೆ. ಆದರೇ, ರಷ್ಯಾ ದೇಶ ಮಾತ್ರವೇ 5ನೇ ತಲೆಮಾರಿನ ಫೈಟರ್ ಜೆಟ್ ತಂತ್ರಜ್ಞಾನ ನೀಡಲು ಮುಂದೆ ಬಂದಿದೆ.
/filters:format(webp)/newsfirstlive-kannada/media/media_files/2025/11/20/5th-generation-fighter-jet-technology02-2025-11-20-15-29-40.jpg)
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us