/newsfirstlive-kannada/media/media_files/2025/12/04/putin-arrives-in-india-and-modi-welcome-2025-12-04-20-23-29.jpg)
ರಷ್ಯಾ ಅಧ್ಯಕ್ಷ ಪುಟಿನ್ ರನ್ನು ಸ್ವಾಗತಿಸಿದ ಪ್ರಧಾನಿ ಮೋದಿ
ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ 2 ದಿನಗಳ ಭಾರತ ಭೇಟಿಗಾಗಿ ಇಂದು ಸಂಜೆ ರಾಷ್ಟ್ರ ರಾಜಧಾನಿ ನವದೆಹಲಿಗೆ ಆಗಮಿಸಿದರು . ಶಿಷ್ಟಾಚಾರ ಬದಿಗೊತ್ತಿದ ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಪಾಲಂ ಏರ್ ಪೋರ್ಟ್ ಗೆ ತೆರಳಿ ತಮ್ಮ ಸ್ನೇಹಿತ ವಾಡ್ಲಿಮಿರ್ ಪುಟಿನ್ ಅವರನ್ನು ಆತ್ಮೀಯವಾಗಿ ಬಿಗಿದಪ್ಪಿ ಸ್ವಾಗತಿಸಿದ್ದರು.
ಬಳಿಕ ಒಂದೇ ಕಾರಿನಲ್ಲಿ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಹಾಗೂ ಪ್ರಧಾನಿ ಮೋದಿ ಅವರು ಏರ್ ಪೋರ್ಟ್ ನಿಂದ ಐಟಿಸಿ ಮೌರ್ಯ ಹೋಟೇಲ್‌ಗೆ ಆಗಮಿಸಿದ್ದರು.
ಭಾರತ-ಅಮೆರಿಕ ಸಂಬಂಧಗಳಲ್ಲಿ ಕುಸಿತ, ಮಾಸ್ಕೋ ಮೇಲೆ ಹೊಸ ಪಾಶ್ಚಿಮಾತ್ಯ ನಿರ್ಬಂಧಗಳು, ಉಕ್ರೇನ್ ಯುದ್ಧವನ್ನು ಕೊನೆಗೊಳಿಸಲು ಅಮೆರಿಕದ ಹೊಸ ಪ್ರಯತ್ನಗಳು ಮತ್ತು ರಷ್ಯಾದೊಂದಿಗಿನ ಭಾರತದ ಇಂಧನ ಸಂಬಂಧಗಳ ಮೇಲೆ ಹೆಚ್ಚುತ್ತಿರುವ ಒತ್ತಡದ ಪರಿಸ್ಥಿತಿಯಲ್ಲಿ ಪುಟಿನ್ ಮತ್ತು ಮೋದಿ ಭೇಟಿಯಾಗುತ್ತಿದ್ದಾರೆ. ಅಸಾಧಾರಣ ಜಾಗತಿಕ ಭೌಗೋಳಿಕ ರಾಜಕೀಯ ಗೊಂದಲದ ಸಮಯದಲ್ಲಿ ಎರಡು ರಾಷ್ಟ್ರಗಳ ಮುಖ್ಯಸ್ಥರು ಭೇಟಿಯಾಗುತ್ತಿರುವುದು ವಿಶೇಷ .
ಕಳೆದ ವರ್ಷ ಜುಲೈನಲ್ಲಿ ಪ್ರಧಾನಿ ಮೋದಿ ಮಾಸ್ಕೋಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರಷ್ಯಾದ ನಾಯಕ ನೀಡಿದ ಆತಿಥ್ಯಕ್ಕೆ ಪ್ರತಿಯಾಗಿ ಪ್ರಧಾನಿ ಮೋದಿ, ಪುಟಿನ್‌ಗೆ ಈಗ ಖಾಸಗಿ ಭೋಜನ ಕೂಟ ಆಯೋಜಿಸಲಿದ್ದಾರೆ.
ಶೃಂಗಸಭೆಯು ಶುಕ್ರವಾರ ನಡೆಯಲಿದ್ದು, ಅದಕ್ಕೂ ಮೊದಲು ರಾಷ್ಟ್ರಪತಿ ಭವನದಲ್ಲಿ ಔಪಚಾರಿಕ ಸ್ವಾಗತ ನಡೆಯಲಿದೆ . ನಂತರ ಭಾರತದ ಅತ್ಯುನ್ನತ ಮಟ್ಟದ ದ್ವಿಪಕ್ಷೀಯ ಕಾರ್ಯಕ್ರಮಗಳಿಗೆ ಸಾಂಪ್ರದಾಯಿಕ ಸ್ಥಳವಾದ ಹೈದರಾಬಾದ್ ಹೌಸ್‌ನಲ್ಲಿ ವರ್ಕಿಂಗ್ ಲಂಚ್ ಕೂಡ ನಡೆಯಲಿದೆ. ಅಧ್ಯಕ್ಷ ಪುಟಿನ್ ಅವರು ಮಹಾತ್ಮ ಗಾಂಧಿಯವರಿಗೆ ಗೌರವ ಸಲ್ಲಿಸಲು ಬೆಳಿಗ್ಗೆ ರಾಜ್‌ಘಾಟ್‌ಗೆ ಭೇಟಿ ನೀಡಲಿದ್ದಾರೆ.
/filters:format(webp)/newsfirstlive-kannada/media/media_files/2025/12/04/putin-arrives-in-india-and-modi-welcome-1-2025-12-04-20-26-06.jpg)
ರಷ್ಯಾ ಅಧ್ಯಕ್ಷರು ನಂತರ ರಷ್ಯಾದ ರಾಜ್ಯ ಪ್ರಸಾರಕರಾದ ಹೊಸ ಭಾರತ ಮೂಲದ ಚಾನೆಲ್ ಅನ್ನು ಉದ್ಘಾಟಿಸಲಿದ್ದಾರೆ. ನಂತರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಗೌರವಾರ್ಥವಾಗಿ ಆಯೋಜಿಸಲಾದ ಔತಣಕೂಟದಲ್ಲಿ ಭಾಗವಹಿಸಲಿದ್ದಾರೆ. ಅವರು ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ಭಾರತದಿಂದ ನಿರ್ಗಮಿಸುವ ನಿರೀಕ್ಷೆಯಿದೆ.
ರಷ್ಯಾ ಅಧ್ಯಕ್ಷ ಪುಟಿನ್ ಭಾರತ ಭೇಟಿಯ ವೇಳೆ, ಭಾರತ- ರಷ್ಯಾ ರಕ್ಷಣಾ ಸಂಬಂಧವನ್ನು ಬಲಪಡಿಸುವ ಬಗ್ಗೆ ಮಾತುಕತೆಗಳು ನಡೆಯಲಿವೆ. ರಷ್ಯಾ ದೇಶವು ಭಾರತಕ್ಕೆ ಬಾಕಿ ಇರುವ ಎಸ್-400 ವಾಯು ರಕ್ಷಣಾ ವ್ಯವಸ್ಥೆಯನ್ನು ಆದಷ್ಟು ಬೇಗ ಪೂರೈಸಬೇಕೆಂದು ಭಾರತದ ಒತ್ತಾಯಿಸಲಿದೆ. ಜೊತೆಗೆ ಎಸ್-500 ಏರ್ ಡಿಫೆನ್ಸ್ ಸಿಸ್ಟಮ್ ಅನ್ನು ರಷ್ಯಾದಿಂದ ಖರೀದಿಸುವ ಬಗ್ಗೆ ಭಾರತ- ರಷ್ಯಾ ನಾಯಕರ ನಡುವೆ ಮಾತುಕತೆ ನಡೆಯಲಿದೆ. ರಷ್ಯಾದಿಂದ ಸುಖೋಯ್-57 ಫೈಟರ್ ಜೆಟ್ ಖರೀದಿ ಬಗ್ಗೆಯೂ ಮಾತುಕತೆಗಳು ನಡೆಯಲಿವೆ. ರಷ್ಯಾ ದೇಶವು 5ನೇ ಜನರೇಷನ್ ಫೈಟರ್ ಜೆಟ್ ತಂತ್ರಜ್ಞಾನವನ್ನು ಭಾರತಕ್ಕೆ ವರ್ಗಾಯಿಸಲು ಆಸಕ್ತಿ ಹೊಂದಿದೆ. ಜೊತೆಗೆ ಸುಖೋಯ್-57 ಫೈಟರ್ ಜೆಟ್ ಅನ್ನು ಭಾರತದಲ್ಲೇ ಉತ್ಪಾದಿಸಲು ತಂತ್ರಜ್ಞಾನ ವರ್ಗಾವಣೆ ಮಾಡಲು ಕೂಡ ಆಸಕ್ತಿ ಹೊಂದಿದೆ. ಈ ಬಗ್ಗೆಯೂ ಪ್ರಧಾನಿ ಮೋದಿ ಹಾಗೂ ರಷ್ಯಾ ಅಧ್ಯಕ್ಷ ಪುಟಿನ್ ಮಧ್ಯೆ ಮಾತುಕತೆ ನಡೆಯಲಿದೆ.
ಇನ್ನೂ ಅಮೆರಿಕಾದ ಒತ್ತಡದಿಂದಾಗಿ ಭಾರತವು ಈಗ ರಷ್ಯಾದಿಂದ ಕಚ್ಛಾತೈಲ ಖರೀದಿಸುತ್ತಿಲ್ಲ. ಹೀಗಾಗಿ ಪರ್ಯಾಯ ಮಾರ್ಗೋಪಾಯಗಳ ಬಗ್ಗೆಯೂ ಚರ್ಚೆ ನಡೆಯುವ ನಿರೀಕ್ಷೆ ಇದೆ.
ಭಾರತದ ಪ್ರಧಾನಿ ಮೋದಿ ಅವರು ಯಾವುದೇ ಒತ್ತಡಗಳಿಗೆ ಮಣಿಯುವ ನಾಯಕ ಅಲ್ಲ ಎಂದು ರಷ್ಯಾದಿಂದ ಹೊರಡುವ ಮುನ್ನ ಪುಟಿನ್ ಭಾರತದ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us